ಶಾಲಾ-ಕಾಲೇಜುಗಳಿಗೂ ತಲುಪಿದ ಮಳೆಕೊಯ್ಲು ಜಾಗೃತಿ
ಮನೆ ಮನೆಗೆ ಮಳೆಕೊಯ್ಲು' ಉದಯವಾಣಿ ಅಭಿಯಾನದ ಯಶಸ್ಸು
Team Udayavani, Jul 20, 2019, 5:00 AM IST
ಮಹಾನಗರ: ಉದಯವಾಣಿಯ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದಾಗಿ ಇದೀಗ ಎಲ್ಲೆಡೆ ಜನಜಾಗೃತಿ ಕಾರ್ಯಕ್ರಮಗಳ ಆಯೋಜನೆಗೊಳ್ಳತ್ತಿದೆ. ಜತೆಗೆ ಜನರು ಕೂಡ ಸ್ವಯಂ ಪ್ರೇರಣೆಯಿಂದ ಮಳೆಕೊಯ್ಲು ಅಳವಡಿಸಿಕೊಂಡು ಜಲ ಸಂರಕ್ಷಣೆಗೆ ಕೈಜೋಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಅದರಂತೆ ಕಾಟಿಪಳ್ಳ ಸರಕಾರಿ ಪಪೂ ಕಾಲೇಜು ಪ್ರೌಢಶಾಲೆಯಲ್ಲಿ ‘ಉದಯವಾಣಿ’ ಸಹಯೋಗದಲ್ಲಿ ‘ಮನೆಮನೆಗೆ ಮಳೆಕೊಯ್ಲು’ ಕಾರ್ಯಾಗಾರವು ಶುಕ್ರವಾರ ಜರಗಿತ್ತು.
ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲ್ಬಾವಿ ಅವರು ಕಾರ್ಯಾಗಾರ ನಡೆಸಿಕೊಡುವ ಮೂಲಕ ಶಾಲೆಯ ಅಧ್ಯಾಪಕರು, ಮಕ್ಕಳಲ್ಲಿ ಮಳೆಕೊಯ್ಲು ಸೇರಿದಂತೆ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದರು. ಮಳೆಗಾಲದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಕರಾವಳಿ ಪ್ರದೇಶ ಬೇಸಗೆಯಲ್ಲಿ ಹನಿ ನೀರಿಗೂ ಪರದಾಡುವಂತಾಗಿದೆ. ಮುಂದಿನ ದಿನಗಳಲ್ಲಿ ಊಹಿಸಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಈಗಲೇ ಎಚ್ಚೆತ್ತುಕೊಂಡು ಮಳೆ ನೀರನ್ನು ಇಂಗಿಸುವ, ಸಂಗ್ರಹಿಸುವ ಕಾರ್ಯದಲ್ಲಿ ತೊಡಗಬೇಕು ಎಂದರು.
ಬಾವಿ, ಬೋರ್‌ವೆಲ್ಗಳಿಗೆ ಹೇಗೆ ನೀರಿಂಗಿಸುವುದು ಎಂಬ ಬಗ್ಗೆ ಸವಿಸ್ತಾರ ಮಾಹಿತಿ ನೀಡಲಾಯಿತು. ಇಂಗುಗುಂಡಿಗಳ ನಿರ್ಮಾಣ, ಸ್ಥಳೀಯ ಕೆರೆ, ಸಾರ್ವಜನಿಕ ಬಾವಿಗಳಿಗೆ ನೀರು ಮರುಪೂರಣ, ಮಳೆಗಾಲದ ನೀರನ್ನು ನೇರವಾಗಿ ದೈನಂದಿನ ಅವಶ್ಯಗಳಿಗೆ ಬಳಸುವ ವಿಧಾನಗಳ ಬಗ್ಗೆ ತಿಳಿಸಿಕೊಟ್ಟರು.
ಸಂಸ್ಥೆಯ ಉಪ ಪ್ರಾಂಶುಪಾಲ ಬಾಬು ಪಿ.ಎಂ. ಮಾತನಾಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶಯದಂತೆ 2019ರ ವರ್ಷವನ್ನು ಜಲ ವರ್ಷ ಎಂದು ಆಚರಿಸಲಾಗುತ್ತಿದೆ. ‘ಉದಯವಾಣಿ’ ಪತ್ರಿಕೆಯ ಸಹಯೋಗದೊಂದಿಗೆ ಈ ಸಂಸ್ಥೆಯ ಸುಮಾರು 120 ಮಂದಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ‘ಮನೆಮನೆಗೆ ಮಳೆಕೊಯ್ಲು’ ಕಾರ್ಯಕ್ರಮ ಮಹತ್ವದ್ದಾಗಿದೆ ಎಂದರು.
ಶಿಕ್ಷಕರಾದ ನಿತಿನ್ ಕುಮಾರ್, ಮಂಜುನಾಥ್ ನಾಯ್ಕ, ಪ್ರಿಯಾ ಎ., ಶ್ವೇತಾ ಹಳದೀಪುರ, ರಫೀಕ್ ಉಪಸ್ಥಿತರಿದ್ದರು. ಇಕೋ ಕ್ಲಬ್ ಸಂಯೋಜಕಿ ಪ್ರವೀಣಾ ನಿರೂಪಿಸಿದರು.
ಮನೆಯಲ್ಲಿ ಅಳವಡಿಸಿದರು; ಪಕ್ಕದ ಮನೆಗೂ ಪ್ರೇರಣೆಯಾದರು
ಮೂಲ್ಕಿ ಕಾರ್ನಾಡ್‌ನ ಕ್ರಿಸ್ಟಿ ಸೋನ್ಸ್ ಅವರು ತಮ್ಮ ಮನೆಯಲ್ಲಿ ವಾರದ ಹಿಂದೆ ಮಳೆಕೊಯ್ಲು ವಿಧಾನವನ್ನು ಅಳವಡಿಸಿದ್ದಾರೆ. ‘ನಮ್ಮ ಮನೆಯಲ್ಲಿ ನೀರಿನ ಸಮಸ್ಯೆ ಈವರೆಗೆ ಕಾಣಿಸಿಲ್ಲ. ಆದರೆ ‘ಉದಯವಾಣಿ’ಯಲ್ಲಿ ಮಳೆಕೊಯ್ಲು ಅಭಿಯಾನ ನೋಡಿದ ಬಳಿಕ ಮಳೆಕೊಯ್ಲು ಅಳವಡಿಸುವ ಯೋಚನೆಯಾಯಿತು. ಹಾಗಾಗಿ ಯೂಟ್ಯೂಬ್ ನೋಡಿಕೊಂಡು ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಕ್ರಿಸ್ಟಿ ಸೋನ್ಸ್ ಪತ್ನಿ ಮೇವಿಸ್ ಸೋನ್ಸ್.
ಇಳೆಗೆ ಮಳೆ ಅಪರೂಪವಾಗುತ್ತಿರುವ ಸಂದರ್ಭ ಯಾವುದೇ ರೀತಿಯಲ್ಲೂ ಮಳೆಯ ನೀರು ವ್ಯರ್ಥವಾಗಬಾರದು ಎನ್ನುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ. ಮುಂದೆ ನೀರಿನ ಸಮಸ್ಯೆ ಎದುರಾಗದು ಎಂಬ ವಿಶ್ವಾಸವಿದೆ. ನಮ್ಮ ಮನೆಗೆ ಅಳವಡಿಸಿದ ಬಳಿಕ ಪಕ್ಕದ ಮನೆಯವರೂ ಅಳವಡಿಸಿದ್ದಾರೆ. ಅದೇ ರೀತಿ ಎಲ್ಲರೂ ಈ ವಿಧಾನ ಅಳವಡಿಸಲಿ ಎನ್ನುತ್ತಾರೆ ಅವರು. ಮಳೆಯ ನೀರು ಮನೆಯ ಟೆರೇಸ್‌ನಲ್ಲಿರುವ ಪ್ಲಾಸ್ಟಿಕ್ ಡ್ರಮ್‌ಗೆ ಬೀಳುವಂತೆ ಮಾಡಲಾಗಿದ್ದು, ಇದರಲ್ಲಿ ಮರಳು, ಜಲ್ಲಿ, ಇದ್ದಿಲು ಹಾಕಲಾಗಿದೆ. ಇದಕ್ಕೆ ಫಿಲ್ಟರ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಲ್ಲಿಂದ ನೇರವಾಗಿ ಪೈಪ್ ಮೂಲಕ ಮನೆಯ ಬಾವಿಗೆ ನೀರನ್ನು ಹರಿಸಲಾಗುತ್ತದೆ.
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ.ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000
ಪ್ರಶಂಸನೀಯ ಅಭಿಯಾನ
-ಜಯಕಲಾ ಜೆ. ಶೆಟ್ಟಿ, ಬಿಜೈ
ಮೇಲ್ಪಂಕ್ತಿ ಹಾಕಿಕೊಟ್ಟ ‘ಉದಯವಾಣಿ’
-ಸಾಂತಪ್ಪ ಯು., ಬಾಬುಗುಡ್ಡ, ಅತ್ತಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
PAK Vs SA: ಸರಣಿ ಕ್ಲೀನ್ ಸ್ವೀಪ್ ಗೈದ ಪಾಕಿಸ್ಥಾನ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
BCCI: ಇನ್ನೆರಡು ಟೆಸ್ಟ್ ನಿಂದ ಮೊಹಮ್ಮದ್ ಶಮಿ ಹೊರಕ್ಕೆ
Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.