‘ಮರಳು ನೀತಿ ಸರಿಪಡಿಸದಿದ್ದರೆ ಉಗ್ರ ಹೋರಾಟ’
Team Udayavani, Nov 4, 2018, 1:25 PM IST
ಮೂಲ್ಕಿ: ಸಾಮಾನ್ಯ ಜನರ ಬದುಕನ್ನು ಕಿತ್ತುಕೊಳ್ಳುವ ರಾಜ್ಯ ಸರಕಾರದ ಮರಳು ನೀತಿಯನ್ನು ಸರಿಪಡಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಮೂಲ್ಕಿ -ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಅವರು ಭಾರತೀಯ ಜನತಾ ಪಾರ್ಟಿಯ ನೇತೃತ್ವದಲ್ಲಿ ರಾಜ್ಯ ಸರಕಾರದ ಮರಳು ನೀತಿಯ ವಿರುದ್ಧ ಶನಿವಾರ ಮೂಲ್ಕಿ ತಹಶೀಲ್ದಾರ್ ಕಚೇರಿಯ ಎದುರು ನಡೆದ ಪ್ರತಿಭಟನೆ ಹಾಗೂ ಧರಣಿಯ ನೇತೃತ್ವ ವಹಿಸಿ ಮಾತನಾಡಿದರು.
ಬಿಜೆಪಿಯ ಜತೆಗೆ ಕೆಲವು ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮರಳು ನೀತಿಯನ್ನು ವಿರೋಧಿಸಿ ಸಮ್ಮಿಶ್ರ ಮೈತ್ರಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯರಾದ ವಿನೋದ್ ಬೊಳ್ಳೂರು, ತಾ.ಪಂ. ಸದಸ್ಯರಾದ ರಶ್ಮಿ ಸತೀಶ್, ಶರತ್ ಕುಬೆವೂರು, ಜೀವನ್ ಪ್ರಕಾಶ್ ಕಾಮೆರೊಟ್ಟು, ಜಿಲ್ಲಾ ಬಿಜೆಪಿ ಮುಖಂಡರಾದ ಸುಖೇಶ್ ಶೆಟ್ಟಿ ಶಿರ್ತಾಡಿ, ಕೆ.ಭುವನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು, ರಘುರಾಮ್ ಪುನರೂರು, ಭೋಜರಾಜ ಶೆಟ್ಟಿ, ನಗರ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಶೈಲೇಶ್ ಕುಮಾರ್, ಸದಸ್ಯ ಉಮೇಶ್ ಮಾನಂಪಾಡಿ, ಕಿನ್ನಿಗೋಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮರಳಿನ ಕಳ್ಳ ವ್ಯಾಪಾರ
ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಉದ್ದಕ್ಕೂ ಮರಳಿನ ಕೊರತೆ ಇಲ್ಲದಿದ್ದರೂ ಕೆಲವು ರಾಜಕೀಯ ಕುಳಗಳು ಕಳ್ಳ ಮಾರಾಟದ ಮೂಲಕ ಸಮೀಪದ ಕೇರಳ ಮತ್ತು ರಾಜಧಾನಿ ಬೆಂಗಳೂರಿಗೆ ಮರಳು ಸಾಗಿಸುವ ಮೂಲಕ ಕಳ್ಳ ವ್ಯಾಪಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಮರಳು ನೀತಿಯ ವಿರುದ್ಧ ನಡೆದ ಪ್ರತಿಭಟನೆ ಹಾಗೂ ಧರಣಿಯ ನೇತೃತ್ವ ವಹಿಸಿ ಶಾಸಕ ಉಮಾನಾಥ ಕೋಟ್ಯಾನ್‌ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಕ್ಸಲರಿಗೆ ಕೆಂಪು ಹಾಸು ಸ್ವಾಗತ ಖಂಡನೀಯ: ಹರೀಶ್ ಪೂಂಜಾ
Mangaluru University: ಹೊಸ ಕೋರ್ಸ್ ಆರಂಭಕ್ಕೆ ವಿವಿ ಅನುಮತಿ ಅಗತ್ಯ
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.