ಹಳೆಯಂಗಡಿ ರೈಲ್ವೇ ಕ್ರಾಸಿಂಗ್ ಭರದಿಂದ ಸಾಗಿದ ಹಳಿ ಕಾಮಗಾರಿ
Team Udayavani, Jan 22, 2022, 5:41 PM IST
ಹಳೆಯಂಗಡಿ: ಇಲ್ಲಿನ ಕಿನ್ನಿಗೋಳಿ- ಪಕ್ಷಿಕೆರೆ ಹಾಗೂ ಹಳೆಯಂಗಡಿ ನಡುವೆ ಸಂಪರ್ಕ ಇರುವ ಇಂದಿರಾನಗರದ ರೈಲ್ವೇ ಕ್ರಾಸಿಂಗ್ ಅನ್ನು ಕೊಂಕಣ ರೈಲ್ವೇ ಕಾರ್ಪೋರೆಶನ್ ಲಿಮಿ ಟೆಡ್ ಸಂಸ್ಥೆಯು ರೈಲ್ವೇ ಕಬ್ಬಿಣದ ಹಳಿ, ಹಳಿ ಯನ್ನು ಆಧರಿಸಿರುವ ಸಿಮೆಂಟ್‌ನ ಕಾಂಕ್ರೀಟ್‌ನ ಕಾಮಗಾರಿಯ ಪ್ರಯುಕ್ತ ಎರಡು ದಿನ ಬಂದ್ ನಡೆಸಿ ಕಾಮಗಾರಿಯು ಜ. 21ರಂದು ಆರಂಭಗೊಂಡು ಭರದಿಂದ ಸಾಗಿದೆ.
ಈ ಎರಡು ಕಾಮಗಾರಿಯನ್ನು ಹೊಸದಾಗಿ ಅಳವಡಿಸುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದ್ದು, ಜ. 21ರಂದು ಬೆಳಗ್ಗೆ 9ರಿಂದ ಜ.22ರ ಸಂಜೆ 5ರ ವರೆಗೆ ಕ್ರಾಸಿಂಗ್‌ನ್ನು ಸಂಪೂರ್ಣವಾಗಿ ಬಂದ್ ಮಾಡಿ ಕಾಮಗಾರಿ ನಡೆಯುತ್ತಿದೆ. ಪೂನಾ ಮೂಲದ ಸಂಸ್ಥೆಯೊಂದಿಗೆ ಗುತ್ತಿಗೆಯನ್ನು ಪಡೆದುಕೊಂಡಿದ್ದು ಸುಮಾರು 50 ಮಂದಿ ಕಾರ್ಮಿಕರೊಂದಿಗೆ ಜೆಸಿಬಿ ಸಹಿತ ಹಳಿಯನ್ನು ತೆಗೆಯುವ ಕಾರ್ಯದಿಂದ ಮೊದಲ್ಗೊಂಡು ಮರಳಿ ಹೊಸದಾಗಿ ಅಳವಡಿಸುವವರೆಗೆ ನಡೆಯಲಿದೆ.
ಕಾಮಗಾರಿಯನ್ನು ಸಾಕಷ್ಟು ಮುಂಜಾಗ್ರತೆಯಿಂದ ನಡೆಸಲಾಗುತ್ತಿದೆ. ಕಾಮಗಾರಿಯ ಸಂದರ್ಭದಲ್ಲಿ ಪ್ರಯಾ ಣಿಕರ ಹಾಗೂ ಗೂಡ್ಸ್ ರೈಲು ಸಂಚರಿಸಲು ಮುಕ್ತ ಅವಕಾಶ ನೀಡಲಾಗಿದೆ. ಮಾಧ್ಯಮಗಳ ಸಹಿತ ಸಾಮಾಜಿಕ ಜಾಲತಾಣದಲ್ಲಿ ರಸ್ತೆ ಬಂದ್‌ನ ಬಗ್ಗೆ ಮಾಹಿತಿ ರವಾನಿಸಲಾಗಿದ್ದರೂ ಸಹ ಕೆಲವು ಸಂಚಾರಿಗಳು ಮಾಹಿತಿ ಇಲ್ಲದೇ ರೈಲ್ವೇ ಗೇಟ್‌ನ ಹತ್ತಿರ ಬಂದು ಬದಲಿ ರಸ್ತೆಯನ್ನು ಬಳಸಿಕೊಂಡಿದ್ದು ಕಂಡು ಬಂದಿದೆ. ಕಾಮಗಾರಿ ನಡೆದರೂ ಪಾದಚಾರಿಗಳಿಗೆ ಅವಕಾಶ ನೀಡಲಾಗಿದೆ. ಹತ್ತಿರದ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಸಹ ಬಸ್‌ನಲ್ಲಿ ಬರುವವರು ಹಳೆಯಂಗಡಿಯಲ್ಲಿಯೇ ಇಳಿದು ನಡೆದುಕೊಂಡು ಬಂದಿದ್ದಾರೆ. ಪಕ್ಷಿಕೆರೆ ಮಾರ್ಗವಾಗಿ ಬರುವವರು ಮಾತ್ರ ರಿûಾ ಅಥವಾ ಖಾಸಗಿ ವಾಹನಗಳ ಸಹಾಯ ಪಡೆದಿದ್ದಾರೆ. ಪಕ್ಷಿಕೆರೆ ನಿವಾಸಿಗಳು ದ್ವಿಚಕ್ರ ವಾಹನ ಗಳಲ್ಲಿ ಕೊಪ್ಪಲ ರಸ್ತೆಯನ್ನು ಬಳಸಿದರೇ, ತೋಕೂರು ಗ್ರಾಮಸ್ಥರು ಕಲ್ಲಾಪು ರಸ್ತೆಯನ್ನು ಬಳಸಿಕೊಂಡಿದ್ದಾರೆ.
ಕಿನ್ನಿಗೋಳಿಯಿಂದ ಪಕ್ಷಿಕೆರೆ ರಸ್ತೆಯಾಗಿ ಸಂಚರಿಸುವ ಸರ್ವಿಸ್ ಬಸ್‌ಗಳು ಕಲ್ಲಾಪು ಮತ್ತು ಕೆಂಚನಕೆರೆ ಮೂಲಕ ಕೆ.ಎಸ್. ರಾವ್ ರಸ್ತೆಯ ಮೂಲಕ ಹಳೆಯಂಗಡಿ ಹೆದ್ದಾರಿಯನ್ನು ಸಂಪರ್ಕಿಸಿದ್ದಾರೆ. ಲಾರಿ ಮತ್ತಿತರ ಘನವಾಹಗಳು ಸಹ ಕಲ್ಲಾಪು ರಸ್ತೆಯನ್ನು ಬಳಸಿಕೊಂಡಿದೆ. ಹಳೆಯಂಗಡಿಯ ಮುಖ್ಯ ಜಂಕ್ಷನ್‌ನಲ್ಲಿ ಮಂಗಳೂರು ಉತ್ತರ ವಲಯದ ಸಂಚಾರಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಹೋಂ ಗಾರ್ಡ್‌ಗಳ ಮೂಲಕ ಸಾರ್ವಜನಿಕರಿಗೆ ಬದಲಿ ರಸ್ತೆಯ ಬಗ್ಗೆ ಮಾಹಿತಿ ನೀಡಿದರು.
ಮೂಲ್ಕಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕುಸುಮಾಧರ ಅವರ ಸಹಿತ ಸಿಬಂದಿ ಸಹ ವಿಶೇಷ ಬೀಟ್‌ಗಳನ್ನು ನಡೆಸಿ ಯಾವುದೇ ರೀತಿಯಲ್ಲಿ ಕಾಮಗಾರಿಗೆ ಅಡ್ಡಿ ಆಗದಂತೆ ಎಚ್ಚರಿಕೆ ವಹಿಸಿದರು.
ನಲುಗಿದ ಕೊಪ್ಪಲ ರಸ್ತೆ..?
ಹಳೆಯಂಗಡಿ ಸುತ್ತಮುತ್ತ ಇರುವ ನಾಗರಿಕರು ತಮ್ಮ ವಾಹನಗಳನ್ನು ಇಂದಿರಾನಗರದ ಮೂಲಕ ಕೊಪ್ಪಲ ರಸ್ತೆಯನ್ನು ಬಳಸಿಕೊಂಡು ಹಳೆಯಂಗಡಿ ಹೆದ್ದಾರಿಯನ್ನು ಸಂಪರ್ಕಿಸುತ್ತಿದ್ದು, ತೀರ ಇಕ್ಕಟ್ಟಿನ ತಿರುವ ಮುರುವು ಸಹಿತ ರಸ್ತೆ ಕಿರಿದಾಗಿರುವ ಕೊಪ್ಪಲ ರಸ್ತೆಯು ವಾಹನಗಳ ಸಂಚಾರದಿಂದ ನಲುಗಿದ್ದು, ಸೇತುವೆಯ ಕೆಳಗೆ ಮಣ್ಣಿನ ರಸ್ತೆ ಸಹಿತ ಸಣ್ಣ ಕೆರೆಯ ಪ್ರದೇಶ, ರಸ್ತೆಯೊಂದಿಗೆ ಇರುವ ಮನೆಗಳು ಅದರ ಆವರಣ ಗೋಡೆಯ ಕಿರು ರಸ್ತೆಯಲ್ಲಿ ಘನವಾಹಗಳು ಸಂಚರಿಸಿದರೇ ರಸ್ತೆ ಕೆಡುವುದು ನಿಶ್ಚಿತ ಎಂದು ಸ್ಥಳೀಯರು ತಮ್ಮ ಆತಂಕವನ್ನು ಪತ್ರಿಕೆಯೊಂದಿಗೆ ತೋಡಿಕೊಂಡರು.
ನೆನಪಾದ ಮೇಲ್ಸೇತುವೆ.?
ಹಳೆಯಂಗಡಿ ರೈಲ್ವೇ ಕ್ರಾಸಿಂಗ್‌ಗೆ ಅತೀ ಬೇಡಿಕೆಯಲ್ಲಿರುವ ಮೇಲ್ಸೇತುವೆ ಯೋಜನೆ ಶುಕ್ರವಾರ ಮತ್ತೆ ನೆನಪಾದವು, ನಿರಂತರ ವಾಹನಗಳ ಸಂಚಾರ ಹಾಗೂ ಗೇಟ್ ಅಳವಡಿಸುವಾಗ ಇರುವ ರಸ್ತೆ ಒತ್ತಡದ ಜತೆಗೆ ನಿರಾತಂಕವಾಗಿ ಸಾಗಲು ಮೇಲ್ಸೇತುವೆ ಇದ್ದಿದ್ದಲ್ಲಿ ಇಂದು ರಸ್ತೆಯನ್ನು ಸಹ ಬಂದ್ ಮಾಡುವ ಆವಶ್ಯಕತೆಯೇ ಇರುತ್ತಿರಲಿಲ್ಲ, ಜನಪ್ರತಿನಿಧಿಗಳ ಭರವಸೆ ಅ ಧಿಕಾರಿಗಳ ಭೇಟಿ, ಬದಲಾಗುತ್ತಿರುವ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಬೇಸರದಿಂದ ಹಿರಿಯ ಗ್ರಾಮಸ್ಥರೊಬ್ಬರು ಹೇಳಿಕೊಂಡರು.
ಹಳಿ ಅಳವಡಿಸುವ ಕಾರ್ಯ ಆರಂಭ
ಮಂಗಳೂರಿನಿಂದ ಹಳೆಯಂಗಡಿಯ ರೈಲ್ವೇ ಕ್ರಾಸಿಂಗ್‌ನವರೆಗೆ ಈಗಾಗಲೇ ಈ ಹಳಿಗಳನ್ನು ಅಳವಡಿಸುವ ಕಾರ್ಯವನ್ನು ನಡೆಸಿದೆ. ಹಳೆಯಂಗಡಿಯ ಪಕ್ಕದ ಕಲ್ಲಾಪುವಿನ ರೈಲ್ವೇ ಕ್ರಾಸಿಂಗ್‌ನಲ್ಲಿ ಕಳೆದ ಮೂರು ತಿಂಗಳಿನ ಹಿಂದೆಯೇ ನಡೆಸಲಾಗಿದೆ. ಇಲ್ಲಿ ರಸ್ತೆಯೊಂದರ ಕಿರು ಸೇತುವೆಯ ನಿರ್ಮಾಣ ಮಾಡುವಾಗ ರಸ್ತೆಯನ್ನು ಬಂದ್ ಮಾಡಿದ್ದಾಗ ಈ ಸಮಯದಲ್ಲಿಯೇ ರೈಲ್ವೇ ಹಳಿಯ ಕಾರ್ಯ ನಡೆಸಲಾಗಿದೆ. ಇನ್ನುಳಿದಂತೆ ಮೂಲ್ಕಿ ವ್ಯಾಪ್ತಿಯ ಕೊಲಕಾಡಿ ಹಾಗೂ ಮೈಲೊಟ್ಟು ಬಳಿಯ ಕ್ರಾಸಿಂಗ್‌ನಲ್ಲಿ ಹಳಿಯನ್ನು ಅಳವಡಿಸುವ ಕಾರ್ಯ ನಡೆಯಲು ಬಾಕಿಯಾಗಿದೆ ಎಂದು ಮೂಲ್ಕಿ ವ್ಯಾಪ್ತಿಯ ಎಲ್ಲ ಕ್ರಾಸಿಂಗ್‌ನ ನಿರ್ವಹಣೆ ನಿಗಾ ನಡೆಸುತ್ತಿರುವ ಚಂದ್ರಹಾಸ್ “ಉದಯವಾಣಿ ಸುದಿನಕ್ಕೆ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.