“ಸಾಧಕರ ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ’
Team Udayavani, Jul 6, 2019, 5:00 AM IST
ಮಹಾನಗರ: ಕೆಲವು ವರ್ಷಗಳಿಂದ ಕಥಾಬಿಂದು ಪ್ರಕಾಶನ ಸಂಸ್ಥೆಯು ಹಲವಾರು ಸಾಧಕರನ್ನು ಗುರುತಿಸಿ ಗೌರವಿ ಸುತ್ತಿರುವುದು ಶ್ಲಾಘನೀಯ ಎಂದು ಕಸಾಪ ಜಿಲ್ಲಾಧ್ಯಕ್ಷ ಎಸ್. ಪ್ರದೀಪ್‌ಕುಮಾರ್ ಕಲ್ಕೂರ ತಿಳಿಸಿದರು.
ಮಂಗಳಾದೇವಿಯ ರಂಗಮಂದಿ ರದಲ್ಲಿ ದ.ಕ. ಜಿಲಾಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಥಾಬಿಂದು ಪ್ರಕಾಶನ ಮತ್ತು ಕಲ್ಕೂರ ಪ್ರತಿಷ್ಠಾನ ಆಯೋಜಿಸಿದ್ದ ಸಂಗೀತ ಸಾಹಿತ್ಯ ಸಾಂಸ್ಕೃತಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಕೃತಿ ಬಿಡುಗಡೆ
ಪಿ.ವಿ. ಪ್ರದೀಪ್ ಕುಮಾರ್ ಅವರ “ಆ ಒಂದು ದಿನ’ 57ನೇ ಕೃತಿಯನ್ನು ಧಾರವಾಡ, ರಾಜ್ಯ ಹೈಕೋರ್ಟ್ ನ್ಯಾಯವಾದಿ ಡಾ| ರೇವಣ್ಣ ಬಳ್ಳಾರಿ ಬಿಡುಗಡೆಗೊಳಿಸಿದರು.
ನಾಡಿನ ಸಾಧಕರಾದ ಕೇಶವ ಶಕ್ತಿನಗರ (ಯಕ್ಷಗಾನ), ಡಾ| ಕೆ.ಆರ್. ನಾಥ್ (ಸಮಾಜ ಸೇವೆ), ಬಿ.ಕೆ. ಮಾಧವರಾವ್ (ಚಿತ್ರಕಲೆ), ಡಾ| ಸತೀಶ್ ಎನ್. ಬಂಗೇರ (ಸಮಾಜ ಸೇವೆ), ಜಯರಾಮ್ ಉಡುಪ (ಧಾರ್ಮಿಕ), ಡಿ.ಬಿ. ನಾಯಕ್ (ಸಮಾಜಸೇವೆ), ಪದ್ಮಾವತಿ ಸಚ್ಚಿದಾನಂದ ಗುಪ್ತ (ಅಲಂಕಾರ), ಶಾಂತಾ ಕುಂಟಿನಿ (ಸಾಹಿತ್ಯ), ಚಂದ್ರಹಾಸ ದೇವಾಡಿಗ (ಸಂಘಟನೆ), ಶಿಲ್ಪಿ ಕೆ. ಶಿವರಾಮ ಆಚಾ ರ್ಯ (ಕಲೆ), ಪರಂಜ್ಯೋತಿ ಕೃತಿಗೆ ವಿಶೇಷ ಪುರಸ್ಕಾರ ಲೇಖಕಿ ಕೆ. ಲಕ್ಷ್ಮೀಯವರಿಗೆ ಹಾಗೂ ಸ್ನಿತಿಕ್, ಸನ್ವಿತ್ ಕುಲಾಲ್, ಅನನ್ಯಾ, ಶೃಜನ್ಯಾ, ಆದ್ಯಾ ಅವರಿಗೆ ಕರ್ನಾಟಕ ಚೇತನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ತೀಯಾ ಸಮಾಜದ ಮಾಜಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಾಡ, ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಡುಪಿ ಪತ್ರಕರ್ತರ ವೇದಿಕೆಯ ಜಿಲ್ಲಾಧ್ಯಕ್ಷ ಡಾ| ಶೇಖರ ಅಜೆಕಾರು, ಭುವನಾಭಿರಾಮ ಉಡುಪ, ತಾರಸಿ ಕೃಷಿಕ ಡಾ| ಪಡ್ಡಂಬೈಲು ಕೃಷ್ಣಪ್ಪಗೌಡ ಹಾಗೂ ಯಶ್ವಿತ್ ಕಾಳಮ್ಮನೆ ಮತ್ತು ಸುಧಾರಾಜು, ಸುನೀತಾ, ಪ್ರದೀಪ್‌ಕುಮಾರ್ ಉಪಸ್ಥಿತರಿದ್ದರು.
ಕವಿಗೋಷ್ಠಿ
ಕವಿಗೋಷ್ಠಿಯಲ್ಲಿ ಸೋಮಶೇಖರ ಹಿಪ್ಪರಗಿ, ಇಬ್ರಾಹಿಂ ಖಲೀಲ್, ಅಪ್ನಾನ್ ಕರಾಯಾ, ಪ್ರೀತಮ್ ಮಿಜಾರು, ಅನ್ಸಾಲ್ ಚಿಪ್ಪಾರ್, ಗಣೇಶ್ ಅದ್ಯಪಾಡಿ, ಯಶವಂತ್ ಕುದ್ರೋಳಿ, ಡಾ| ಜಯಶ್ರೀ ಕದ್ರಿ, ಬಶೀರ್ ಅಹ್ಮದ್ ಬಂಟ್ವಾಳ, ಕೆ.ಆರ್. ಹಲಗಿ ಅವರು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ಬದ್ರುದ್ದೀನ್ ಕೂಳೂರು ಅಧ್ಯಕ್ಷತೆ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.