ಮೂಲ್ಕಿಯಲ್ಲಿ ಚೈಲ್ಡ್ ಲೈನ್ ಘಟಕ ಸ್ಥಾಪನೆಗೆ ಆಗ್ರಹ
Team Udayavani, Nov 25, 2018, 12:26 PM IST
ಹಳೆಯಂಗಡಿ: ದೂರದ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಮಕ್ಕಳ ಸಂರಕ್ಷಣಾ ವ್ಯವಸ್ಥೆಯ ಉಪಕೇಂದ್ರ ಮೂಲ್ಕಿ ಹೋಬಳಿ ಮಟ್ಟದಲ್ಲಿಯೂ ಸ್ಥಾಪನೆಯಾಗಬೇಕು ಎಂದು ಹಳೆಯಂಗಡಿ ಗ್ರಾಮ ಪಂಚಾಯತ್‌ನ ಮಕ್ಕಳ ಗ್ರಾಮ ಸಭೆಯಲ್ಲಿ ಕೇಳಿಬಂತು.
ಹಳೆಯಂಗಡಿ ಇಂದಿರಾನಗರದ ಬೊಳ್ಳೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಂಚಾಯತ್ ಮಟ್ಟದ ಮಕ್ಕಳ ಗ್ರಾಮ ಸಭೆಯಲ್ಲಿ ಹಳೆಯಂಗಡಿ ಯುಬಿಎಂಸಿ ಶಾಲೆಯ ನಿತ್ಯಾನಂದ ಈ ಬಗ್ಗೆ ಸಭೆಯಲ್ಲಿ ಆಗ್ರಹಿಸಿ, ಬಾಲ ಕಾರ್ಮಿಕರ, ಲೈಂಗಿಕ ಶೋಷಣೆಯ ವಿರುದ್ಧ, ಶೀಘ್ರವಾಗಿ ಸ್ಪಂದಿಸಲು ಮಕ್ಕಳ ಚೈಲ್ಡ್‌ಲೈನ್ ಕೇಂದ್ರವನ್ನು ಮೂಲ್ಕಿ ಹೋಬಳಿ ಮಟ್ಟದಲ್ಲಿ ಸ್ಥಾಪಿಸಿದಲ್ಲಿ ಅನುಕೂಲವಾಗುತ್ತದೆ ಎಂದು ಆಗ್ರಹಿಸಿದರು ಇದಕ್ಕೆ ಪ್ರತಿಕ್ರಿಯಿಸಿದ ಚೈಲ್ಡ್‌ಲೈನ್ ಕೇಂದ್ರದ ಪ್ರತಿನಿಧಿ ದೀಕ್ಷಿತ್, ಈಗಾಗಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಏಕೈಕ ಕೇಂದ್ರವನ್ನು ಮಂಗಳೂರಿನಲ್ಲಿ ನಿರ್ವಹಿಸಲಾಗುತ್ತಿದೆ. ಮಾಸಿಕವಾಗಿ 80ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ. ತಾಲೂಕು ಮಟ್ಟದಲ್ಲಿಯೂ ಕೇಂದ್ರದ ಬೇಡಿಕೆ ಇದೆ. ಈ ಬಗ್ಗೆ ಈ ಗ್ರಾಮಸಭೆ ಸಹಿತ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಇಲಾಖೆಗೆ ನೀಡಿದಲ್ಲಿ ಅದನ್ನು ಮೇಲಾಧಿಕಾರಿಗಳಿಗೆ ರವಾನಿಸಿ ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂದರು.
ಪಂಚಾಯತ್ ಅಧ್ಯಕ್ಷೆ ಜಲಜಾ ಮಾತನಾಡಿ, ಶಾಲಾ ಮೈದಾನದ ಬಗ್ಗೆ ಸ್ಥಳೀಯ ಮಸೀದಿ ಸಮಿತಿಯವರಲ್ಲಿ ಚರ್ಚಿಸಲಾಗುವುದು. ಯುಬಿಎಂಸಿ ಶಾಲಾ ಶಿಕ್ಷಕರ ಬಗ್ಗೆ ಇಲಾಖೆಯೊಂದಿಗೆ ಮಾಹಿತಿ ಪಡೆಯಲಾಗುವುದು ಎಂದರು. ಹಳೆಯಂಗಡಿ ಜಂಕ್ಷನ್‌ನಲ್ಲಿ ರಸ್ತೆ ದಾಟಲು ಹೆದರಿಕೆಯಾಗುತ್ತದೆ. ಶಾಲೆಯಲ್ಲಿ ಖಾಯಂ ಶಿಕ್ಷಕರನ್ನು ನಿಯೋಜಿಸಿರಿ.
ಪೋಷಕರಿಲ್ಲದ ಒಂಟಿ ಮಕ್ಕಳಿಗೆ ಸಿಗುವ ಮಾಸಿಕ ಹಣವು ಬಂದಿಲ್ಲ, ಮಕ್ಕಳ ರಕ್ಷಣೆಗೆ ಸ್ಥಳೀಯವಾಗಿರುವವರು ಯಾರು, ಮಕ್ಕಳ ಲೈಂಗಿಕ ಶೋಷಣೆ ಹೇಗೆ, ಚೈಲ್ಡ್ ಲೈನ್ ಕರೆ ಹೇಗೆ ಮಾಡುವುದು, ಬಾಲ ಕಾರ್ಮಿಕರು ಯಾರು, ಸರಕಾರಿ ಮತ್ತು ಖಾಸಗಿ ಶಾಲೆಗಳು ಎಂಬ ಭೇದ ಬೇಡ ಇತ್ಯಾದಿ ಪ್ರಶ್ನೆಗಳು ಮಕ್ಕಳಿಂದ ಕೇಳಿ ಬಂತು.
ಆಕರ್ಷಕ ಜಾಥಾ, ಸಾಂಸ್ಕೃತಿಕ ಕಾರ್ಯಕ್ರಮ
ಮಕ್ಕಳಿಂದ ಸಭೆಯ ಆರಂಭದಲ್ಲಿ ಶಾಲಾ ವಠಾರದಲ್ಲಿ ವಿವಿಧ ಘೋಷಣೆಗಳ ಫಲಕಗಳೊಂದಿಗೆ ಆಕರ್ಷಕ ಜಾಥಾ ನಡೆಸಲಾಯಿತು. ಹಾಡು, ನೃತ್ಯ, ಪ್ರಹಸನ, ಜಾಗೃತಿ ಕಿರು ನಾಟಕದ ಜತೆಗೆ ಮಕ್ಕಳೇ ಸಂಪೂರ್ಣ ಕಾರ್ಯಕ್ರಮ ನಿರ್ವಹಿಸಿದರು. ಕಟೀಲು ಪದವಿ ಪೂರ್ವ ಕಾಲೇಜಿನ ಉಮೇಶ್ ಉದ್ಘಾಟಿಸಿದರು. ಬೊಳ್ಳೂರು ಶಾಲೆಯ ವಿದ್ಯಾರ್ಥಿ ನಾಯಕ ಸನತ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್‌ನ ಅಧ್ಯಕ್ಷೆ ಜಲಜಾ ಶುಭ ಹಾರೈಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯಶೋಧಾ, ಮಂಗಳೂರು ಚೈಲ್ಡ್ ಲೈನ್‌ನ ದೀಕ್ಷಿತ್, ಆರೋಗ್ಯ ಸಹಾಯಕಿ ಗೀತಾ, ಮೂಲ್ಕಿ ಪೊಲೀಸ್ ಸಿಬಂದಿ ಸಿದ್ದು ಎಸ್.ಬಿ., ಶಾಲಾ ಮುಖ್ಯ ಶಿಕ್ಷಕ ಜಯರಾಂ, ಪಂಚಾಯತ್ ಪ್ರಭಾರ ಪಿಡಿಒ ಅನಿತಾ ಕ್ಯಾಥರಿನ್, ಕಾರ್ಯದರ್ಶಿ ಶ್ರೀಶೈಲಾ ಮಾಹಿತಿ ನೀಡಿದರು. ಮಕ್ಕಳ ಸಂವಹನಕಾರರಾಗಿ ಸಾಮಾಜಿಕ ಕಾರ್ಯಕರ್ತೆ ನಂದಾ ಪಾಯಸ್ ನಿರ್ವಹಿಸಿದರು.
ಪಂಚಾಯತ್ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅಬ್ದುಲ್ ಖಾದರ್, ಚಿತ್ರಾ ಸುರೇಶ್, ಅಬ್ದುಲ್ ಅಜೀಜ್, ಚಂದ್ರ ಕುಮಾರ್ ಸಸಿಹಿತ್ಲು, ಮಂಗಳೂರು ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ನ ಕಾವ್ಯಾ, ಜೋಯ್ಲಿನ್, ಹಳೆಯಂಗಡಿ ಶಾಲೆಯ ಧನುಶ್, ಉರ್ದು ಶಾಲೆಯ ಬೀಫಾತುಮ್ಮಾ, ಯುಬಿಎಂಸಿ ಶಾಲೆಯ ಜನ್‌ಸಿನ್ ಮಿರೋಲ್, ಸಿಎಸ್‌ಐ ಶಾಲೆಯ ದಿಶಾ, ಸಸಿಹಿತ್ಲು ಶಾಲೆಯ ಪ್ರಣಮ್ಯಾ ಉಪಸ್ಥಿತರಿದ್ದರು. ಬೊಳ್ಳೂರು ಶಾಲೆಯ ಸಬ್ರಿನಾ ನಿರೂಪಿಸಿದರು.
ಸಮಸ್ಯೆಗಳನ್ನು ತೆರೆದಿಟ್ಟ ಮಕ್ಕಳು
ನಮ್ಮ ಶಾಲೆಯ ಕಟ್ಟಡದ ಪ್ರಥಮ ಮಹಡಿಯಿಂದ ಸಿಮೆಂಟ್‌ನ ಗೆಟ್ಟಿಗಳು ಕೆಳಗೆ ಬೀಳುತ್ತಿದೆ, ಕಿಟಕಿಗಳಿಲ್ಲ, ಚರಂಡಿಯಿಂದ ಕೆಟ್ಟ ವಾಸನೆ ಬರುತ್ತಿದೆ, ತ್ಯಾಜ್ಯವನ್ನು ಶಾಲೆಯ ಪಕ್ಕದಲ್ಲಿಯೇ ಸುರಿಯಲಾಗುತ್ತಿದೆ, ಸೂಕ್ತ ಆಟದ ಮೈದಾನ ಇಲ್ಲ ಎಂದು ಬೊಳ್ಳೂರು ಶಾಲೆಯ ಶಬ್ರಿನಾ, ಸೂರಜ್, ರಂಜಿತ್, ಜಾಹಿದ್ ಮಹಮದ್ ದೂರಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಅನಿತಾ ಕ್ಯಾಥರಿನ್, ಚರಂಡಿಗೆ ಮನೆಯ ನೀರು ಅದಕ್ಕೆ ಬಿಡಬಾರದು ಅವರವರ ಜಮೀನಿನಲ್ಲಿಯೇ ಇಂಗು ಗುಂಡಿ ರಚಿಸಿಕೊಳ್ಳಬೇಕು. ಇಂತಹ ಮನೆಯವರಿಗೆ ಸಭೆಯಲ್ಲಿ ಚರ್ಚಿಸಿ ನೋಟಿಸು ನೀಡಲಾಗುವುದು. ಶಾಲೆ ಸ್ವಚ್ಛವಾಗಿಡಲು ಮಕ್ಕಳೂ ಶ್ರಮಿಸುವಂತೆ ಶಿಕ್ಷಕರು ಸಹಕರಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Brijesh Chowta: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್ ಚೌಟ
Royal Movie; ಜ.24ರಿಂದ ʼರಾಯಲ್ʼ; ಟ್ರೇಲರ್ ರಿಲೀಸ್‌ಗೆ ತಂಡ ರೆಡಿ
Udupi: ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ: 3.25 ಲಕ್ಷ ಮೌಲ್ಯದ MDMA, ಚರಸ್ ವಶ
Bellary; ಪ್ರಿಯಾಂಕ್ ಖರ್ಗೆ ರಾಜೀನಾಮೆ ಖಂಡಿಸಿ ಬಿಜೆಪಿ ಪ್ರತಿಭಟನೆ
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.