Mangaluru: ನ್ಯಾಯವಾದಿಗಳ ವಿಚಾರ ಮಂಡನೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ದಾರಿ: ಇಂದ್ರೇಶ್
ಕಾನೂನು ಹಬ್ಬದಲ್ಲಿ ಭಾಗವಹಿಸುವುದರಿಂದ ಅಗಾಧ ಅನುಭವ ಪಡೆಯಲು ಸಾಧ್ಯ
Team Udayavani, Jul 29, 2024, 2:45 PM IST
ಮಂಗಳೂರು: ಹಿರಿಯ ನ್ಯಾಯವಾದಿಗಳು ಕೆಲವು ಪ್ರಕರಣಗಳನ್ನು ಕಾನೂನು ಚೌಕಟ್ಟಿನಲ್ಲಿ ಅವಲೋಕಿಸುವ
ಸಾಧ್ಯಾಸಾಧ್ಯತೆಗಳನ್ನು ಅರಿತುಕೊಳ್ಳಲು ಕಾನೂನು ವಿದ್ಯಾರ್ಥಿಗಳು ಸುಪ್ರೀಂಕೋರ್ಟ್, ಹೈಕೋರ್ಟ್‌ಗೆ ಭೇಟಿ ನೀಡುವುದು ಅಗತ್ಯ ಎಂದು ಹೈಕೋರ್ಟ್ ನ್ಯಾಯಾಧೀಶರಾದ ಇಂಗಲಗುಪ್ಪೆ ಸೀತಾರಾಮಯ್ಯ ಇಂದ್ರೇಶ್ ಹೇಳಿದರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ರವಿವಾರ ಜರಗಿದ ರಾಷ್ಟ್ರೀಯ ಕಾನೂನು ಹಬ್ಬ “ಲೆಕ್ಸ್ ಅಲ್ಟಿಮಾ-2024’ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸುಪ್ರಿಂಕೋರ್ಟ್ ನಲ್ಲಿ ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ, ಚಿದಂಬರಂ, ಅಟರ್ನಿ ಜನರಲ್ ವೆಂಕಟರಮಣಿ ಮುಂತಾದವರ ವಾದಗಳನ್ನು ಆಲಿಸಬೇಕು. ಅವರು ಮಂಡಿಸುವ ವಿಚಾರಗಳು ಭಿನ್ನವಾಗಿದ್ದು, ಕಾನೂನು ಪರಿಧಿಯ ವಿಸ್ತಾರವನ್ನು ಅರಿತುಕೊಳ್ಳಲು ಸಾಧ್ಯವಾಗಲಿದೆ ಎಂದವರು ಹೇಳಿದರು.
ಕಾನೂನು ಹಬ್ಬದಲ್ಲಿ ಭಾಗವಹಿಸುವುದರಿಂದ ಅಗಾಧ ಅನುಭವ ಪಡೆಯಲು ಸಾಧ್ಯ. ತಮ್ಮ ವೃತ್ತಿಗೆ ಸಂಬಂಧಿಸಿ ವಿಸ್ತಾರವಾದ
ವಿಷಯಗಳನ್ನು ಕಲಿಯುವ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳು ಬಹುಮಾನಗಳತ್ತ ಚಿತ್ತ ಹರಿಸದೆ ಸಿಗುವ ಅವಕಾಶವನ್ನು ಬಳಸಿಕೊಳ್ಳಬೇಕು. ತಮ್ಮ ವೃತ್ತಿ ಜೀವನಕ್ಕೆ ಕಾನೂನು ಹಬ್ಬಗಳು ಬಾಗಿಲು ತೆರೆಸುತ್ತವೆ ಎಂದು ಹೇಳಿದರು.
ಪ್ರಾಂಶುಪಾಲ ಡಾ| ತಾರಾನಾಥ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಡಾ| ಸುಮಾ ಸುರೇಶ್ ಕೋಗಿಲಗೇರಿ ವಂದಿಸಿದರು. ನೇಹಾ ರಾಮಕೃಷ್ಣ ನಿರೂಪಿಸಿದರು. ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ, ಕಾಲೇಜು ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ದೇವರಾಜ್ ಕೆ., ಪೋಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್, ಸಹಾಯಕ ಪ್ರಾಧ್ಯಾಪಕ ಪುಷ್ಪರಾಜ್, ಮುಖ್ಯ ಕಾರ್ಯದರ್ಶಿ ಪ್ರತೀಕ್ಷಾ ಪೈ, ವಿದ್ಯಾರ್ಥಿ ಕಾರ್ಯದರ್ಶಿ ಸಚಿನ್ ಮಾದೇವ್ ಹೆಗ್ಡೆ, ವಿದ್ಯಾರ್ಥಿ ಸಂಯೋಜಕರಾದ ಮಯೂರ್
ಎಂ. ಭಟ್, ಶ್ರೀವರ ಪಿ., ಭಾರ್ಗವಿ ಶಬರಾಯ, ಅಶ್ವಥಿ ಕೃಷ್ಣ ಎಂ.ಪಿ. ಉಪಸ್ಥಿತರಿದ್ದರು.
ವೈಕುಂಠ ಬಾಳಿಗ ಲಾ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಮೂರು ದಿನ ನಡೆದ ಕಾನೂನು ಹಬ್ಬದಲ್ಲಿ 43 ಕಾನೂನು ಕಾಲೇಜುಗಳ 162 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಣಕು ನ್ಯಾಯಾಲಯ, ಜಾಮೀನು ಅರ್ಜಿ ಸ್ಪರ್ಧೆ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ, ಕಾನೂನು ರಸಪ್ರಶ್ನೆ, ಶಾಸನ ರಚನೆ, ಕಾನೂನು ಸಲಹೆ, ತೀರ್ಪು ಬರೆಯುವ ಸ್ಪರ್ಧೆ, ಕಾನೂನು ಚರ್ಚೆ ಸಹಿತ ವಿವಿಧ ಸ್ಪರ್ಧೆಗಳಲ್ಲಿ ವೈಕುಂಠ ಬಾಳಿಗ ಲಾ ಕಾಲೇಜು ಉಡುಪಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಹಾಗೂ ಬಿಎಂಎಸ್ ಲಾ ಕಾಲೇಜು ಬೆಂಗಳೂರು ರನ್ನರ್ ಪ್ರಶಸ್ತಿಯನ್ನು ಹಂಚಿಕೊಂಡವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.