5,685 ಮೊಬೈಲ್ ಪತ್ತೆಗೆ ಪೊಲೀಸರಿಗೆ ಕೋರಿಕೆ !
"CEIR ಪೋರ್ಟಲ್' ಸೇವೆಯಿಂದ ದೂರುಗಳ ಸಂಖ್ಯೆಯಲ್ಲಿ ಹೆಚ್ಚಳ
Team Udayavani, May 29, 2023, 7:45 AM IST
ಮಂಗಳೂರು: ಮಂಗಳೂರು ನಗರ ಪೊಲೀಸರಿಗೆ ಕಳೆದ ಸುಮಾರು 8 ತಿಂಗಳಿಂದ ಸಾರ್ವ ಜನಿಕರಿಂದ ಕಳೆದು ಹೋದ 5,685 ಮೊಬೈಲ್ ಫೋನ್‌ಗಳ ಪತ್ತೆಗಾಗಿ ಕೋರಿಕೆಗಳು ಬಂದಿವೆ !.
ಈ ಹಿಂದೆ ಬರುತ್ತಿದ್ದ ದೂರುಗಳಿಗೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ದೂರುಗಳ ಸಂಖ್ಯೆ ಭಾರೀ ಹೆಚ್ಚಳವಾಗಿದೆ. ಇದಕ್ಕೆ “ಸಿಇಐಆರ್ (CEIR) ಪೋರ್ಟಲ್’ ಸೇವೆ ಮುಖ್ಯ ಕಾರಣ. ಇದರ ಮೂಲಕ ಮೊಬೈಲ್‌ನ ಶೀಘ್ರ ಪತ್ತೆ ಸಾಧ್ಯವಾಗುತ್ತಿರುವುದರಿಂದ ಮೊಬೈಲ್ ಕಳೆದುಕೊಂಡವರಲ್ಲಿ ವಿಶ್ವಾಸ ಹೆಚ್ಚಾಗಿದೆ. ಹಾಗಾಗಿ ಪೊಲೀಸರಿಗೆ ಮೊಬೈಲ್ ಪತ್ತೆಗೆ ಸಾವಿರಾರು ಕೋರಿಕೆಗಳು ಬರುತ್ತಿವೆ.
723 ಮೊಬೈಲ್ ಪತ್ತೆ
ಕಳೆದ 5 ತಿಂಗಳಲ್ಲಿ ಸಿಇಐಆರ್ ಪೋರ್ಟಲ್ ನೆರವಿನಿಂದ ಪೊಲೀಸರು 723 ಮೊಬೈಲ್ ಪೋನ್‌ಗಳನ್ನು ಪತ್ತೆ ಹಚ್ಚಿದ್ದು 300ಕ್ಕೂ ಅಧಿಕ ಮೊಬೈಲ್ ಗಳನ್ನು ವಶಕ್ಕೆ ಪಡೆದು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಇನ್ನುಳಿದ ಮೊಬೈಲ್ ಪೋನ್‌ಗಳನ್ನು ಶೀಘ್ರ ವಶಪಡಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳವು/ಮರೆವು
ಒಟ್ಟು ಪ್ರಕರಣಗಳ ಪೈಕಿ ಕೆಲವರು ಬಸ್, ರೈಲು ಮೊದಲಾದೆಡೆ ಮರೆತು ಬಿಟ್ಟು ಮೊಬೈಲ್ ಕಳೆದುಕೊಂಡಿದ್ದರೆ ಇನ್ನು ಕೆಲವರ ಮೊಬೈಲ್ ಕಳವಾಗಿವೆ. ಕೆಲವರು ನಗರ ಮತ್ತು ಹೊರ ವಲಯದಲ್ಲಿ ಮೊಬೈಲ್ ಕಳೆದುಕೊಂಡಿದ್ದರೆ ಇನ್ನು ಕೆಲವರು ಹೊರ ಜಿಲ್ಲೆ, ರಾಜ್ಯಗಳಿಗೆ ಹೋದಾಗ ಮೊಬೈಲ್ ಕಳೆದು ಕೊಂಡವರಿದ್ದಾರೆ.
ಸಹಾಯವಾಣಿ ಅನಂತರ ಹೆಚ್ಚು ಸ್ಪಂದನೆ
ಕಳೆದು ಹೋದ ಮೊಬೈಲ್ ಪತ್ತೆಗೆ ಕೇಂದ್ರ ಸರಕಾರ ಕಳೆದ ಸಪ್ಟೆಂಬರ್‌ನಲ್ಲಿ ದೇಶದಾದ್ಯಂತ “ಸಿಇಐಆರ್ ಪೋರ್ಟಲ್’ ಸೇವೆ ಆರಂಭಿಸಿದ್ದು ನಗರದಲ್ಲಿಯೂ ಈ ಸೇವೆ ಆರಂಭಗೊಂಡಿದೆ. ಈ ಸೇವೆಯ ಬಳಕೆ ಮತ್ತಷ್ಟು ಸುಲಭವಾಗಬೇಕೆಂಬ ಉದ್ದೇಶದಿಂದ ಕಳೆದ ಎಪ್ರಿಲ್‌ನಿಂದ ಪೊಲೀಸರು ವಾಟ್ಸಪ್ ಸಹಾಯವಾಣಿ ಆರಂಭಿಸಿದ್ದರು. 8277949183 ವಾಟ್ಸಪ್ ಸಂಖ್ಯೆಗೆ ಜಜಿ ಎಂದು ಮೆಸೇಜ್ ಮಾಡಿದರೆ ಪೊಲೀಸರಿಂದ ಲಿಂಕ್ ಬರುತ್ತದೆ. ಆ ಲಿಂಕ್‌ನಲ್ಲಿ ಸಿಇಐಆರ್ ಬಳಕೆ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ. ಈ ಸಹಾಯವಾಣಿ ಆರಂಭಿಸಿದ ಅನಂತರ ಮೊಬೈಲ್ ಪತ್ತೆಗೆ ಬರುವ ಕೋರಿಕೆಗಳು ಗಣನೀಯವಾಗಿ ಹೆಚ್ಚಳವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Mangaluru: ವೆನ್ಲಾಕ್‌ನಲ್ಲಿ ದೊರೆಯಲಿದೆ ಕಿಮೋಥೆರಪಿ
Ullal: ತೊಕ್ಕೊಟ್ಟು ಜಂಕ್ಷನ್ – ಭಟ್ನಗರ ರಸ್ತೆಯಲ್ಲಿ ಉಲ್ಟಾ ಸಂಚಾರ!
Kasganj: ವಿವಾಹಿತನಿಗೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!
Bantwal: ಬಿ.ಸಿ.ರೋಡ್‌ನ ರೈಲ್ವೇ ಇಲಾಖೆಯ ಜಾಗದಲ್ಲಿ ಕೊಳೆತ ತ್ಯಾಜ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.