ಅಭಿವೃದ್ಧಿಗೆ ಕಾಯುತ್ತಿದೆ ಪುತ್ತಿಗೆ; ಡೀಮ್ಡ್ ಫಾರೆಸ್ಟ್ ಸಮಸ್ಯೆ ನಡುವೆ ಕೊರಗರ ಕೂಗು
Team Udayavani, Oct 13, 2022, 11:40 AM IST
ಮೂಡುಬಿದಿರೆ: ತಾಲೂಕಿನ ಪಶ್ಚಿಮ ಭಾಗದಲ್ಲಿರುವ ಪುತ್ತಿಗೆ ಗ್ರಾಮ ಪ್ರಕೃತಿ ರಮ್ಯ ಊರು. ಮೂರು ಸರಕಾರಿ ಶಾಲೆಗಳು, ಸ್ನಾತಕೋತ್ತರ ಶಿಕ್ಷಣದವರೆಗಿನ ಖಾಸಗಿ ವಲಯದ ಸಂಸ್ಥೆಗಳಿರುವ ಗ್ರಾಮವಿದು. 6 ವಾರ್ಡ್, 21 ಸದಸ್ಯ ಬಲದ ಪಂ.ನ ಗ್ರಾಮ ವ್ಯಾಪ್ತಿ 13,341 ಎಕ್ರೆ ವಿಸ್ತಾರವಿದೆ. ಜನಸಂಖ್ಯೆ ಸುಮಾರು 10,000. ಕೃಷಿಯೇ ಜೀವಾಳ.
ಡೀಮ್ಡ್ ಫಾರೆಸ್ಟ್
ಈ ಸಮಸ್ಯೆಯಿಂದಾಗಿ ಅಕ್ರಮ ಸಕ್ರಮದ ಅರ್ಜಿಗಳು, 180ಕ್ಕೂ ಅಧಿಕ ಮನೆ ನಿವೇಶನದ ಅರ್ಜಿಗಳ ವಿಲೇವಾರಿ ಆಗಿಲ್ಲ. ಕೆಲವೆಡೆ ಡೀಮ್ಡ್ ಫಾರೆಸ್ಟ್ ಇರುವಲ್ಲಿ ಬೇರೆ ಸರ್ವೆ ನಂಬ್ರದೊಂದಿಗೆ ಡಿ’ನೋಟಿಸ್ ಕೊಟ್ಟು ಸಮಸ್ಯೆಯಾಗಿದೆ.
ಕೊರಗರ ಕೊರಗು
ಪುತ್ತಿಗೆ ಬಂಕಿಮಜಲು ಪ್ರದೇಶದಲ್ಲಿ 20 ಕೊರಗರ ಕುಟುಂಬಗಳಿಗೆ ಒಂದೆಡೆ ತಲಾ 10 ಸೆಂಟ್ಸ್ ಮನೆ ನಿವೇಶನ, ಸ್ವಲ್ಪ ದೂರದಲ್ಲಿ ಕೃಷಿಗಾಗಿ ತಲಾ 90 ಸೆಂಟ್ಸ್ ಜಾಗ ಕೊಟ್ಟಿದ್ದಾರೆ. ಯಾವ ಜಾಗ ಯಾರದ್ದು ಎಂಬುದನ್ನು ತೋರಿಸಿ ಕೊಟ್ಟಿಲ್ಲ. ಇನ್ನು 10 ಸೆಂಟ್ಸ್ ನಿವೇಶನಗಳಲ್ಲಿ ಠಿಕಾಣಿ ಹೂಡಿರುವವರಿಗೆ ತಮ್ಮದೇ ಜಾಗ ಎಂಬ ಸ್ಪಷ್ಟನೆ ಇಲ್ಲ. ಇನ್ನೊಂದೆಡೆ ಈ 10 ಸೆಂಟ್ಸ್ ಜಾಗ ಕನ್ವರ್ಷನ್ ಆಗದೆ ಮನೆ ನಂಬ್ರ ಕೊಡಲಾಗಿಲ್ಲ. ಹಿರಿಯ ಅಧಿಕಾರಿಗಳ ಭೇಟಿಯ ಫಲ ಪ್ರಯೋಜನ ನೀಡಿಲ್ಲ.
ರಸ್ತೆ, ಪಲ್ಲ ಅಭಿವೃದ್ಧಿ
ಪುತ್ತಿಗೆ ದೇವಸ್ಥಾನದ ಬಳಿಯ ಅಗಲ ಕಿರಿದಾದ ಪುಟ್ಟ ಸೇತುವೆಯನ್ನು ನಿವಾರಿಸಿ, ಹತ್ತಿರವೇ ಹೊಸ ಸೇತುವೆ ಸಹಿತ ಗ್ರಾಮದ ನಡುವೆ ಹಾದು ಹೋಗುವ ಪ್ರಮುಖ ರಸ್ತೆಯನ್ನು ವಿಸ್ತರಿಸಿ, ಕಾಯಕಲ್ಪ ನೀಡಲು ಶಾಸಕರು ಕಾರ್ಯ ಪ್ರವೃತ್ತರಾಗಿದ್ದಾರೆ.
ಕಾಯರ್‌ಪುಂಡು ಪರಿಸರದಲ್ಲಿ ಚರಂಡಿ ಇಲ್ಲ. ಸಾಹಿತಿ ದಿ| ಪಳಕಳ ಸೀತಾರಾಮ ಭಟ್ ಅವರ ನಿವಾಸದತ್ತ ಸಾಗುವ ಪಳಕಳ ಗರ್ದಿಗುಡ್ಡೆ ರಸ್ತೆ ದುರಸ್ತಿಗೆ ಕಾಯುತ್ತಿದೆ. ಮೂಡುಬಿದಿರೆಯ ನಾಗರಕಟ್ಟೆ ಕಡೆಯಿಂದ ಕಲುಷಿತ ನೀರು ಹರಿಯುವುದು ಪುತ್ತಿಗೆಯತ್ತ. ಇದು ಸಮಸ್ಯೆ ಸೃಷ್ಟಿಸಿದೆ.
ತ್ಯಾಜ್ಯ ವಿಲೇವಾರಿಗೆ ಪರಿಹಾರ ಅಗತ್ಯ: ಪುತ್ತಿಗೆ ಮೂಲಕ ಹಾದುಹೋಗುವ ಮಹತ್ವದ ಸಂಪರ್ಕ ರಸ್ತೆಯ ಅಭಿವೃದ್ಧಿ ಆಗಬೇಕು. ಗ್ರಾಮ ಕ್ಕೊಂದು ಕ್ರೀಡಾಂಗಣದ ಕನಸಿದೆ. ವಿದ್ಯಾರ್ಥಿನಿಲಯಗಳಿಂದ ಹರಿದು ಬರುವ ತ್ಯಾಜ್ಯ ವಿಲೇವಾರಿ ಗೊಂದು ಪರಿಹಾರ ಕಂಡುಕೊಳ್ಳ ಬೇಕಿದೆ. ಹಂಡೇಲು, ಕಾಪಿಕಾಡು ಕಡೆ ಕುಡಿಯುವ ನೀರಿನ ಪೂರೈಕೆ ಯನ್ನು ಸುವ್ಯವಸ್ಥಿತ ಗೊಳಿಸಬೇಕಿದೆ. -ಪ್ರವೀಣ್ ಶೆಟ್ಟಿ, ಅಧ್ಯಕ್ಷರು, ಪುತ್ತಿಗೆ ಗ್ರಾ.ಪಂ ಧನಂಜಯ ಮೂಡುಬಿದಿರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.