ಸಮಸ್ಯೆ ನಡುವೆ ಪುರಸಭೆ ಮಾರುಕಟ್ಟೆ

ಮೂಡುಬಿದಿರೆ: ತರಕಾರಿ ಮಾರುಕಟ್ಟೆಗೆ ಶೌಚಾಲಯವಿಲ್ಲ

Team Udayavani, Oct 20, 2022, 11:18 AM IST

8

ಮೂಡುಬಿದಿರೆ: ಪೇಟೆಯಿಂದ ತಾತ್ಕಾಲಿಕವಾಗಿ ಸ್ವರಾಜ್ಯ ಮೈದಾನಕ್ಕೆ ಸ್ಥಳಂತರಗೊಂಡು ಇದೇ ನವೆಂಬರ್‌ಗೆ ಪಂಚವಾರ್ಷಿಕ ಹಬ್ಬವನ್ನೇ ಆಚರಿಸಲಿರುವ ಪುರಸಭೆ ದಿನವಹಿ ಮಾರುಕಟ್ಟೆ ಎದುರಿಸುತ್ತಿರುವ ಸಮಸ್ಯೆಗಳು ಹಲವಾರು.

ತರಕಾರಿ ಮಾರುಕಟ್ಟೆಗೆ ಶೌಚಾಲಯವಿಲ್ಲ

ತರಕಾರಿ, ಒಣಮೀನು ಮಾರು ಕಟ್ಟೆ ಮತ್ತು ಇತರ ಅಂಗಡಿಗಳ ವ್ಯಾಪಾ ರಸ್ಥರಿಗೆ ಸೂಕ್ತ ಶೌಚಾಲಯವಿಲ್ಲ. ರಿಂಗ್‌ ರೋಡ್‌ ದಾಟಿ ಮೀನು ಮಾರುಕಟ್ಟೆ ಯಿರುವಲ್ಲಿ ಕಟ್ಟಿರುವ ಶೌಚಾಲಯದತ್ತ ಹೋಗುವುದು ಬಹಳ ತ್ರಾಸದಾಯಕ. ಇದೇ ರೀತಿ ರಿಂಗ್‌ ರೋಡ್‌ ಬದಿಯ ಇನ್ನೊಂದು ಮೂಲೆಯಲ್ಲಿ ಬಿಎಸ್‌ಎನ್‌ ಎಲ್‌ ಟವರ್‌ ಇರುವಲ್ಲಿ ಹೊಸದಾಗಿ ಕಟ್ಟಲಾಗುತ್ತಿರುವ ಶೌಚಾಲಯದತ್ತ ಸಾಗುವುದೂ ತ್ರಾಸದಾಯಕ.

ವಾರದ ಸಂತೆ ಇರುವ ಶುಕ್ರವಾರ ವಂತೂ ಇಡೀ ಮಾರುಕಟ್ಟೆ ಜನರಿಂದ ಗಿಜಿಗುಡುತ್ತ ಇರುತ್ತದೆ. ಊರ ಪರವೂರ ವ್ಯಾಪಾರಿಗಳು, ಗ್ರಾಹಕರು ದಟ್ಟೈಸುವ ದಿನವದು. ಆಗ, ಶೌಚಾಲಯ ಎಲ್ಲಿ ಎಂದರೆ ರಿಂಗ್‌ ರೋಡ್‌ ದಾಟಿ ಹೋಗಬೇಕಾಗುತ್ತದೆ. ಇದು ಅಸಮರ್ಪಕ ವ್ಯವಸ್ಥೆ. ಇನ್ನೊಂದೆಡೆ, ತರಕಾರಿ, ಒಣಮೀನು ಮಾರುಕಟ್ಟೆ, ಇತರ ಅಂಗಡಿಯವರಿಗೆ ಪ್ರತ್ಯೇಕವಾದ ಶೌಚಾಲಯವಿಲ್ಲದೆ ತುರ್ತಾಗಿ ಸಮಸ್ಯೆ ನೀಗಿಸಿಕೊಳ್ಳಲು ಮಾರುಕಟ್ಟೆಯ ಪಶ್ಚಿಮ ಭಾಗ ಸ್ಟಾಲುಗಳ ಹಿಂಭಾಗಕ್ಕೆ ಜನರು ಹೋಗುವುದು ಅನಿವಾರ್ಯ – ಅಲ್ಲಿ ಮರೆ ಮಾಚುವ ಆವರಣವಿಲ್ಲದಿದ್ದರೂ. ಹಾಗಾಗಿ, ಈ ಭಾಗದಲ್ಲಿ ಎಲ್ಲದರೂ ಒಂದೆಡೆ ಸರಳ, ವ್ಯವಸ್ಥಿತ ಶೌಚಾಲಯ ನಿರ್ಮಿಸಲೇಬೇಕಾಗಿದೆ.

ಮಾರುಕಟ್ಟೆ ಒಳಾಂಗಣ ಸಮತಟ್ಟಾಗಿಲ್ಲ. ಅಲ್ಲಲ್ಲಿ ಮಳೆ ನೀರು ನಿಂತಾಗ, ವಾರದ ಸಂತೆಯ ಸಂದರ್ಭ ಅಲ್ಲೊಂದು ಕೆಸರುಗದ್ದೆಯೇ ನಿರ್ಮಾಣವಾಗುತ್ತದೆ. ಒಂದಿಷ್ಟು ಸಮತಟ್ಟು ಮಾಡುವ ಪ್ರಯತ್ನ ನಡೆದಿದ್ದರೂ ಸಾಲದು. ಮಳೆ ನೀರು ನಿಲ್ಲದೆ ಸರಾಗವಾಗಿ ಇಳಿಜಾರಿನಲ್ಲಿ ಹರಿದು ಹೋಗುವಂತೆ ಮಾಡಬೇಕಾಗಿದೆ.

ಮಾರುಕಟ್ಟೆಗೆ ಆವರಣ ಗೋಡೆ, ತಡೆಬೇಲಿ ವ್ಯವಸ್ಥೆ ಇಲ್ಲ. ಹಾಗಾಗಿ ಜನರ ಜತೆಗೆ ಜಾನುವಾರುಗಳೂ ಅಡ್ಡಾಡು ವುದು ಸಹಜವಾಗಿ ಗೋಚರಿಸುತ್ತದೆ. ವ್ಯಾಪಾರಿಗಳು ತರಕಾರಿ ರಾಶಿಗೆ ಹಾಕಿದ ಪರದೆ, ಹೊದಿಕೆಯನ್ನು ಎಳೆದು ತರಕಾರಿ, ಸಾಮಗ್ರಿ ಸ್ವಾಹಾ ಮಾಡು ವುದೂ ಇದೆ. ಮಾರುಕಟ್ಟೆಗೆ ಪಹರೆ ವ್ಯವಸ್ಥೆ ಇದೆಯೋ ಎಂಬ ಸಂದೇಹವಿದೆ. ಏಕೆಂದರೆ ಹಲವರ ಈರುಳ್ಳಿ, ಇತರ ತರಕಾರಿ ಗೋಣಿ ಚೀಲಗಳನ್ನು ಯಾರೋ ಹೊತ್ತೂಯ್ಯುವ ಪ್ರಕರಣ ಗಳ ಬಗ್ಗೆ ವ್ಯಾಪಾರಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಟವರ್‌ ಭೀತಿ

ಹತ್ತಿರದಲ್ಲಿಯೇ ಇರುವ ಬಿಎಸ್‌ ಎನ್‌ಎಲ್‌ಟವರ್‌ ಸುಸ್ಥಿತಿಯಲ್ಲಿರುವ ಬಗ್ಗೆ ಸಂತೆಯೊಳಗಿನ ಮಂದಿಗೆ ಸಂಶಯ ವಿದೆ. ಅದು ಯಾವಾಗಲಾದರೂ ತಮ್ಮ ಮೇಲೆ ಬಿದ್ದರೆ ಎಂಬ ಭೀತಿ ಕಾಡುತ್ತಿದೆ ಅವರದ್ದು (ಇದು ಪುರಸಭೆಗೆ ಸಂಬಂಧಿಸಿದ್ದಿಲ್ಲದಿರಬಹುದು)

ಕೊಳಚೆ ನೀರು ಮಾರ್ಗದಲ್ಲಿ

ಮಾರುಕಟ್ಟೆಯ ವಾಯುವ್ಯ ಭಾಗದಲ್ಲಿ ರಾಶಿ ಹಾಕಲಾಗಿರುವ ಗುಜರಿ ಸಾಮಾನಿನ ರಾಶಿಯಡಿ ಯಿಂದ ಜೋರಾಗಿ ಮಳೆ ಸುರಿದಾಗ ದುರ್ವಾಸನೆ ಸಹಿತ ತ್ಯಾಜ್ಯ ಕಲ್ಮಶ ನೀರು ಹೊರಸೂಸುತ್ತಲೇ ಇರುತ್ತದೆ. ಅದರ ಮೇಲೆ ವಾಹನಗಳು ಓಡಾಡುವಾಗ ನಡೆದುಕೊಂಡು ಹೋಗುವವರಿಗೆ ತ್ಯಾಜ್ಯ ನೀರಿನ ಸೇಚನವಾಗುವುದನ್ನು ಗಮನಿಸಿ ಸೂಕ್ತ ಕ್ರಮ ಜರಗಿಸಬೇಕಾಗಿದೆ.

ಸೂಕ್ತ ಕ್ರಮ: ರಿಂಗ್‌ರೋಡಿನ ಪೂರ್ವದಲ್ಲಿ ಹಸಿಮೀನು, ಮಾಂಸದ ಮಳಿಗೆಗಳ ಪಕ್ಕ ಶೌಚಾಲಯವಿದೆ. ಸುಸಜ್ಜಿತ ಶೌಚಾಲಯವನ್ನು ರಿಂಗ್‌ ರೋಡಿನ ಆಚೆ ಬದಿಯಲ್ಲಿ ನಿರ್ಮಿಸಲಾಗುತ್ತಿದೆ. ಹಾಗಿದ್ದರೂ ತರಕಾರಿ, ಒಣಮೀನು ಮಾರುಕಟ್ಟೆಯ ವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಜರಗಿಸಲಾಗುವುದು. -ಪ್ರಸಾದ್‌ ಕುಮಾರ್‌, ಅಧ್ಯಕ್ಷರು, ಮೂಡುಬಿದಿರೆ ಪುರಸಭೆ

-ಧನಂಜಯ ಮೂಡುಬಿದಿರೆ

ಟಾಪ್ ನ್ಯೂಸ್

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Mangaluru: ಪದವು ಜಂಕ್ಷನ್‌- ಶರ್ಬತ್‌ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್‌

4

Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ

2

Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!

1

Kadri: ಬೃಹತ್‌ ಗಾತ್ರದ ಚಿಟ್ಟೆ, ಜೀರುಂಡೆ !

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.