ಕೆಎಸ್‌ಬಿಸಿಎಲ್ ಡಿಪೋ ಮುಂಭಾಗ ಧರಣಿ; ಮನವಿ
Team Udayavani, Apr 8, 2022, 12:40 PM IST
ಮಹಾನಗರ: ಕರ್ನಾಟಕ ರಾಜ್ಯ ಪಾನೀಯ ನಿಗಮ ಮಂಡಳಿಯು ರಾಜ್ಯದ ಸನ್ನದುದಾರರಿಗೆ ಮದ್ಯ ಖರೀದಿ ಬಗ್ಗೆ ಯಾವುದೇ ಪೂರ್ವ ತಯಾರಿ ನಿರ್ದೇಶನಗಳನ್ನು ಸೂಚಿಸದೆ ಏಕಾಏಕಿ ಅಸಮರ್ಪಕವಾಗಿ ವೆಬ್ ಇಂಡೆಂಟ್ ಪದ್ಧತಿಯನ್ನು ಜಾರಿಗೊಳಿಸಿದ ಹಿನ್ನೆಲೆಯಲ್ಲಿ ತೊಂದರೆ ಉಂಟಾಗುತ್ತಿದ್ದು, ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ದ.ಕ. ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಮಂಗಳೂರು ಇದರ ಮುಂದಾಳತ್ವದಲ್ಲಿ ಮಂಗಳೂರು, ಬೈಕಂಪಾಡಿ, ಪುತ್ತೂರು ಕೆಎಸ್‌ಬಿಸಿಎಲ್ ಡಿಪೋ ಮುಂಭಾಗ ಧರಣಿ ಕೈಗೊಂಡು ಕೆಎಸ್‌ಬಿಸಿಎಲ್ ನಿರ್ದೇಶಕ ಪಿ.ಸಿ. ಜಾಪರ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ತಂತ್ರಾಶದಲ್ಲಿನ ಲೋಪ ದೋಷಗಳಿಂದ ಮದ್ಯ ಖರೀದಿಸಲು ಸಾಧ್ಯವಾಗದೇ ಹಿಂದಿನ ಪದ್ಧತಿ ಯಲ್ಲಿಯೂ ಮದ್ಯ ಖರೀದಿಸಲು ಸಾಧ್ಯವಾಗದೇ ಮದ್ಯ ವ್ಯಾಪಾರಸ್ಥರ ದಾಸ್ತಾನು ಖಾಲಿಯಾಗಿ ಗಂಭೀರ ಸಮಸ್ಯೆ ಬಗೆಹರಿಸುವಂತಾಗಿ ಎಂದು ಮನವಿ ಮಾಡಲಾಯಿತು.
ಮಂಗಳೂರಿನ ಮರೋಳಿ ಡಿಪೋದಲ್ಲಿ ರಾಜ್ಯ ಫೆಡರೇಶನ್ ಕಾರ್ಯಕಾರಿ ಸಮಿತಿ ಸದಸ್ಯ, ದ.ಕ. ಜಿಲ್ಲಾ ಪದಾಧಿಕಾರಿಗಳಾದ ಚಂದ್ರನಾಥ್ ಅತ್ತಾವರ್, ಓಂಪ್ರಸಾದ್ ಬಾರ್ದಿಲ, ಮಂಗಳೂರು ತಾಲೂಕು ಪದಾಧಿಕಾರಿಗಳಾದ ದಿನೇಶ್ ರಾಜ್ ಕೆ. ಅಂಚನ್, ಎಚ್. ನಾಗೇಶ್ ಶೆಟ್ಟಿ, ಸದಸ್ಯರಾದ ಜೇಕ್ ಎಲ್. ಪಿಂಟೋ, ರಮಾನಾಥ್ ಬ್ಲೂ ಪಾರ್ಕ್, ಶರತ್ ಕುಮಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
MUST WATCH
ಹೊಸ ಸೇರ್ಪಡೆ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.