ಸೇಟ್‌ಬ್ಯಾಂಕ್ ಪರಿಸರದಲ್ಲಿ 11ನೇ ವಾರದ ಶ್ರಮದಾನ
Team Udayavani, Feb 18, 2019, 6:05 AM IST
ಮಹಾನಗರ: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 11ನೇ ವಾರದ ಶ್ರಮದಾ ನವನ್ನು ನಗರದ ಸ್ಟೇಟ್‌ಬ್ಯಾಂಕ್ ಬಳಿಯಿರುವ ಸರ್ವಿಸ್ ಬಸ್ ನಿಲ್ದಾಣದಲ್ಲಿ ರವಿವಾರ ನಡೆಸಲಾಯಿತು.
ಪರಿಸರ ಪ್ರೇಮಿ ದಿನೇಶ್ ಹೊಳ್ಳ ಹಾಗೂ ಮನಪಾ ಆರೋಗ್ಯ ಅಧೀಕ್ಷಕ ಭರತ್‌ಕುಮಾರ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ದಿನೇಶ್ ಹೊಳ್ಳ, ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಸ್ವಚ್ಛತೆ ಅಭಿಯಾನ ಕಳೆದ ನಾಲ್ಕು ವರ್ಷಗಳಲ್ಲಿ ಮಂಗಳೂರಿನ ಜನರ ಮನಸ್ಸಿನಲ್ಲಿ ಅಪಾರ ಧನಾತ್ಮಕ ಬದಲಾವಣೆ ತಂದಿದೆ. ಇದರಿಂದ ಪ್ರೇರಿತ ಗೊಂಡು ಸಹ್ಯಾದ್ರಿ ಸಂಚಯ ತಂಡದಿಂದ ಪಶ್ಚಿಮ ಘಟ್ಟ ಸ್ವತ್ಛತಾ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಪ್ರಮುಖವಾಗಿ ಜನರ ಅಂತರಂಗ ಶುದ್ಧಿಯಾಗಬೇಕಿದೆ. ಹಾಗಾದಾಗ ಸಹಜವಾಗಿಯೇ ಬಹಿರಂಗ ಶುಚಿತ್ವವನ್ನು ಕಾಣಬಹುದು ಎಂದರು.
ಶ್ರದ್ಧಾಂಜಲಿ
ಕಾರ್ಯಕ್ರಮಕ್ಕೂ ಮುನ್ನ ಪುಲ್ವಾಮಾದಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಸುಭದ್ರಾ ಭಟ್, ಸರಿತಾ ಶೆಟ್ಟಿ, ವಸಂತಿ ನಾಯಕ್, ಯಶೋಧಾ ರೈ, ರಾಜೇಶ್ವರಿ, ಡಾ| ಸುಭಾಶ್ಚಂದ್ರ ರೈ ಮತ್ತಿತರರು ಉಪಸ್ಥಿತರಿದ್ದರು. ಅಭಿಯಾನದ ಮಾರ್ಗದರ್ಶಿ ಕ್ಯಾ| ಗಣೇಶ್ ಕಾರ್ಣಿಕ್ ಸ್ವಾಗತಿಸಿದರು.
ಬಸ್ ನಿಲ್ದಾಣದ ರೇಲಿಂಗ್‌ಗೆ ಬಣ್ಣ
ಕಳೆದ ರವಿವಾರ ಸರ್ವಿಸ್ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಪೂರ್ತಿ ಗೊಂಡಿರದ ಕಾರಣ ಈ ರವಿವಾರ ಮುಂದುವರಿಸಲಾಯಿತು. ಪ್ರಮುಖವಾಗಿ ಬಸ್ ನಿಲ್ದಾಣ ಕಂಬಗಳು ಹಾಗೂ ರೇಲಿಂಗ್ ಗಳನ್ನು ಶುಚಿ ಮಾಡಿ ಬಣ್ಣ ಬಳಿದು ಅಂದಗೊಳಿಸಲಾಯಿತು. ಇದಕ್ಕಾಗಿ ಪ್ರತಿ ಕಂಬಕ್ಕೆ ತಲಾ ಇಬ್ಬರು ಸ್ವಯಂ ಸೇವಕರಂತೆ ಒಟ್ಟು ನಲವತ್ತು ಕಂಬಗಳಿಗೆ ಸ್ವಯಂ ಸೇವಕರನ್ನು ನಿಯೋಜಿಸಲಾಯಿತು. ಹಿರಿಯರಾದ ವಿಟ್ಠಲದಾಸ್ ಪ್ರಭು, ಕಮಲಾಕ್ಷ ಪೈ, ಉಷಾ ಅಮೃತ ಕುಮಾರ ಸಹಿತ ಅನೇಕರು ಕೆಲಸದಲ್ಲಿ ತೊಡಗಿಸಿಕೊಂಡರು.
ಬಸ್ ನಿಲ್ದಾಣ ಸ್ವಚ್ಛತೆ
ಸ್ವಾಮಿ ಏಕಗಮ್ಯಾನಂದಜೀ ಪೊರಕೆ ಹಿಡಿದು ಕಾರ್ಯಕರ್ತರೊಂದಿಗೆ ಕಸ ಗುಡಿಸಿದರು. ಅಲ್ಲಲ್ಲಿ ಬಿದ್ದಿದ್ದಕಸವನ್ನು ಹೆಕ್ಕಿ ಬಸ್ ನಿಲ್ದಾಣವನ್ನು ಸ್ವಯಂ ಸೇವಕರು ಸ್ವತ್ಛಗೊಳಿಸಿದರು. ಆನಂತರ ಹತ್ತಿರದಲ್ಲಿ ಕಸದ ರಾಶಿಯನ್ನು ತೆಗೆದು ಅಲ್ಲಿ ಕುಂಡಗಳನ್ನಿಡಲಾಯಿತು. ಅಲ್ಲಿ ಮತ್ತೆ ಕಸ ಬೀಳದಂತೆ ನಿಗಾ ವಹಿಸಲಾಯಿತು. ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು, ನಿವೇದಿತಾ ಬಳಗದ ಸದಸ್ಯರು ಬಸ್ ನಿಲ್ದಾಣದ ಸ್ವಚ್ಛತೆಯಲ್ಲಿ ಭಾಗಿಯಾದರು.
ಆಸನಗಳ ಅಳವಡಿಕೆ
ಸರ್ವಿಸ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಹಾಕಲಾಗಿದ್ದ ಆಸನಗಳು ಹಳೆಯದಾಗಿ ಮುರಿದು ಹೋಗಿದ್ದವು. ಸಾರ್ವಜನಿಕರಿಗೆ ಸೂಕ್ತ ಆಸನಗಳ ವ್ಯವಸ್ಥೆ ಇಲ್ಲದೇ ಹಲವು ಬಾರಿ ಜನರು ನೆಲದ ಮೇಲೆಯೇ ಕುಳಿತುಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಸ್ವಚ್ಛ ಮಂಗಳೂರು ಕಾರ್ಯಕರ್ತರು ಅಲ್ಲಿ ವ್ಯವಸ್ಥಿತವಾಗಿ ಆಸನಗಳನ್ನು ಜೋಡಿಸಿ ಅಳವಡಿಸುವ ಕಾರ್ಯವನ್ನು ಆರಂಭಿಸಿದ್ದರು. ಕಳೆದವಾರ 15 ಆಸನಗಳನ್ನು ಅಳವಡಿಸಿದ್ದರು. ಈ ರವಿವಾರ ಮತ್ತೆ 25 ಆಸನಗಳನ್ನು ಅಳವಡಿ
ಸಿದ್ದಾರೆ. ಡ್ರಿಲ್ ಮೂಲಕ ನೆಲವನ್ನು ಅಗೆದು ವಿಶೇಷ ವಿನ್ಯಾಸದ ಆಸನಗಳನ್ನು ಸಿಮೆಂಟ್ ಕಾಂಕ್ರೀಟ್ ಹಾಕಿ ಅಳವಡಿಸಲಾಯಿತು. ನಂತರ ವಿವಿಧ ಬಣ್ಣಗಳನ್ನು ಹಚ್ಚಲಾಗಿದೆ. ಅಭಿಯಾನದ ಪ್ರಧಾನ ಸಂಯೋಜಕ ದಿಲ್‌ರಾಜ್ ಆಳ್ವ ನೇತೃತ್ವ ವಹಿಸಿದ್ದರು. ಸುಭೋದಯ ಆಳ್ವ, ಅಕ್ಷಿತ ಅತ್ತಾವರ, ಶಿಶಿರ ಅಮೀನ್, ಪುನೀತ್ ಪೂಜಾರಿ, ದಿನೇಶ್, ಲೋಕೇಶ್ ಕೊಟ್ಟಾರಿ, ಮಸಾ ಹಿರೊ, ಜಗನ್ ಕೋಡಿಕಲ್, ಆನಂದ ಅಡ್ಯಾರ್ ಶ್ರಮದಾನ ದಲ್ಲಿ ಪಾಲ್ಗೊಂಡರು. ಎಂಆರ್‌ಪಿಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.
ಕಲಾಕೃತಿಗಳ ರಚನೆ
ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಕೆನರಾ ಕಾಲೇಜಿನ ಆವರಣ ಗೋಡೆಗಳ ಮೇಲೆ ಈ ಹಿಂದೆ ಅನೇಕರು ಅನಧಿಕೃತ ಭಿತ್ತಿ ಚಿತ್ರಗಳನ್ನು ಹಚ್ಚಿ ಗೋಡೆಯ ಅಂದಗೆಡಿಸುತ್ತಿದ್ದರು. ಹಲವಾರು ಸಲ ತೆಗೆದರೂ ಮುಂದುವರಿಯುತ್ತಿತ್ತು. ಆದರೆ ಕಳೆದ ವರ್ಷ ಆ ಗೋಡೆಯನ್ನು ಸ್ವಚ್ಛಗೊಳಿಸಿ ಬಣ್ಣ ಬಳಿಯಲಾಗಿತ್ತು. ಅನಂತರ ಚಿತ್ರಕಲಾವಿದರಿಂದ ಸಾಮಾಜಿಕ ಜಾಗೃತಿಯನ್ನುಂಟು ಮಾಡುವ ಚಿತ್ರ ಕಲಾಕೃತಿಗಳನ್ನು ರಚಿಸಲಾಯಿತು. ಕಳೆದ ಬಾರಿ ಉಳಿದ ಅದೇ ಗೋಡೆಯ ಮತ್ತೊಂದು ಪಾರ್ಶ್ವದ ಭಾಗವನ್ನು ಚಿತ್ರಗಳನ್ನು ಬರೆದು ಅಂದಗೊಳಿಸಲಾಗಿದೆ. ತುಳುನಾಡಿನ ವೈಭವವನ್ನು ನೆನಪಿಸುವ ಯಕ್ಷಗಾನ, ದೈವಾರಾಧನೆ, ಕಂಬಳ, ಕೋಳಿಅಂಕ, ಹುಲಿಕುಣಿತ ಬೃಹತ್ ಚಿತ್ರಗಳನ್ನು ಕಲಾವಿದರಾದ ವಿಕ್ರಮ ಶೆಟ್ಟಿ, ಸಂದೀಪ, ಶಿವರಂಜನ್ ಬಿಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.