ಮೇ 25ರಿಂದ ದೇಶೀಯ ವಿಮಾನ ಸಂಚಾರಕ್ಕೆ ಅಸ್ತು: ಮಂಗಳೂರು ವಿಮಾನ ನಿಲ್ದಾಣ ಸಜ್ಜು
Team Udayavani, May 22, 2020, 8:57 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ದೇಶೀಯ ಪ್ರಯಾಣಿಕ ವಿಮಾನಗಳ ಹಾರಾಟಕ್ಕೆ ಸಿದ್ಧವಾಗಿರುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಸೂಚನೆ ನೀಡಿದ್ದರೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭಕ್ಕೆ ಜೂನ್ ಮೊದಲ ವಾರದ ವರೆಗೆ ಕಾಯಬೇಕಾಗಬಹುದು!
ಮೇ 25ರಿಂದ ಯಾನ ಆರಂಭಿಸುವಂತೆ ವಿಮಾನ ನಿಲ್ದಾಣಕ್ಕೆ ಸೂಚನೆ ಯಷ್ಟೇ ಬಂದಿದೆ. ವೇಳಾಪಟ್ಟಿ ಬಂದ ಬಳಿಕವಷ್ಟೇ ಸ್ಪಷ್ಟತೆ ದೊರೆಯಲಿದೆ. ಬಳಿಕ ವಿಮಾನ ಯಾನ ಸಂಸ್ಥೆಗಳ ಆನ್‌ಲೈನ್ ಬುಕ್ಕಿಂಗ್ ಆರಂಭವಾಗಲು 1 ವಾರ ಬೇಕಾಗಬಹುದು. ಸದ್ಯ ಆನ್‌ಲೈನ್‌ನಲ್ಲಿ ಜೂನ್ 1ರ ವರೆಗೆ ಕೆಲವು ನಗರಗಳ ಪ್ರಯಾಣದರ ಪರಿಶೀಲಿಸಿದಾಗ ದುಪ್ಪಟ್ಟಾಗಿರುವುದು ಗೋಚರಿಸುತ್ತಿದೆ.
ಕೆಲವು ವಿಮಾನಗಳ ನಿರೀಕ್ಷೆ
ಈ ಮಧ್ಯೆ ಹೈದರಾಬಾದ್ ಸೇರಿ ದಂತೆ ದೇಶದ ವಿವಿಧ ನಗರಗಳಿಂದ ಮಂಗಳೂರಿಗೆ ಕೆಲವು ಪ್ರಯಾಣಿಕರು ಆಗಮಿಸುವ ನಿರೀಕ್ಷೆ ಇರುವುದರಿಂದ ಬೆರಳೆಣಿಕೆ ವಿಮಾನಗಳು ಮಂಗಳೂರಿ ನಿಂದ ಮುಂದಿನ ವಾರದಲ್ಲಿ ಕಾರ್ಯಾ ಚರಣೆ ನಡೆಸುವ ಸಾಧ್ಯತೆ ಇದೆ. ಮಾರ್ಕಿಂಗ್, ಮಾರ್ಗಸೂಚಿ ಯಾನ ಆರಂಭದ ಸುಳಿವು ದೊರೆತಿರುವ ಕಾರಣ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈಗಾಗಲೇ ಮಾರ್ಕಿಂಗ್ ಮಾಡಲಾಗಿದೆ. ಕೋವಿಡ್ ಕಾರಣ ಪ್ರಯಾಣಿ ಕರು ಯಾವ ಮುನ್ನೆಚ್ಚರಿಕೆ ಅನುಸರಿಸಬೇಕು ಎಂಬ ಮಾರ್ಗ ಸೂಚಿಯೂ ತಲುಪಿದೆ.
2 ತಿಂಗಳ ಬಳಿಕ
ಮಂಗಳೂರಿನಿಂದ ಅಂತಾರಾ ಷ್ಟ್ರೀಯ ವಿಮಾನ ಯಾನ ಮಾ. 22ರಂದು, ದೇಶೀಯ ಯಾನ ಮಾ. 25ರಂದು ಸ್ಥಗಿತಗೊಂಡಿತ್ತು. ಮುಂಬಯಿಯಿಂದ ಬಂದಿಳಿದ ವಿಮಾನವೇ ದೇಶದೊಳಗಿನ ಕೊನೆಯ ಸಂಚಾರವಾಗಿತ್ತು. ಲಾಕ್‌ಡೌನ್ ಮಧ್ಯೆಯೂ ಏರ್ ಆ್ಯಂಬುಲೆನ್ಸ್ ಬಂದಿತ್ತು. ಏರ್ ಇಂಡಿಯಾ ಎಕ್ಸ್ ಪ್ರಸ್‌ನ 3 ವಿಮಾನಗಳು ಲಾಕ್‌ಡೌನ್ ಕಾರಣ ಮಂಗಳೂರಿನಲ್ಲಿ ಬಾಕಿಯಾ ಗಿದ್ದವು. ಅದೇ ವಿಮಾನಗಳ ಮೂಲಕ ಕೆಲವು ದಿನದ ಹಿಂದೆ “ವಂದೇ ಭಾರತ’ ಯೋಜನೆಯಡಿ ದುಬಾೖ, ಮಸ್ಕತ್‌ನಿಂದ ಅನಿವಾಸಿ ಕನ್ನಡಿಗರನ್ನು ಏರ್‌ಲಿಫ್ಟ್ ಮಾಡಲಾಗಿದೆ.
ಮಂಗಳೂರಿನಿಂದ 7 ವಿಮಾನ?
ಮಂಗಳೂರಿನಿಂದ 7 ವಿಮಾನ ಗಳನ್ನು ಆರಂಭಿಸುವ ಬಗ್ಗೆ ಸಚಿವಾಲಯ ಗ್ರೀನ್ ಸಿಗ್ನಲ್ ನೀಡಿದ್ದು, ದಿನಾಂಕ ಶುಕ್ರವಾರ ನಿಗದಿಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಮುಂಬಯಿ, ಬೆಂಗಳೂರಿಗೆ ತಲಾ ಎರಡರಂತೆ ಒಟ್ಟು 4 ಸ್ಪೈಸ್ ಜೆಟ್ ಮತ್ತು ಬೆಂಗಳೂರು, ಮುಂಬಯಿ, ಚೆನ್ನೈಗೆ ತಲಾ ಒಂದರಂತೆ ಇಂಡಿಗೋ ವಿಮಾನ ಸಂಚಾರಕ್ಕೆ ಗುರುವಾರ ಸಂಜೆ ಒಪ್ಪಿಗೆ ಲಭಿಸಿದೆ.
4 ನಗರಗಳಿಗೆ ಸಂಪರ್ಕ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಪೈಸ್ ಜೆಟ್, ಇಂಡಿಗೋ, ಏರ್ ಇಂಡಿಯಾ ವಿಮಾನಯಾನ ಸೇವೆಗಳಿವೆ. ಲಾಕ್‌ಡೌನ್‌ಗೂ ಮೊದಲು ದೇಶೀಯವಾಗಿ ಬೆಂಗಳೂರಿಗೆ 10, ಹೈದರಾಬಾದ್‌ಗೆ 2, ಚೆನ್ನೈಗೆ 2 ಹಾಗೂ ಮುಂಬಯಿಗೆ 6 ವಿಮಾನಗಳು ಸಂಚರಿಸುತ್ತಿದ್ದವು. ಹೊಸದಿಲ್ಲಿ ವಿಮಾನ ಎರಡು ತಿಂಗಳ ಹಿಂದೆ ಸ್ಥಗಿತಗೊಂಡಿತ್ತು. ಬೆಳಗಾವಿಗೆ ವಿಮಾನ ಓಡಾಟದ ಘೋಷಣೆ ಆಗಿದ್ದು, ಸಂಚಾರ ಆರಂಭವಾಗಿರಲಿಲ್ಲ. ವಿದೇಶಗಳಿಗೆ ದುಬಾೖ, ದೋಹಾ, ಕತಾರ್, ಶಾರ್ಜಾ, ಬಹ್ರೈನ್, ಕುವೈಟ್, ಮಸ್ಕತ್‌ಗೆ ಇಲ್ಲಿನ ವಿಮಾನ ಸಂಚರಿಸುತ್ತಿತ್ತು.
ದೇಶೀಯ ವಿಮಾನ ಸಂಚಾರದ ಬಗ್ಗೆ ಸಿದ್ಧವಾಗಿ ರುವಂತೆ ಸೂಚನೆ ಬಂದಿದೆ. ಆದರೆ ವಿಮಾನಗಳ ಪ್ರಯಾಣದ ವೇಳಾಪಟ್ಟಿ ಬಂದಿಲ್ಲ. ಪೂರ್ವಭಾವಿಯಾಗಿ ನಿಲ್ದಾಣದಲ್ಲಿ ಪ್ರಯಾಣಿಕ ಸ್ನೇಹಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
– ವಿ.ವಿ. ರಾವ್, ನಿರ್ದೇಶಕರು, ಮಂಗಳೂರು ಏರ್‌ಪೋರ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.