ಪಂಪ್‌ವೆಲ್-ಪಡೀಲ್ ಚತುಷ್ಪಥ ಕಾಮಗಾರಿ: ಸಂಚಾರಕ್ಕೆ ಸಂಕಷ್ಟ
Team Udayavani, Jun 17, 2024, 5:00 PM IST
ಮಹಾನಗರ: ಪಂಪ್ ವೆಲ್ - ಪಡೀಲ್ ಸಂಚಾರ ಅಕ್ಷರಶಃ ನರಕವಾಗುತ್ತಿದೆ. ನಿತ್ಯ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಳ್ಳುವ ಜತೆಗೆ ಅಪೂರ್ಣ ಕಾಮಗಾರಿಯಿಂದಾಗಿ ಎಲ್ಲೆಲ್ಲೂ ಕೆಸರುಮಯವಾಗಿದೆ. ನಾಗುರಿ ಸಹಿತ ಕೆಲವೆಡೆ ರಸ್ತೆಯಲ್ಲಿ ಹೊಂಡಗಳಿದ್ದು, ಸಂಚಾರವೇ ಸಂಚಕಾರ ವಾಗಿದೆ. 2 ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಪೂರ್ಣಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ. 2 ಮಳೆಗಾಲವನ್ನು ಕಂಡಿರುವ ಈ ಕಾಮಗಾರಿ ಸವಾರರಿಗೆ ನಿತ್ಯ ಕಿರಿಕಿರಿಯಾಗಿ ಪರಿಣಮಿಸಿದೆ.
ನಾಗುರಿ, ಪಡೀಲ್ ಸಮೀಪ, ರೈಲು ನಿಲ್ದಾಣಕ್ಕೆ ತೆರಳುವ ಭಾಗಗಳಲ್ಲಿ ಕಾಮಗಾರಿ ಅಮೆಗತಿ ಯಲ್ಲಿದೆ. ಮಳೆ ಬಂದರೆ ಸಾಕು ರಸ್ತೆಯುದ್ದಕ್ಕೂ ಕೆಸರು ತುಂಬಿಕೊಳ್ಳುತ್ತದೆ. ವಾಹನ ದಟ್ಟಣೆ ಏರಿಕೆಯಾಗುತ್ತದೆ. ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವವರು ಹಾಗೂ ರೈಲು ನಿಲ್ದಾಣಕ್ಕೆ ತೆರಳುವವರ ಗೋಳು ಕೇಳುವವರಿಲ್ಲವಾಗಿದೆ. ಚತುಷ್ಪತ ರಸ್ತೆಯ ಕೆಲಸ ಕಾರ್ಯಗಳು
ಪ್ರಗತಿಯಲ್ಲಿದ್ದು, ಪಂಪ್‌ವೆಲ್ ಭಾಗದಿಂದ ಅಲ್ಪ ಪ್ರಮಾಣದಲ್ಲಿ ರಸ್ತೆ ನಿರ್ಮಾಣಗೊಂಡಿದೆ. ನಗರಕ್ಕೆ ಆಗಮಿಸುವವರಿಗೆ ಹೆಬ್ಟಾಗಿಲು ಪಂಪ್ ವೆಲ್‌ಗೆ ಆಗಮಿಸಲು ವಾಹನ ಸವಾರರಿಗೆ ಈ ರಸ್ತೆಯ ಸುಮಾರು 2 ಕಿ.ಮೀ. ಸಂಚಾರ
ತ್ರಾಸದಾಯಕವಾಗಿದೆ.
ಪಾದಚಾರಿಗಳಿಗೆ ಜಾಗವಿಲ್ಲ: ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಪಾದಚಾರಿಗಳಿಗೆ ತೆರಳಲು ಜಾಗವಿಲ್ಲ. ಕೆಸರಲ್ಲೇ
ನಡೆದಾಡಬೇಕಾಗಿದ್ದು, ವಾಹನಗಳು ಸಂಚರಿಸುವ ವೇಳೆ ಕೆಸರು ನೀರಿನ ಸಿಂಚನವಾಗುತ್ತದೆ. ಇದರಿಂದ ಮೈಮೇಲೆ ಕೆಸರು ಮೆತ್ತಿಕೊಂಡು ಓಡಾಡುವ ದುಃಸ್ಥಿತಿ ಇದೆ. ಆಮೆಗತಿಯ ಕಾಮಗಾರಿಯಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ.
24 ಮೀ. ಅಗಲದ ಚತುಷ್ಪಥ ರಸ್ತೆ
ಈ ರಸ್ತೆ ಕಾಮಗಾರಿ ಮುಕ್ತಾಯಕ್ಕೆ ಎರಡು ವರ್ಷ ನಿಗದಿತ ಅವಧಿ ಇತ್ತು. ಆದರೆ ಇನ್ನೂ ಅಲ್ಲಲ್ಲಿ ಕಾಮಗಾರಿ ಬಾಕಿ ಇದ್ದು, ಕೆಲಸಕ್ಕೆ ವೇಗ ನೀಡಲು ಸ್ಮಾರ್ಟ್‌ಸಿಟಿ ನಿರ್ಧರಿಸಬೇಕಿದೆ. ಸುಮಾರು 2.8 ಕಿ.ಮೀ. ರಸ್ತೆ ಇದಾಗಿದ್ದು, 24 ಮೀ. ಅಗಲದ ಚತುಷ್ಪಥ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತನೆಯಾಗಲಿದೆ. ಇದರಲ್ಲಿ 3.50 ಮೀ. ಅಗಲದ 4 ಲೇನ್ ಕಾಂಕ್ರೀಟ್ ವೇ, ರಸ್ತೆ ಇಕ್ಕೆಲದಲ್ಲಿ 3 ಮೀ. ಅಗಲದ ಇಂಟರ್ ಲಾಕ್ ಅಳವಡಿಸಲಾಗುತ್ತದೆ. ರಸ್ತೆ ಇಕ್ಕೆಲದಲ್ಲಿ ಫುಟ್‌ಪಾತ್, ಚರಂಡಿ, ಯುಟಿಲಿಟಿ ಡಕ್ಟ್, ರಸ್ತೆ ಮಧ್ಯೆ ಮೀಡಿಯನ್ ಜತೆಗೆ ದಾರಿ ದೀಪ ವ್ಯವಸ್ಥೆ ಇರುತ್ತದೆ.
ಪಂಪ್‌ವೆಲ್-ಪಡೀಲ್ ನಡುವಣ ಕಾಂಕ್ರೀಟ್ ರಸ್ತೆ ಕಾಮಗಾರಿ ಯೋಜನ ವೆಚ್ಚ ಒಟ್ಟು 26 ಕೋಟಿ ರೂ. ಆಗಿದ್ದು, ರಾಜ್ಯ ಸರಕಾರ
ಪೂರಕ ಕೆಲಸಗಳಿಗಾಗಿ 4 ಕೋಟಿ ರೂ. ಒದಗಿಸಲಿದೆ. ಆದರೂ ಕಾಮಗಾರಿ ವಿಳಂಬ ಸಹಿತ ಯೋಜನೆ ಪೂರ್ಣಗೊಳಿಸಲು ಮತ್ತಷ್ಟು ಅನುದಾನ ಬೇಕಾಗಬಹುದು ಎನ್ನುತ್ತಾರೆ ಅಧಿಕಾರಿಗಳು.
ವಾಹನ ದಟ್ಟಣೆ ನಿಯಂತ್ರಣಕ್ಕೆ ಪೂರಕ
ಪಡೀಲ್-ಪಂಪ್‌ವೆಲ್ ರಸ್ತೆ ಕಾಮಗಾರಿ ಪೂರ್ಣಗೊಂಡರೆ ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ಪ್ರಯೋಜನಕ್ಕೆ ಸಿಗಲಿದೆ.ಪಡೀಲ್‌ನಲ್ಲಿಹೊಸದಾಗಿ ನಿರ್ಮಾಣವಾಗುತ್ತಿರುವ ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ತೆರಳಲು ಸಹಾಯವಾಗಲಿದೆ. ಬೆಂಗಳೂರು, ಮೈಸೂರು ಸಹಿತ ವಿವಿಧ ಭಾಗಗಳಿಗೆ ತೆರಳುವವರಿಗೆ ಹಾಗೂ ಅಲ್ಲಿಂದ ಆಗಮಿಸುವವರಿಗೆ ನಗರಕ್ಕೆ ತೆರಳಲು ಅನುಕೂಲವಾಗಲಿದೆ. ವಾಹನ ದಟ್ಟಣೆ ಕಡಿಮೆಯಾಗಲಿದೆ.
ರೈಲ್ವೇ ಪ್ರಯಾಣಿಕರಿಗೆ ಸಂಕಷ್ಟ
ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ನಗರ ಹಾಗೂ ಗ್ರಾಮಾಂತರ ಭಾಗಗಳಿಂದ ತೆರಳುವ ಪ್ರಯಾಣಿಕರು ಈ ರಸ್ತೆಯನ್ನು
ಬಳಸಲೇ ಬೇಕು. ನಿಲ್ದಾಣಕ್ಕೆ ತೆರಳುವ ಎರಡೂ ದಾರಿಗಳಲ್ಲೂ ವಾಹನ ದಟ್ಟಣೆಯ ಬಿಸಿ ತಟ್ಟುತ್ತದೆ. 1 ನಿಮಿಷ ತಡವಾದರೂ
ರೈಲು ಪ್ರಯಾಣ ತಪ್ಪುವ ಆತಂಕ ಪ್ರಯಾಣಿಕರದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.