ವಂಶೋದಯ v/s ಅಂತ್ಯೋದಯ
ಕೆಲವರಿಗೆ ಕುಟುಂಬವೇ ಮುಖ್ಯ; ಬಿಜೆಪಿಗೆ ದೇಶವೇ ಮುಖ್ಯ
Team Udayavani, Apr 14, 2019, 6:30 AM IST
ಮಂಗಳೂರು: ಈ ಚುನಾವಣೆ ವಂಶೋದಯ ಮತ್ತು ಅಂತ್ಯೋದಯ ನಡುವೆ ನಡೆಯುತ್ತಿದೆ. ಕೆಲವರಿಗೆ ವಂಶದ ಅಭಿವೃದ್ಧಿಯೇ ಮುಖ್ಯವಾಗಿದ್ದರೆ ಬಿಜೆಪಿಗೆ ಅಭ್ಯುದಯವೇ ಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಂಗಳೂರಿನ ಕೇಂದ್ರ ಮೈದಾನದಲ್ಲಿ ಶನಿವಾರ ಬಿಜೆಪಿ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮತ್ತಿತರ ಪಕ್ಷಗಳು ವಂಶೋದಯದ ಬಗ್ಗೆಯೇ ಗಮನವನ್ನು ಕೇಂದ್ರೀಕರಿಸಿವೆ. ಆದರೆ ಬಿಜೆಪಿಯು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾ ನತೆಯ ಲಾಭ ದೊರೆಯಬೇಕೆಂಬ ಅಂತ್ಯೋದಯದ ತಣ್ತೀವನ್ನು ಹೊಂದಿದೆ. ವಂಶೋ ದಯದವರು ಅವರ ಕುಟುಂಬದ ಹಿತಾಸಕ್ತಿ ಯನ್ನೇ ನೋಡಿಕೊಳ್ಳುವರು. ಅವರ ಕುಟುಂಬಿಕರನ್ನು ಮಾತ್ರ ಅಧಿಕಾರಕ್ಕೆ ತರಲು ಯತ್ನಿಸುವರು ಎಂದರು.
ವಿಪಕ್ಷೀಯರು ಭ್ರಷ್ಟಾಚಾರದ ಮೂಲಕ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದರು. ಸ್ವತಂತ್ರ ಭಾರತದ ಆರಂಭಿಕ ವರ್ಷಗಳಿಂದಲೇ ಇವರು ದೇಶದಲ್ಲಿ ಅರಾಜಕತೆ ಅಥವಾ ಆರ್ಥಿಕ ಸಂಕಷ್ಟ ಉಂಟು ಮಾಡುವ ಪ್ರಯತ್ನದಲ್ಲಿ ನಿರತರಾದರು ಎಂದು ಟೀಕಿಸಿದರು.
ಆದರೆ ಬಿಜೆಪಿಯ ಅಂತ್ಯೋದಯ ಭ್ರಷ್ಟಾಚಾರ ಮುಕ್ತ, ಸರ್ವರಿಗೂ ಸಮಪಾಲು- ಸಮಬಾಳು ಎಂಬ ಧ್ಯೇಯಕ್ಕೆ ಬದ್ಧವಾಗಿದೆ. ಪರಂಪರೆ, ಸಂಸ್ಕೃತಿ, ಸಂಪ್ರದಾಯಗಳನ್ನು ಮರೆತರೆ ಆ ದೇಶ ಸಾಂಸ್ಕೃತಿಕವಾಗಿ ಮುನ್ನಡೆ ಯಲು ಸಾಧ್ಯವಿಲ್ಲ. ದೇಶದ ಪರಂಪರೆಗೆ ಆದ್ಯತೆಯ ಬದ್ಧತೆಯನ್ನು ಬಿಜೆಪಿ ಹೊಂದಿದೆ ಎಂದು ಹೇಳಿದರು.
ಬಲಿಷ್ಠ ಮತ್ತು ಭ್ರಷ್ಟಾಚಾರ ಮುಕ್ತ ಹೊಸ ಭಾರತದ ನಿರ್ಮಾಣಕ್ಕಾಗಿ ರಾಷ್ಟ್ರೀಯ ಚಿಂತನೆಯ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳನ್ನೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆಯ್ಕೆ ಮಾಡಿ ಎಂದರು.
ವಿಕೃತ ವಿಪಕ್ಷೀಯರು
ದೇಶ ರಕ್ಷಣೆಗೆ ಸೈನಿಕರು ಮಾಡುತ್ತಿರುವ ಸೇವೆಗೆ ವಿಪಕ್ಷೀಯರು ಸಾಕ್ಷ é ಕೇಳುತ್ತಿದ್ದಾರೆ. ಸೇನಾ ಮುಖ್ಯಸ್ಥರನ್ನೇ ನಿಂದಿಸುತ್ತಿದ್ದಾರೆ. ಇಂತಹ ವಿಕೃತ ಮನೋಭಾವದಿಂದ ಅವರು ದೇಶವನ್ನು ಸಂಕಷ್ಟಕ್ಕೆ ದೂಡಲು ಪ್ರಯತ್ನಿಸುತ್ತಿದ್ದಾರೆ. ಇವರಿಗೆ ನಾಚಿಕೆ ಯಾಗಬೇಕಲ್ಲವೇ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು.
ಅಬ್ದುಲ್ ಕಲಾಂ, ಡಾ| ರಾಧಾಕೃಷ್ಣನ್‌ರಂತಹ ಅಪ್ರತಿಮ ಸಾಧಕರಿಗೆ ನಮ್ಮಲ್ಲಿ ಯಾವುದೇ ಸ್ಮಾರಕಗಳಿಲ್ಲ. ಈ ಎಲ್ಲ ವಿಚಾರಗಳನ್ನು ನಾವು ಗಮನಿಸಿದ್ದೇವೆ.
ಜಲಿಯನ್‌ವಾಲಾಬಾಗ್ ದುರಂತಕ್ಕೆ ಈಗ 100 ವರ್ಷ. ಅಂದು ಹುತಾತ್ಮರಾದವರಿಗೆಲ್ಲ ನಾನು ಶ್ರದ್ಧಾಂಜಲಿ ಸಮರ್ಪಿಸುತ್ತಿದ್ದೇನೆ ಎಂದರು.
ಮೀನುಗಾರರ ಹಿತರಕ್ಷಣೆಗೆ ಪ್ರತ್ಯೇಕ ಸಚಿವಾಲಯವನ್ನೇ ರಚಿಸಿದ್ದೇವೆ. ಆಳ ಸಮುದ್ರ ಮೀನುಗಾರಿಕೆಗೆ ಆಧುನಿಕ ತಂತ್ರಜ್ಞಾನ ಸಹಿತ ಹಲವು ನೆರವು ಕೊಡುತ್ತಿದ್ದೇವೆ. ಅಂತ್ಯೋದಯ, ಆಧಾರ್, ಜನಧನ, ಡಿಜಿಟಲ್ ಇತ್ಯಾದಿ ಸೇವೆಗಳು ಕ್ರಾಂತಿಕಾರಕ ಎಂದು ಜಗತ್ತೇ ಕೊಂಡಾಡುತ್ತಿದೆ ಎಂದರು.
ರಾಜಕೀಯ, ಚುನಾವಣೆ, ಅಧಿಕಾರ, ಸರಕಾರ ಇತ್ಯಾದಿಗಳ ಸಹಿತ ಪ್ರಬಲ ಮತ್ತು ಸಾಂಸ್ಕೃತಿಕ ವೈಭವದ ದೇಶ ಪ್ರಸ್ತುತವಾಗುತ್ತದೆ. ಕಳೆದ 5 ವರ್ಷಗಳಲ್ಲಿ ಇಂತಹ ನಿರ್ಣಾಯಕ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿಸಿದ ಕರ್ನಾಟಕ ಸಹಿತ ದೇಶದ ಜನತೆಗೆ ಮಂಗಳೂರಿನ ಈ ನೆಲದಿಂದ ತಾನು ಕೃತಜ್ಞತೆ ಅರ್ಪಿಸುವುದಾಗಿ ಮೋದಿ ವಿವರಿಸಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಕೂಡ ಅಪೂರ್ವ ಪರಂಪರೆಯಿದೆ. ಇದು ಬ್ಯಾಂಕಿಂಗ್ ಕ್ಷೇತ್ರದ ತವರೂರು. ಆದರೆ ಕಾಂಗ್ರೆಸ್ ಸಹಿತ ವಿಪಕ್ಷೀಯರು ಕಮಿಷನ್ ಆಧಾರಿತ ಭ್ರಷ್ಟಾಚಾರದ ಮೂಲಕ ಹಾಳುಗೆಡಹಿದರು. ಅದನ್ನೀಗ ನಮ್ಮ ಸರಕಾರ ಸರಿಪಡಿಸುತ್ತಿದೆ. ಕೇರಳದಲ್ಲಿ ಅಲ್ಲಿನ ಕಮ್ಯುನಿಸ್ಟ್ ಸರಕಾರ ಯಾರಾದರೂ ಶಬರಿಮಲೆ ಸ್ವಾಮಿ ಅಯ್ಯಪ್ಪ ಎಂದರೆ ಕೇಸು ಜಡಿಯುತ್ತದೆ. ಬಿಜೆಪಿ ಅಭ್ಯರ್ಥಿಗಳ ಮೇಲೂ ಕೇಸು ಜಡಿದು ಜೈಲಿಗೆ ಹಾಕಲಾಯಿತು. ಇದು ಪ್ರಜಾತಂತ್ರವೇ ? ಎಂದು ಪ್ರಶ್ನಿಸಿದರು. ಮೋದಿಯವರು ಟೆಲಿಪ್ರಾಂಪ್ಟರ್ ಬಳಸಿ ಭಾಷಣ ಮಾಡಿದರು.
ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಸ್ವಾಗತಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ. ನಿರೂಪಿಸಿದರು. ಜಿಲ್ಲಾ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಸಹಪ್ರಭಾರಿ ಪ್ರತಾಪಸಿಂಹ ನಾಯಕ್, ಶಾಸಕರಾದ ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ, ಉಮನಾಥ ಕೋಟ್ಯಾನ್, ಹರೀಶ್ ಪೂಂಜ, ಅಂಗಾರ, ರಾಜೇಶ್ ನಾೖಕ್ ಉಳಿಪಾಡಿ, ರಘಪತಿ ಭಟ್, ಲಾಲಾಜಿ ಮೆಂಡನ್, ಸುಕುಮಾರ್ ಶೆಟ್ಟಿ , ಕ್ಯಾ| ಗಣೇಶ್ ಕಾರ್ಣಿಕ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಟ್ಟಾರು ರತ್ನಾಕರ ಹೆಗ್ಡೆ, ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.