ಪಂಪ್‌ವೆಲ್-ಪಡೀಲ್ ಸ್ಮಾರ್ಟ್ ರಸ್ತೆ ಕಾಮಗಾರಿಗೆ ವೇಗ
ಸ್ಮಾರ್ಟ್ ರಸ್ತೆ ಪ್ಯಾಕೇಜ್- 5ರಡಿ ಕಾಮಗಾರಿ
Team Udayavani, Oct 18, 2022, 12:08 PM IST
ಮಹಾನಗರ: ನಗರದ ಬಹು ಮುಖ್ಯ ರಸ್ತೆಗಳಲ್ಲಿ ಒಂದಾಗಿರುವ, ಪಡೀಲ್ – ಪಂಪ್‌ವೆಲ್ ರಸ್ತೆಯ ಅಭಿವೃದ್ಧಿ ಕೆಲಸ ಭರದಿಂದ ಸಾಗಿದೆ. ಬೆಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಬಂದು ಮಂಗಳೂರು ನಗರ ಪ್ರವೇಶಿಸುವ ಮುಖ್ಯ ರಸ್ತೆಯಾಗಿರುವುದರಿಂದ ವಿಸ್ತ ರಣೆ ಅಗತ್ಯವಾಗಿದ್ದು, ಆ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿಯ ಸ್ಮಾರ್ಟ್ ರಸ್ತೆ ಪ್ಯಾಕೇಜ್- 5ರಡಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಪಡೀಲ್‌ನಿಂದ ಕಾಮಗಾರಿ ಆರಂಭವಾಗಿದ್ದು, ಒಂದು ಬದಿಯಲ್ಲಿ ಸುಮಾರು 200 ಮೀ.ನಷ್ಟು ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಉಳಿದಂತೆ ಕಪಿತಾನಿಯೋ ವರೆಗೆ ಅಲ್ಲಲ್ಲಿ ತಡೆ ಗೋಡೆ ನಿರ್ಮಿಸಿ ಮಣ್ಣ ಹಾಕಿ ಸಮತಟ್ಟುಗೊಳಿಸಲಾಗಿದೆ. ರಸ್ತೆ ಬದಿಯ ಕೆಲವು ಕಟ್ಟಡಗಳನ್ನೂ ತೆರವುಗೊಳಿಸಲಾಗಿದೆ. ಮಳೆ ನೀರು ಹರಿಯುವ ಚರಂಡಿ ನಿರ್ಮಾಣ ಕೆಲಸವೂ ಅಲ್ಲಲ್ಲಿ ನಡೆಯುತ್ತಿದೆ. ರಸ್ತೆ ಕಾಮಗಾರಿ ಉದ್ದೇಶ ದಕ್ಕೆ ಸ್ಥಳದಲ್ಲಿದ್ದ ಬೃಹತ್ ಮರ ಗಳನ್ನು ನೆಲಸಮಗೊಳಿಸಲಾಗಿದೆ. ಸಾಧ್ಯವಿರುವ ಮರಗಳನ್ನು ಸ್ಥಳಾಂತರಗೊಳಿಸುವ ಚಿಂತನೆಯಿದೆ. ಕಡಿಯಲಾದ ಮರಗಳ ಬದಲಿಗೆ ಬೇರೆ ಕಡೆಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲು ಸ್ಮಾರ್ಟ್ ಸಿಟಿಯಿಂದ ಅರಣ್ಯ ಇಲಾಖೆಗೆ ಮೊತ್ತ ಪಾವತಿ ಸಲಾ ಗಿದೆ ಎನ್ನುತ್ತಾರೆ ಅಧಿಕಾರಿಗಳು.
24 ಮೀ. ಅಗಲದ ಕಾಂಕ್ರೀಟ್ ರಸ್ತೆ
ಪ್ರಸ್ತುತ 10 ಮೀ. ಅಗಲದ ಡಾಮರು ರಸ್ತೆಯಿದ್ದು, ಇದು 24 ಮೀ. ಅಗಲದ ಚತುಷ್ಪಥ ಕಾಂಕ್ರೀಟ್ ರಸ್ತೆ ಯಾಗಿ ಪರಿವರ್ತನೆಯಾಗಲಿದೆ. ಇದರಲ್ಲಿ 3.50 ಮೀ. ಅಗಲದ ನಾಲ್ಕು ಲೇನ್ ಕಾಂಕ್ರೀಟ್ ವೇ, 3 ಮೀ.ಅಗಲದ ಇಂಟರ್‌ಲಾಕ್ ಅಳವಡಿಸಲಾಗುತ್ತದೆ. ಎರಡೂ ಬದಿಗಳಲ್ಲಿ ಫುಟ್‌ಪಾತ್, ಚರಂಡಿ, ಯುಟಿಲಿಟಿ ಡಕ್ಟ್, ರಸ್ತೆಯ ಮಧ್ಯದಲ್ಲಿ ಡಿವೈಡರ್, ದಾರಿದೀಪ ಅಳವಡಿಕೆಯಾಗಲಿದೆ. ಪಂಪ್‌ವೆಲ್ ನಿಂದ ಪಡೀಲ್‌ವರೆಗೆ ಒಟ್ಟು 2.8 ಕಿ.ಮೀ. ಉದ್ದದ ರಸ್ತೆಯಾಗಿದ್ದು, 26 ಕೋ. ರೂ. ವೆಚ್ಚದಲ್ಲಿ ಸ್ಮಾರ್ಟ್ ಸಿಟಿಯಿಂದ ಅಭಿವೃದ್ಧಿಯಾಗಲಿದೆ.
ವಾಹನ ದಟ್ಟಣೆ ನಿವಾರಣೆ
ಪಡೀಲ್- ಪಂಪ್‌ವೆಲ್ ರಸ್ತೆ ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ. ಈ ಹಿಂದೆ ಹೆದ್ದಾರಿಯಾಗಿದ್ದ ಈ ರಸ್ತೆ ಪ್ರಸ್ತುತ ಪಾಲಿಕೆಗೆ ಸೇರಿದ್ದು, ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ನಗರ ಪ್ರವೇಶಿಸಲು ಇರುವ ಪ್ರಮುಖ ರಸ್ತೆ. ಸದ್ಯ ಅಗಲ ಕಿರಿದಾದ ರಸ್ತೆಯಾದ ಕಾರಣ, ಪ್ರತಿ ನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದೆ. ಚತುಷ್ಪಥವಾದರೆ ವಾಹನಗಳ ಸುಗಮ ಸಂಚಾರ ಸಾಧ್ಯವಾಗಲಿದೆ. ಜತೆಗೆ ಪಡೀಲ್‌ನಲ್ಲಿ ನಿರ್ಮಾಣ ವಾಗಲಿರುವ ಜಿಲ್ಲಾಧಿಕಾರಿ ಕಚೇರಿ, ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಮೊದಲಾದೆಡೆಗಳಿಗೆ ತೆರಳು ವವರಿಗೂ ಅನುಕೂಲವಾಗಲಿದೆ.
ರಸ್ತೆಗೆ ಡಾಮರು
ಪ್ರಸ್ತುತ ವಾಹನಗಳು ಸಂಚರಿಸುತ್ತಿರುವ ಈ ಹಿಂದಿನ ಡಾಮರು ರಸ್ತೆ ಮಳೆ, ಕಾಮಗಾರಿಯ ಕಾರಣ ದಿಂದಾಗಿ ಹದಗೆಟ್ಟಿತ್ತು. ಇದೀಗ ರಸ್ತೆಯನ್ನು ಪ್ಯಾಚ್‌ವರ್ಕ್ ಮೂಲಕ ದುರಸ್ತಿ ಪಡಿಸಲಾಗಿದೆ.ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅವ ಕಾಶವಾಗಿದೆ. ಕಾಮಗಾರಿಯ ಕಾರಣದಿಂದಾಗಿ ಧೂಳು ಸಾಮಾನ್ಯವಾಗಿಬಿಟ್ಟಿದೆ.
ಮಾರ್ಚ್ ಅಂತ್ಯದೊಳಗೆ ಪೂರ್ಣ: ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಪೂರಕವಾಗಿ ವಿದ್ಯುತ್ ಕಂಬಗಳ ತೆರವು, ತಡೆಗೋಡೆಗಳ ನಿರ್ಮಾಣ, ನೀರು, ಒಳಚರಂಡಿ ಪೈಪ್‌ಗ್ಳನ್ನು ಸಮರ್ಪಕವಾಗಿ ಅಳವಡಿಸುವ ಕೆಲಸಗಳು ನಡೆಯುತ್ತಿವೆ. ಈಗಾಗಲೇ ಪಡೀಲ್ ಭಾಗದಲ್ಲಿ ಒಂದು ಕಡೆ ರಸ್ತೆ ನಿರ್ಮಾಣ ಮಾಡಲಾಗಿದೆ. 2023ರ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. –ಅರುಣ್ ಪ್ರಭ ಕೆ.ಎಸ್., ಜನರಲ್ ಮ್ಯಾನೇಜರ್-ಟೆಕ್ನಿಕಲ್, ಮಂಗಳೂರು ಸ್ಮಾರ್ಟ್ ಸಿಟಿ ಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.