ಪಂಪ್‌ವೆಲ್ ಫ್ಲೈಓವರ್: ಎರಡು ವರ್ಷಗಳ ಬಳಿಕ ಉರಿದ ಬೀದಿ ದೀಪ !
Team Udayavani, Sep 13, 2022, 2:51 PM IST
ಮಹಾನಗರ: ಸುಮಾರು ಎರಡು ವರ್ಷಗಳಿಂದ ಬೀದಿ ದೀಪ ಉರಿಯದೆ ಕತ್ತಲೆಯಲ್ಲಿದ್ದ ಪಂಪ್ ವೆಲ್ ಫ್ಲೈಓವರ್‌ನಲ್ಲಿ ಬಲ್ಬ್ ಗಳು ಉರಿಯುತ್ತಿವೆ.
2020ರ ಜನವರಿ 31ರಂದು ಪಂಪ್ ವೆಲ್ ಮೇಲ್ಸೇತುವೆ ಉದ್ಘಾಟನೆಗೊಂಡಿತ್ತು. ಉದ್ಘಾಟನೆಗಾಗಲೇ ಮೇಲ್ಸೇತುವೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ, ಮಹಾನಗರ ಪಾಲಿಕೆ ಸಮನ್ವಯದ ಕೊರತೆಯಿಂದ ಬೀದಿ ದೀಪಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿಲ್ಲ. ಫ್ಲೈಓವರ್ ಮೇಲ್ಗಡೆ ಬೀದಿ ದೀಪ ಉರಿಸಲು ಟೋಲ್ ಶುಲ್ಕ ಏರಿಸಬೇಕೆಂಬ ಬೇಡಿಕೆಯನ್ನು ಗುತ್ತಿಗೆ ಸಂಸ್ಥೆ ನವಯುಗ ಹೇಳುತ್ತಿತ್ತು. ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯ ಬಗ್ಗೆ ಕೆಲವು ಸಮಯದ ಹಿಂದೆ ಚರ್ಚೆ ಆರಂಭದ ಬಳಿಕ ಪಂಪ್ ವೆಲ್ ಮೇಲ್ಸೇತುವೆಗೆ ಅಳವಡಿಸಿದ್ದ ಬಲ್ಬ್ ಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
“ಪಂಪ್‌ವೆಲ್ ಮೇಲ್ಸೇತುವೆಯ ಎರಡೂ ಬದಿಗಳಲ್ಲಿ ತಲಾ 18 ಕಂಬಗಳಿದ್ದು, 36 ಬಲ್ಬ್ ಗಳಿವೆ. ರಸ್ತೆ ವಿಭಜಕದಲ್ಲಿ 8 ಕಂಬಗಳಿದ್ದು, 16 ಬಲ್ಬ್ ಗಳಿವೆ. ಇದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಕಾರಣ ತಿಂಗಳಿಗೆ ಸುಮಾರು 6 ಲಕ್ಷ ರೂ. ಹೆಚ್ಚುವರಿ ವಿದ್ಯುತ್ ಬಿಲ್ ಬರಲಿದೆ. ನಂತೂರಿನಿಂದ ನೇತ್ರಾವತಿ ನದಿ ಬದಿಯವರೆಗೆ ರಾಷ್ಟ್ರೀಯ ಹೆದ್ದಾರಿಗೆ ಒಂದೇ ಟ್ರಾನ್ಸ್‌ಫರ್ಮರ್‌ಗೆ ಸಂಪರ್ಕ ಕಲ್ಪಿಸಲಾಗಿದೆ’ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು.
“ಸುದಿನ’ ವರದಿ
ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ಬೀದಿ ದೀಪ ಉರಿಯದೆ ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿತ್ತು. ಈ ನಿಟ್ಟಿನಲ್ಲಿ “ಕತ್ತಲಲ್ಲಿದೆ ಪಂಪ್‌ವೆಲ್ ಮೇಲ್ಸೇತುವೆ’ ಎಂಬ ಶೀರ್ಷಿಕೆಯಲ್ಲಿ “ಉದಯವಾಣಿ ಸುದಿನ’ ಇತ್ತೀಚೆಗೆ ವರದಿ ಪ್ರಕಟಿಸಿತ್ತು. ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪಾಲಿಕೆ ಅಧಿಕಾರಿ ಗಳು ಸಂಸದರ, ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿದ್ದರು. ಇದೀಗ ಪಂಪ್‌ವೆಲ್ ಮೇತ್ಸೇತುವೆಯ ಬೀದಿ ದೀಪಗಳು ಉರಿಯಲು ಆರಂಭಿಸಿದೆ.
ಸಭೆ ನಡೆಸಲಾಗಿದೆ: ಕೆಲವೊಂದು ತಾಂತ್ರಿಕ ಕಾರಣದಿಂದಾಗಿ ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ಬೀದಿ ದೀಪಕ್ಕೆ ವಿದ್ಯುತ್ ಸಂಪರ್ಕ ನೀಡಿರಲಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಸಂಸದರು ಮತ್ತು ನಾನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿದ್ದೇವೆ. ಇಲ್ಲಿನ ವಿದ್ಯುತ್ ಕಂಬಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಸದ್ಯ ಬಲ್ಬ್ ಗಳು ಉರಿಯುತ್ತಿವೆ. –ಡಿ. ವೇದವ್ಯಾಸ ಕಾಮತ್, ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.