ಮಳೆಕೊಯ್ಲು ಅಳವಡಿಕೆಯತ್ತ ಅಪಾರ್ಟ್‌ಮೆಂಟ್‌ಗಳ ಒಕ್ಕೊರಳ ನಿರ್ಧಾರ
"ಮನೆ ಮನೆಗೆ ಮಳೆಕೊಯ್ಲು' ಉದಯವಾಣಿ ಅಭಿಯಾನದ ಯಶಸ್ಸು
Team Udayavani, Jul 25, 2019, 5:00 AM IST
ಮಹಾನಗರ: ಉದಯವಾಣಿಯ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಮನೆ, ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಳೆಕೊಯ್ಲು ಅಳವಡಿಕೆ ಕಾರ್ಯ ನಡೆಯುತ್ತಿದೆ.
ಅದರಲ್ಲಿಯೂ ನಗರದ ಬಹಳಷ್ಟು ಅಪಾರ್ಟ್‌ಮೆಂಟ್‌ಗಳಲ್ಲಿ ಈಗ ಮಳೆಕೊಯ್ಲು ಅಳವಡಿಸುವತ್ತ ಅಲ್ಲಿನ ನಿವಾಸಿಗಳ ಅಸೋಸಿಯೇಷನ್‌ಗಳು ಕಾರ್ಯಪ್ರವೃತ್ತರಾಗುತ್ತಿರುವುದು ಉತ್ತಮ ಬೆಳವಣಿಗೆ. ಏಕೆಂದರೆ, ನಗರದಲ್ಲಿ ಕುಡಿಯುವ ನೀರಿನ ಬೇಡಿಕೆ ಹಾಗೂ ಉಪಯೋಗವು ಅಪಾರ್ಟ್‌ಮೆಂಟ್‌ಗಳಲ್ಲಿ ಜಾಸ್ತಿ ಇದೆ. ಹೀಗಿರುವಾಗ, ಇರುವ ನೀರಿನ ಮೂಲವನ್ನು ಅಥವಾ ಮಳೆ ನೀರನ್ನು ಸದ್ಬಳಕೆ ಮಾಡುವತ್ತ ಎಲ್ಲ ಅಪಾರ್ಟ್‌ಮೆಂಟ್‌ಗಳು ಗಮನಹರಿಸಿದರೆ, ಭವಿಷ್ಯದಲ್ಲಿ ಮಂಗಳೂರಿನಂಥ ನಗರದಲ್ಲಿ ತಲೆದೋರಬಹುದಾದ ನೀರಿನ ಸಮಸ್ಯೆ ದೊಡ್ಡ ಪರಿಹಾರ ದೊರೆಯಬಹುದು.
ಉದಯವಾಣಿಯ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಣೆಗೊಂಡು ನಗರದಲ್ಲಿರುವ ಬಹಳಷ್ಟು ಅಪಾರ್ಟ್‌ಮೆಂಟ್‌ಗಳಲ್ಲಿ ಮಳೆಕೊಯ್ಲು ಅಳವಡಿಸುವ ಮೂಲಕ ಬೇರೆ ಅಪಾರ್ಟ್‌ಮೆಂಟ್‌ಗಳಿಗೂ ಸ್ಫೂರ್ತಿ ನೀಡುತ್ತಿರುವುದು ಗಮನಾರ್ಹ.
ಅಪಾರ್ಟ್‌ಮೆಂಟ್‌ನಲ್ಲಿ ಮಳೆಕೊಯ್ಲು
ಈ ಬಾರಿ ಬೇಸಗೆಯಲ್ಲಿ ಉಂಟಾದ ನೀರಿನ ತಾತ್ವಾರ ಹಾಗೂ ಪತ್ರಿಕೆಯ ಮಳೆಕೊಯ್ಲು ಅಭಿಯಾನದಿಂದ ಪ್ರೇರಿತಗೊಂಡು ನಗರದ ವಿ.ಟಿ.ರಸ್ತೆಯ ಜ್ಞಾನೇಶ್ವರಿ ಆಪಾರ್ಟ್‌ಮೆಂಟ್‌ನಲ್ಲಿ ಮಳೆಕೊಯ್ಲು ಅಳವಡಿಸಲಾಗಿದೆ.
ಒಟ್ಟು 50 ಮನೆಗಳಿರುವ ಈ ಅಪಾರ್ಟ್‌ಮೆಂಟ್‌ನಲ್ಲಿ ಬೋರ್‌ವೆಲ್ ವ್ಯವಸ್ಥೆ ಇದೆ. ಬೇಸಗೆ ಕಾಲದಲ್ಲಿ ನೀರಿನ ಒತ್ತಡ ಕಡಿಮೆಯಾಗುತ್ತಿತ್ತು. ಕೆಲವೊಮ್ಮೆ ಟ್ಯಾಂಕರ್ ನೀರು ಅವಲಂಬಿಸಬೇಕಾಗಿತ್ತು. ಈ ಸಮಸ್ಯೆಗೆ ಪರಿಹಾರ ಮಳೆಕೊಯ್ಲು ಮಾಡುವುದರಿಂದ ಸಿಗಬಹುದು ಎಂಬ ನಂಬಿಕೆಯಿಂದ ಅಳವಡಿಸಿದ್ದೇವೆ. ಕಟ್ಟಡಕ್ಕೆ ಬೀಳುವ ಮಳೆ ನೀರನ್ನು ಪೈಪ್ ಮೂಲಕ ಬೋರ್‌ವೆಲ್ಗೆ ಸಂಪರ್ಕ ಕೊಡಲಾಗಿದೆ. ಒಟ್ಟು ಒಂದೂವರೆ ಲಕ್ಷ ರೂ. ಖರ್ಚಾಗಿದೆ ಎಂದು ಹೇಳುತ್ತಾರೆ ಕೆ.ಎನ್. ಆಳ್ವ ಪತ್ರಿಕೆಗೆ ತಿಳಿಸಿದ್ದಾರೆ.
ಮಂಗಳ ಸಮೂಹ ಸಂಸ್ಥೆಗಳಲ್ಲೂ ಮಳೆಕೊಯ್ಲು ಅಳವಡಿಕೆ
ಮಂಗಳ ಸಮೂಹ ಸಂಸ್ಥೆಯೂ ಕೈ ಜೋಡಿಸಿದೆ, ಸಂಸ್ಥೆಯ ನಿರ್ದೇಶಕ ಡಾ| ಗಣಪತಿ ಅವರ ಮುತುವರ್ಜಿಯಿಂದ ತಮ್ಮ ಎಲ್ಲ ಸಂಸ್ಥೆಗಳಲ್ಲಿ ಮಳೆಕೊಯ್ಲು ಅಳವಡಿಸಿ ಮಾದರಿಯಾಗಿದ್ದಾರೆ.
ಮಂಗಳ ಕಾಲೇಜು ಸಮೂಹದ ಸಾಧಾರಣ ಒಂದೂವರೆ ಲಕ್ಷ ಚದರ ಮೀಟರ್‌ನಷ್ಟು ದೊಡ್ಡ ಕಟ್ಟಡವನ್ನು ಸಂಪೂರ್ಣವಾಗಿ ಬಳಸಿಕೊಂಡು ಮಳೆ ಕೊಯಿಲು ಮಾಡಿ ಬಂದ ಎಲ್ಲ ನೀರನ್ನು ಕಾಲೇಜು ಕ್ಯಾಂಪಸ್‌ನಲ್ಲಿ ಆಳವಡಿಸಿದ 5 ಬೋರ್‌ವೆಲ್ಗಳಲ್ಲಿ ನೀರಿನ ಮರು ಪೂರಣ ಮಾಡಿಸಲಾಗುತ್ತಿದೆ. ಇನ್ನೂ ಸಂಸ್ಥೆಯ ಹಾಸ್ಟೆಲ್ಗಳ ಬಳಕೆಯ ನೀರನ್ನು ಇಂಗಿಸಲಾಗುತ್ತಿದೆ. ಮಂಗಳ ಆಸ್ಪತ್ರೆಯ ಕಟ್ಟಡದ ನೀರನ್ನು ಆಸ್ಪತ್ರೆ ಆವರಣದ ಬಾವಿ ಮತ್ತು ಬೋರ್‌ವೆಲ್ಗಳಿಗೆ ಮರುಪೂರಣ ಮಾಡಲಾಗುತ್ತಿದೆ.
ಮಳೆ ನೀರು ವ್ಯರ್ಥವಾಗಿ ಹರಿದುಹೋಗುತ್ತಿದ್ದು, ಅದನ್ನು ತಡೆದು ಬಳಸುವ ಉದ್ದೇಶದಿಂದ ಮಳೆಕೊಯ್ಲು ಮಾಡಲಾಗುತ್ತಿದೆ. ಪ್ರತಿ ಮನೆ, ಸಂಸ್ಥೆಗಳಲ್ಲೂ ಮಳೆಕೊಯ್ಲು , ಜಲಮರುಪೂರಣದಂತಹ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.
ಅಭಿಯಾನಕ್ಕೆ ಒಂದು ತಿಂಗಳು: ಜನಾಭಿಪ್ರಾಯ
ತುಂಬಾ ಉಪಯುಕ್ತ
-ಸುಜಯಾ ಹರೀಶ್, ಬೆಳುವಾಯಿ
ಜಾಗೃತಿ ಹುಟ್ಟಿಸಲು ಪತ್ರಿಕೆ ಕಾರಣ
ನೀರುಳಿಕೆಗೆ ಸ್ಫೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.