Rain ಐದು ತಾಲೂಕುಗಳಲ್ಲಿ ಮಳೆ ಕೊರತೆ !ಹಿಂಗಾರು ಪೂರ್ಣಗೊಳ್ಳಲು ತಿಂಗಳಷ್ಟೇ ಬಾಕಿ
Team Udayavani, Dec 5, 2023, 11:43 PM IST
ಮಂಗಳೂರು: ಹಿಂಗಾರು ಅವಧಿ ಪೂರ್ಣ ಗೊಳ್ಳಲು ನಾಲ್ಕು ವಾರಗಳಷ್ಟೇ ಬಾಕಿ ಉಳಿದಿದ್ದು, ಒಟ್ಟಾರೆ ಕರಾವಳಿಯಲ್ಲಿ ವಾಡಿಕೆಯಂತೆ ಮಳೆಯಾದರೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಐದು ತಾಲೂಕುಗಳಲ್ಲಿ ಭಾರೀ ಮಳೆ ಕೊರತೆ ಉಂಟಾಗಿದೆ.
ಮೂಲ್ಕಿಯಲ್ಲಿ 297.9 ಮಿ.ಮೀ. ವಾಡಿಕೆ ಮಳೆಯಲ್ಲಿ 252.8 ಮಿ.ಮೀ. ಮಳೆಯಾಗಿ ಶೇ. 15ರಷ್ಟು ಕೊರತೆ, ಉಡುಪಿಯಲ್ಲಿ 268.7 ಮಿ.ಮೀ. ವಾಡಿಕೆಯಲ್ಲಿ 262.5 ಮಿ.ಮೀ. ಮಳೆಯಾಗಿ ಶೇ. 2ರಷ್ಟು ಕೊರತೆ, ಬೈಂದೂರಿನಲ್ಲಿ 253.8 ಮಿ.ಮೀ. ವಾಡಿಕೆ ಮಳೆ 226.6 ಸುರಿದು ಶೇ.11 ಕೊರತೆ, ಬ್ರಹ್ಮಾವರದಲ್ಲಿ 298.3 ಮಿ.ಮೀ. ವಾಡಿಕೆ ಮಳೆ, 220.5 ಮಿ.ಮೀ. ಮಳೆಯಾಗಿ ಶೇ. 26 ಕೊರತೆ, ಕಾಪುವಿನಲ್ಲಿ 295.3 ಮಿ.ಮೀ. ವಾಡಿಕೆ ಮಳೆಯಲ್ಲಿ 231.6 ಮಿ.ಮೀ. ಮಾತ್ರ ಸುರಿದಿದ್ದು ಶೇ. 22ರಷ್ಟು ಕೊರತೆ ಉಂಟಾಗಿದೆ. ಆದರೆ ಬೆಳ್ತಂಗಡಿಯಲ್ಲಿ ಶೇ. 39, ಬಂಟ್ವಾಳದಲ್ಲಿ ಶೇ. 60, ಮಂಗಳೂರಿನಲ್ಲಿ ಶೇ. 6, ಪುತ್ತೂರಿನಲ್ಲಿ ಶೇ. 43, ಸುಳ್ಯದಲ್ಲಿ ಶೇ. 39, ಮೂಡುಬಿದಿರೆ ಶೇ. 32, ಕಡಬದಲ್ಲಿ ಶೇ. 66, ಉಳ್ಳಾಲದಲ್ಲಿ ಶೇ. 49, ಕಾರ್ಕಳದಲ್ಲಿ ಶೇ. 6, ಕುಂದಾಪುರದಲ್ಲಿ ಶೇ. 0, ಹೆಬ್ರಿಯಲ್ಲಿ ಶೇ. 46ರಷ್ಟು ಮಳೆ ಹೆಚ್ಚಳವಾಗಿದೆ.
ಕರಾವಳಿಯಲ್ಲಿ ಈ ಬಾರಿಯ ಮುಂಗಾರು ಅವಧಿಯಲ್ಲಿ ನಿರೀಕ್ಷಿತ ಮಳೆ ಸುರಿದಿಲ್ಲ. ಪರಿಣಾಮ ವಾಡಿಕೆಗಿಂತ ಶೇ. 19ರಷ್ಟು ಕಡಿಮೆ ಮಳೆಯಾಗಿತ್ತು. ಇದೇ ಕಾರಣಕ್ಕೆ ಉತ್ತಮ ಹಿಂಗಾರು ನಿರೀಕ್ಷೆ ಮಾಡಲಾಗಿತ್ತು. ಆದರೆ ಆರಂಭಿಕ ದಿನಗಳಲ್ಲಿ ಭಾರೀ ಮಳೆ ಕೊರತೆ ಎದುರಾಗಿತ್ತು. ಬಳಿಕ ಆಗಾಗ್ಗೆ ಮಳೆ ಸುರಿದು ಸದ್ಯ ಹಿಂಗಾರು ಅವಧಿಯಲ್ಲಿ ಕರಾವಳಿಯಲ್ಲಿ ಶೇ. 4ರಷ್ಟು ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ದ. ಕ. ಜಿಲ್ಲೆಯಲ್ಲಿ ಶೇ. 42ರಷ್ಟು ಹೆಚ್ಚಳ ಮತ್ತು ಉಡುಪಿ ಜಿಲ್ಲೆಯಲ್ಲಿ ವಾಡಿಕೆ ಯಷ್ಟೇ ಮಳೆಯಾಗಿದೆ. ಉತ್ತರ ಕನ್ನಡದಲ್ಲಿ ಶೇ. 30ರಷ್ಟು ಮಳೆ ಕೊರತೆ ಇದೆ.
ರಾಜ್ಯದಲ್ಲಿ ಕರಾವಳಿಯಲ್ಲಿ
ಮಾತ್ರ ಮಳೆ ಹೆಚ್ಚಳ !
ರಾಜ್ಯದ ನಾಲ್ಕೂ ವಿಭಾಗಗಳ ಅಂಕಿ ಅಂಶದಂತೆ ಕರಾವಳಿಯಲ್ಲಿ ಹಿಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸುರಿದಿದೆ. ಐಎಂಡಿ ಮಾಹಿತಿಯ ಪ್ರಕಾರ ಅಕ್ಟೋಬರ್ 1ರಿಂದ ಡಿಸೆಂಬರ್ 5ರ ವರೆಗೆ ದಕ್ಷಿಣ ಒಳನಾಡಿನಲ್ಲಿ ಶೇ. 30 ಮಳೆ ಕೊರತೆ, ಉತ್ತರ ಒಳನಾಡಿನಲ್ಲಿ ಶೇ. 69 ಕೊರತೆ, ಮಲೆನಾಡಿನಲ್ಲಿ ಶೇ. 18 ಕೊರತೆ ಇದೆ. ಆದರೆ ಕರಾವಳಿ ಭಾಗದಲ್ಲಿ ಮಾತ್ರ ಶೇ. 4ರಷ್ಟು ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಒಟ್ಟಾರೆ ರಾಜ್ಯದಲ್ಲಿ ಶೇ. 38ರಷ್ಟು ಕೊರತೆ ಇದೆ.
ಕರಾವಳಿಯಲ್ಲಿ ಮಳೆ ಲೆಕ್ಕಾಚಾರ (ಹಿಂಗಾರು)
(261 ಮಿ.ಮೀ. ವಾಡಿಕೆ ಮಳೆ)
ವರ್ಷ ಮಳೆ ಪ್ರಮಾಣ (ಶೇ.)
2016 ಶೇ. -57
2017 ಶೇ. -25
2018 ಶೇ. -28
2019 ಶೇ. 124
2020 ಶೇ. 27
2021 ಶೇ. 122
2022 ಶೇ. -14
2023 ಶೇ. 4
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.