ಮಳೆ ನೀರು ಕೊಯ್ಲು, ಜಲಮೂಲಗಳ ಸಂರಕ್ಷಣೆ ಅಗತ್ಯ; ರಾಜೇಂದ್ರ ಕಲ್ಬಾವಿ
Team Udayavani, Feb 8, 2024, 12:25 PM IST
ಬಾವುಟಗುಡ್ಡೆ: ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸೋಶಿಯಲ್ ವರ್ಕ್ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನವಿಭಾಗದ ವತಿಯಿಂದ ಭಾರತದಲ್ಲಿ ಪರಿಸರ ನ್ಯಾಯ: ಸಮಸ್ಯೆಗಳು, ಸವಾಲುಗಳು ಮತ್ತು ಭವಿಷ್ಯ ಎಂಬ ವಿಷಯದ ಕುರಿತು ಸಂಪ್ರತಿ 2024 ಎಂಬ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಎರಿಕ್ ಮಥಾಯಸ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಮಾತನಾಡಿ,
ಪರಿಸರವನ್ನು ಆರಾಧಿಸಬೇಕು ಎಂದ ಅವರು, ಪರಿಸರದ ಅನೇಕ ಸಮಸ್ಯೆಗಳು ಮತ್ತು ಸುಸ್ಥಿರ ಅಭಿವೃದ್ಧಿಯ ನಿರೀಕ್ಷೆಗಳ
ಕುರಿತು ವಿವರಿಸಿದರು.
ಮಳೆ ನೀರು ಕೊಯ್ಲು ಮತ್ತು ಜಲಮೂಲಗಳ ಸಂರಕ್ಷಣೆ ಅಗತ್ಯ. ನೀರು ಉಳಿಸಲು ಹಾಗೂ ಪರಿಸರ ಉಳಿಸಲು ಪ್ರತಿ ಮನೆ ರೀಚಾರ್ಜ್ ಪಿಟ್ ಮಾಡಬೇಕು. ಪ್ಲಾಸ್ಟಿಕ್ ಚೀಲಗಳ ಬದಲಿಗೆ ಬಟ್ಟೆಯ ಚೀಲಗಳನ್ನು ಉಪಯೋಗಿಸಬೇಕು. ನಾವೆಲ್ಲರೂ ಜೊತೆಗೂಡಿ ಪರಿಸರದ ಮೇಲೆ ಬದಲಾವಣೆಯನ್ನು ತರಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಪ್ರಭಾರ ಉಪಕುಲಪತಿ ವಂ| ಡಾ| ಪ್ರವೀಣ್ ಮಾರ್ಟಿಸ್ ಮಾತನಾಡಿ, ವಿದ್ಯಾರ್ಥಿಗಳು ಆರೋಗ್ಯಕರ ಜೀವನಶೈಲಿಯತ್ತ ತಮ್ಮ ಮನಃಸ್ಥಿತಿಯನ್ನು ಬದಲಾಯಿಸಲು ಪರಿಸರದ ಬಗ್ಗೆ ಕಲಿಯುವ ಪರಿಕಲ್ಪನೆಯು ಮೂಲ ಆವಶ್ಯಕತೆಯಾಗಿದೆ ಎಂದರು.
ರಿಜಿಸ್ಟ್ರಾರ್ ಮತ್ತು ಪರೀಕ್ಷಾ ನಿಯಂತ್ರಕ ಡಾ| ಅಲ್ವಿನ್ ಡೇಸಾ, ಮಾಫೇ ಬ್ಲಾಕ್‌ನ ನಿದೇಏಶಕಿ ಡಾ| ಲೊವೀನಾ ಲೋಬೋ,
ಪಿಜಿ ಸೋಶಿಯಲ್ ವರ್ಕ್ ವಿಭಾಗ ಮುಖ್ಯಸ್ಥೆ ಡಾ| ಶ್ವೇತಾ ರಸ್ಕಿನ್ಹಾ ಮತ್ತು ಸಂಪ್ರತಿ 2024ರ ವಿದ್ಯಾರ್ಥಿ ಸಂಯೋಜಕ ಅಲ್ಡಿನ್ ಡಿ’ಸೋಜಾ ವೇದಿಕೆಯಲ್ಲಿದ್ದರು. ಮೂರು ಪ್ಯಾನೆಲ್ ಚರ್ಚೆಗಳು ನಡೆದವು.
ಬೆಂಗಳೂರಿನ ಕ್ರಿಸ್ಟು ಜಯಂತಿ (ಸ್ವಾಯತ್ತ) ಕಾಲೇಜಿನ ಮಾಧ್ಯಮ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಎ.ಬಿ.
ಆಗಸ್ಟಿನ್ ಅವರು ಪರಿಸರ ನ್ಯಾಯಕ್ಕಾಗಿ ಮಾಧ್ಯಮ ನೇತೃತ್ವದ ಉಪಕ್ರಮಗಳ ಕುರಿತು ಮಾತನಾಡಿದರು. ಪರಿಸರ ನ್ಯಾಯದ ಕಡೆಗೆ ಸ್ವಯಂಸೇವಾ ಸಂಸ್ಥೆಯ ಧೋರಣೆ ಕುರಿತು ಉಡುಪಿಯ ಬೇರು ಪರಿಸರ ಸೇವೆಗಳ ಸಂಸ್ಥಾಪಕಿ ಮತ್ತು ಸಿಇಒ ದಿವ್ಯಾ ಹೆಗ್ಡೆ, ಬೆಂಗಳೂರಿನ ಕಾರ್ಪೋರೆಟ್ ಸಂವಹನ, ಸಿಎಸ್‌ಆರ್ ಮತ್ತು ಸುಸ್ಥಿರತೆಯ ನಿರ್ದೇಶಕಿ, ಮುಖ್ಯಸ್ಥೆ ದೀಪಾ ಶಶಿಧರನ್, ಪರಿಸರ ಸಾಮಾಜಿಕ ನ್ಯಾಯ ಮತ್ತು ಪರಿಸರದ ಕುರಿತು ಮಾತನಾಡಿದರು.
ಸಮಾರೋಪ
ಸಂಜೆ ಸಮಾರೋಪ ಕಾರ್ಯಕ್ರಮ ನಡೆಯಿತು. ತೆಲಂಗಾಣ, ಆಂಧ್ರಪ್ರದೇಶದ ಹೈಕೋರ್ಟ್‌ನ ವಕೀಲೆ, ಪ್ರಜಾ ವುದ್ಯುಮಾಲ
ಸಂಗೀತಭಾವ ಸಮಿತಿಯ ರಾಷ್ಟ್ರೀಯ ಸಂಚಾಲಕಿ ಹೇಮಲಲಿತಾ ಮುಖ್ಯ ಅತಿಥಿಯಾಗಿದ್ದರು. ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಪ್ರಭಾರ ಹಣಕಾಸು ಅಧಿಕಾರಿ ರೆ| ವಂ| ವಿನ್ಸೆಂಟ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
ಹೊಸ ವರ್ಷಾಚರಣೆಗೆ ಡ್ರಗ್ಸ್ ಪಾರ್ಟಿ: ಪೊಲೀಸ್ ನಿಗಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್.ಕೆ. ಪಾಟೀಲ್
Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.