ನವೀಕೃತ ಬೆಥನಿ ಕಾನ್ವೆಂಟ್ ಚಾಪೆಲ್ ಉದ್ಘಾಟನೆ
Team Udayavani, May 9, 2018, 3:15 PM IST
ಮಹಾನಗರ: ನಗರದ ಬೆಂದೂರ್‌ನಲ್ಲಿರುವ ಬೆಥನಿ ಕಾನ್ವೆಂಟ್ ಚಾಪೆಲ್ ಕಟ್ಟಡವನ್ನು ನವೀಕರಿಸಲಾಗಿದ್ದು, ಅದರ ಉದ್ಘಾಟನೆಯನ್ನು ಮಂಗಳೂರಿನ ಬಿಷಪ್ ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅವರು ಮೇ 8ರಂದು ನೆರವೇರಿಸಿದರು.
ಬೆಳ್ಳಿ ಹಬ್ಬ
ಇದೇ ಸಂದರ್ಭ ಬೆಥನಿ ಸಂಸ್ಥೆಯ 27 ಮಂದಿ ಧರ್ಮ ಭಗಿನಿಯರು ತಮ್ಮ ಧಾರ್ಮಿಕ ಜೀವನದ ಬೆಳ್ಳಿ ಹಬ್ಬವನ್ನು ಆಚರಿಸಿದರು. ಬೆಥನಿ ಸಂಸ್ಥೆಯ ಸ್ಥಾಪಕ ದೇವರ ಸೇವಕ ಮೊ| ಆರ್.ಎಫ್.ಸಿ. ಮಸ್ಕರೇನ್ಹಸ್ ಅವರು 1934ರಲ್ಲಿ ಈ ಚಾಪೆಲ್‌ನ್ನು ಕಟ್ಟಿಸಿದ್ದು, ಅದು ಸಂಸ್ಥೆಯ ಪಾರಂಪರಿಕ ಕಟ್ಟಡವಾಗಿದೆ.
ಬಲಿ ಪೂಜೆ
ಬಿಷಪ್ ಅಲೋಶಿಯಸ್ ಡಿ’ಸೋಜಾ ಅವರು ಇತರ 6 ಮಂದಿ ಧರ್ಮ ಗುರುಗಳ ಜತೆ ಸೇರಿ ಬಲಿ ಪೂಜೆಯನ್ನು ಅರ್ಪಿಸಿದರು. ಬೆಂದೂರು ಸೈಂಟ್ ಸೆಬಾಸ್ಟಿಯನ್ ಚರ್ಚ್‌ನ ವಂ| ಆ್ಯಂಟನಿ ಶೆರಾ ಅವರು ಪ್ರವಚನ ನೀಡಿದರು. ಬೆಥನಿ ಸಂಸ್ಥೆಯ ಸುಪೀರಿಯರ್ ಜನರಲ್ ಸಿ| ರೋಸ್ ಸೆಲಿನ್ ಬೆಳ್ಳಿ ಹಬ್ಬ ಆಚರಣೆಯ ಸಂಭ್ರಮದಲ್ಲಿರುವ ಭಗಿನಿಯರನ್ನು ಅಭಿನಂದಿಸಿದರು. ಬಲಿ ಪೂಜೆಯ ಬಳಿಕ ಅಭಿನಂದನ ಸಮಾರಂಭ ಜರಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.