ಆಧುನಿಕ ಭಾರತದ ಹರಿಕಾರ ರಾಜಾರಾಮ್ ಮೋಹನ್‌ರಾಯ್; ಡಾ| ಪಿ.ಎಸ್. ಯಡಪಡಿತ್ತಾಯ
ಮೋಹನ್‌ರಾಯ್ ಅವರ ಪ್ರಸ್ತುತತೆ' ವಿಷಯದ ಕುರಿತ 2 ದಿನಗಳ ವಿಚಾರಣ ಸಂಕಿರಣ
Team Udayavani, Jan 31, 2023, 3:16 PM IST
ಕೊಟ್ಟಾರ: ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಹಿಳೆಯರ ಸ್ವಾಭಿಮಾನಕ್ಕೆ ಪೂರಕವಾಗಿ ಹೋರಾಟ ಮಾಡಿ ಸತಿ ಸಹಗಮನ, ಬಾಲ್ಯ ವಿವಾಹ, ವಿಧವೆಯರಿಗೆ ಸಾಮಾಜಿಕ ಕಾರ್ಯ ಕ್ರಮಗಳಿಂದ ಬಹಿಷ್ಕಾರದಂತಹ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ಮಹಿಳಾ ಪರ ಧ್ವನಿ ಎತ್ತಿದ್ದ ರಾಜಾರಾಮ್ ಮೋಹನ್ ರಾಯ್ ಅವರು ಆಧುನಿಕ ಭಾರತದ ಹರಿಕಾರ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಡಾ| ಪಿ.ಎಸ್. ಯಡಪಡಿತ್ತಾಯ ವಿಶ್ಲೇಷಿಸಿದ್ದಾರೆ.
ಕೊಟ್ಟಾರ ಬಳಿಯ ಎ.ಜೆ. ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಪ್ರಾಯೋಜಕತ್ವ ಮತ್ತು ಲಕ್ನೋದ ಅನನ್ಯ ಇನ್‌ಸ್ಟಿಟ್ಯೂಟ್ ಫಾರ್ ಡೆವಲಪ್ ಮೆಂಟ್ ರಿಸರ್ಚ್ ಆ್ಯಂಡ್ ಸೋಶಿಯಲ್ ಆ್ಯಕ್ಷನ್ ಸಹಭಾಗಿತ್ವದಲ್ಲಿ ಸಮಾಜ ಸುಧಾರಕ ರಾಜಾರಾಮ್ ಮೋಹನ್ ರಾಯ್ ಅವರ 250ನೇ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾಗಿರುವ “ನವ ಭಾರತದಲ್ಲಿ ಮಹಿಳಾ ಸಶಕ್ತೀಕರಣ ಮತ್ತು ಪರಿವರ್ತನೆಯಲ್ಲಿ ರಾಜರಾಮ್ ಮೋಹನ್‌ರಾಯ್ ಅವರ ಪ್ರಸ್ತುತತೆ’ ವಿಷಯದ ಕುರಿತ 2 ದಿನಗಳ ವಿಚಾರಣ ಸಂಕಿರಣದ ಉದ್ಘಾಟನ ಸಮಾರಂಭದಲ್ಲಿ ಅವರು, ವಿಶೇಷ ಸಂಚಿಕೆಯನ್ನು ಅನಾ
ವರಣಗೊಳಿಸಿ ಮಾತನಾಡಿದರು.
ಅಂದಿನ ಕಾಲದಲ್ಲಿಯೇ ಎಲ್ಲ ಧರ್ಮ ಗ್ರಂಥಗಳನ್ನು ಓದಿ ತಿಳಿದುಕೊಂಡಿದ್ದ ರಾಜಾರಾಮ್ ಮೋಹನ್‌ರಾಯ್ ಅವರು, ಮಾನವೀಯತೆಯನ್ನು ಎತ್ತಿ ಹಿಡಿದವರು. ಭಾರತೀಯ ಸಮಾಜದ ಸುಧಾರಣೆ ಮತ್ತು ಆಧುನೀಕರಣ ಅವರ ಚಿಂತನೆಯಾಗಿದ್ದು, ಇಂದಿಗೂ ನಾವು ಮಾತನಾಡುತ್ತಿರುವ ಸಮಾನತೆ, ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಬೇರು ಅವರು ರಚಿಸಿದ ಬ್ರಹ್ಮ ಸಭಾ ಆಗಿದೆ ಎಂದರು.
ಲಕ್ನೋದ ಅನನ್ಯ ಇನ್ ಸ್ಟಿಟ್ಯೂಟ್ ಫೋರ್ ಡೆವಲಪ್‌ಮೆಂಟ್ ರಿಸರ್ಚ್ ಆ್ಯಂಡ್ ಸೋಶಿಯಲ್ ಆ್ಯಕ್ಷನ್ ನ ನಿರ್ದೇಶಕ ಡಾ| ಅವಧೇಶ್ ಕುಮಾರ್ ಸಿಂಗ್ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಎಜೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ| ಎ.ಜೆ. ಶೆಟ್ಟಿ ವಹಿಸಿದ್ದರು. ಎ.ಜೆ. ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಂಜ್‌ಮೆಂಟ್‌ನ ನಿರ್ದೇಶಕ ಡಾ| ಟಿ. ಜಯಪ್ರಕಾಶ್ ರಾವ್ ಸ್ವಾಗತಿಸಿದರು. ಸಂಯೋಜಕಿ ಪ್ರೊ| ಸ್ವಪ್ನಾ ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿ ಸಿದರು. ಸಹ ಸಂಯೋಜಕ ಡಾ| ರಾಜೇಶ್ ವಂದಿಸಿದರು. ದೀಕ್ಷಾ ರಾವ್ ನಿರೂಪಿಸಿದರು.
ಸೌಲಭ್ಯ ಪಡೆಯಲು ಮಹಿಳೆ ಸಮರ್ಥಳಾಗಲಿ
ಮುಖ್ಯ ಅತಿಥಿಯಾಗಿದ್ದ ಮಕ್ಕಳ ಹಕ್ಕುಗಳಿಗಾಗಿನ ವಿಶ್ವ ರಾಯಭಾರಿ ಡಾ| ವನಿತಾ ಎನ್. ತೋರ್ವಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯರು ಅನುಭವಿಸುತ್ತಿದ್ದ ದೌರ್ಜನ್ಯ, ನೋವು, ಅಸಮಾನತೆಯ ಪರಿಸ್ಥಿತಿ ಇಂದು ಭಿನ್ನವಾಗಿದ್ದರೂ ಮಹಿಳೆಯರ ಮೇಲಿನ ದೌರ್ಜನ್ಯ, ಅಪರಾಧ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿಲ್ಲದಿರುವುದು ದೌರ್ಭಾಗ್ಯ. ಹಾಗಿದ್ದರೂ ಮಹಿಳೆಯರು ತಮ್ಮನ್ನು ಅಬಲೆಯರು ಎಂದು ತಿಳಿಯದೆ ತಮಗೆ ಸರಕಾರ, ಸಮಾಜದಿಂದ ದೊರೆಯುವ ಸೌಲಭ್ಯ, ಹಕ್ಕನ್ನು ಪಡೆಯುವಲ್ಲಿ ಸಮರ್ಥಳಾಗಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.