ಐಸಿಸ್ ನಿಂದ ಕ್ರಿಪ್ಟೋ ವಾಲೆಟ್ಸ್ ಮೂಲಕ ಹಣ ಪಡೆಯುತ್ತಿದ್ದ ಉಡುಪಿಯ ರೇಶಾನ್, ಶಿವಮೊಗ್ಗದ ಹುಜೈರ್
Team Udayavani, Jan 6, 2023, 12:06 PM IST
ಮಂಗಳೂರು: ಐಸಿಸ್ ಉಗ್ರ ಸಂಚು ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಗುರುವಾರ ರಾಜ್ಯದ 6 ಕಡೆ ದಾಳಿ ನಡೆಸಿ, ಇಬ್ಬರನ್ನು ಬಂಧಿಸಲಾಗಿತ್ತು. ಈ ಬಗ್ಗೆ ಎನ್ಐಎ ಅಧಿಕೃತ ಪತ್ರಿಕಾ ಹೇಳಿಕೆ ನೀಡಿದ್ದು, ಕ್ರಿಪ್ಟೋ ವಾಲೆಟ್ ಮೂಲಕ ಐಸಿಎಸ್ ನಿಂದ ಹಣ ಪಡೆಯುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
ಗುರುವಾರ ಮಂಗಳೂರಿನ ಕಾಲೇಜೊಂದಕ್ಕೆ ದಾಳಿ ಮಾಡಿದ್ದ ಅಧಿಕಾರಿಗಳು ಉಡುಪಿ ಬ್ರಹ್ಮಾವರ ನಿವಾಸಿ ರೇಶಾನ್ ಶೇಖ್ ನನ್ನು ಬಂಧಿಸಿದ್ದರು. ಅಲ್ಲದೆ ಶಿವಮೊಗ್ಗದ ಟಿಪ್ಪು ಸುಲ್ತಾನ್ ನಗರದಲ್ಲಿ ಹುಜೈರ್ ಫರ್ಹಾನ್ ಎಂಬಾತನನ್ನು ಬಂಧಿಸಿದ್ದರು.
ತುಂಗಾ ತೀರದ ಬ್ಲಾಸ್ಟ್ ಸೇರಿದಂತೆ ಕೆಲವು ಪ್ರಕರಣಗಳ ಆರೋಪಿಯಾಗಿರುವ ಮಾಜ್ ಮುನೀರನು ತನ್ನ ಸಹವರ್ತಿ ಮತ್ತು ಸಹಪಾಠಿ ರೇಶನ್ ತಾಜುದ್ದಿನ್ ಶೇಖ್ ನನ್ನು ಪ್ರೇರೇಪಿಸಿದ್ದ. ಅಲ್ಲದೆ ಇಸ್ಲಾಮಿಕ್ ಸ್ಟೇಟ್ಸ್ ನ ಕೆಲಸಗಳಿಗಾಗಿ ಐಸಿಸ್ ನಿಂದ ರೇಶನ್ ಮತ್ತು ಹುಜೈರ್ ಕ್ರಿಪ್ಟೋ ವ್ಯಾಲೆಟ್ ಮೂಲಕ ದೇಣಿಗೆ ಪಡೆದಿದ್ದರು.
ಅಲ್ಲದೆ ದೊಡ್ಡ ಹಿಂಸಾತ್ಮಕ ಚಟುವಟಿಕೆಯ ಭಾಗವಾಗಿ ಬೆಂಕಿ ಹಚ್ಚುವುದು, ವಾಹನಗಳು ಗುರಿಯಾಗಿಸಿ ದಾಳಿ ಮಾಡುವುದು, ಮದ್ಯದ ಅಂಗಡಿಗಳು, ಗೋಡೌನ್‌ಗಳು ಸಂಸ್ಥೆಗಳನ್ನು ಗುರಿಯಾಗಿಸಿ ಹಿಂಸಾತ್ಮಕ ಕೃತ್ಯ ನಡೆಸುವವರಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ:Rare Video: ಸಮುದ್ರದ ಮಧ್ಯೆ ಪ್ರವಾಸಿಗರ ಕಣ್ಣೆದುರಲ್ಲೇ ಪುಟ್ಟ ಮರಿಗೆ ಜನ್ಮ ನೀಡಿದ ತಿಮಿಂಗಿಲ…
ಗುರುವಾರ ಬೆಳಗ್ಗೆ ಎನ್‌ಐಎ ತಂಡ ಕಾಲೇಜಿಗೆ ತೆರಳಿ ರೇಶಾನ್ ಶೇಖ್ ನನ್ನು ವಶಕ್ಕೆ ತೆಗೆದುಕೊಳ್ಳುವುದರ ಜತೆಗೆ ಆತನ ಲ್ಯಾಪ್‌ಟಾಪ್, ಪೆನ್ ಡ್ರೈವ್, ದ್ವಿಚಕ್ರವಾಹನ ಇತ್ಯಾದಿಗಳನ್ನೂ ಸ್ವಾಧೀನಪಡಿಸಿ ಕೊಂಡಿದೆ. ಆತನ ಸಹಪಾಠಿಗಳು, ಉಪನ್ಯಾಸಕರಿಂದ ಮಾಹಿತಿ ಪಡೆದುಕೊಂಡಿದ್ದು, ಆತನ ಚಟುವಟಿಕೆಗಳ ಬಗ್ಗೆ ವಿಚಾರಣೆ ನಡೆಸಿದೆ. ಅಲ್ಲದೆ ಬ್ರಹ್ಮಾವರ ವಾರಂಬಳ್ಳಿಯ ಆತನ ಮನೆಯಲ್ಲಿ ಶೋಧ ಕಾರ್ಯ ನಡೆಸಿದೆ.
ಏಳು ಮಂದಿ ಎನ್‌ಐಎ ಅಧಿಕಾರಿಗಳ ತಂಡ ಬ್ರಹ್ಮಾವರದ ವಾರಂಬಳ್ಳಿಯಲ್ಲಿ ಶಂಕಿತ ವಿದ್ಯಾರ್ಥಿಯ ಪೋಷಕರು ವಾಸವಿರುವ ಫ್ಲ್ಯಾಟ್‌ಗೆ ಭೇಟಿ ನೀಡಿ ಶೋಧಕಾರ್ಯ ನಡೆಸಿ, ಮಹಜರು ಮಾಡಿತು. ಪರಿಶೀಲನೆ ವೇಳೆ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿ, ಕೆಲವು ದಾಖಲೆಗಳನ್ನು ವಶಕ್ಕೆ ಪಡೆದು, ಕುಟುಂಬಸ್ಥರನ್ನು ವಿಚಾರಣೆ ನಡೆಸಿತು ಎಂದು ಮೂಲಗಳು ತಿಳಿಸಿವೆ.
ಫ್ಲ್ಯಾಟ್‌ನಲ್ಲೇ ಇರುತ್ತಿದ್ದ
ರಜಾದಿನಗಳಲ್ಲಿ ಮತ್ತು ವಾರಾಂತ್ಯ ವಾದ ಶನಿವಾರ-ರವಿವಾರ ವಾರಂಬಳ್ಳಿಯ ಫ್ಲ್ಯಾಟ್‌ಗೆ ಬರುತ್ತಿದ್ದ ರಿಶಾನ್ ಹೆಚ್ಚಾಗಿ ಒಳಗೆಯೇ ಇರುತ್ತಿದ್ದ, ಹೊರಗೆ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ, ಫ್ಲ್ಯಾಟ್‌ನ ಯುವಕರೊಂದಿಗೆ ಮಾತ್ರ ಕಾಲ ಕಳೆಯುತ್ತಿದ್ದ ರಿಶಾನ್ ಸ್ಥಳೀಯರ ಜತೆ ಹೆಚ್ಚು ಬೆರೆಯುತ್ತಿರಲಿಲ್ಲ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಮಾಝ್-ಶಾರೀಕ್ ನಿಕಟವರ್ತಿಗಳು
ಮಂಗಳೂರಿನ ಕಂಕನಾಡಿ ಬಳಿ 2022ರ ನ. 19ರಂದು ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡು ಸದ್ಯ ಎನ್‌ಐಎ ವಶದಲ್ಲಿರುವ ಮಹಮ್ಮದ್ ಶಾರೀಕ್ ಮತ್ತು ಮಾಝ್ ಮುನೀರ್ ಸಹವರ್ತಿಗಳು. 2022 ಸೆಪ್ಟಂಬರ್ ನಲ್ಲಿ ಶಿವಮೊಗ್ಗದ ತುಂಗಾ ತೀರದಲ್ಲಿ ನಡೆದಿದ್ದ “ಪ್ರಾಯೋಗಿಕ ಬಾಂಬ್ ಸ್ಫೋಟ’ ಪ್ರಕರಣದಲ್ಲಿ ಮಾಝ್ ಮುನೀರ್ ಮತ್ತು ಮಹಮ್ಮದ್ ಶಾರೀಕ್ ಆರೋಪಿಗಳಾಗಿದ್ದರು.
ಸಯ್ಯದ್ ಯಾಸೀನ್ ಮತ್ತೋರ್ವ ಆರೋಪಿಯಾಗಿದ್ದ. ಮಹಮ್ಮದ್ ಶಾರೀಕ್ ತಲೆಮರೆಸಿಕೊಂಡಿದ್ದ. ಅಲ್ಲದೇ 2020ರ ನವೆಂಬರ್‌ನಲ್ಲಿ ಮಂಗಳೂರು ನಗರದ ವಿವಿಧೆಡೆ ಗೋಡೆಗಳಲ್ಲಿ ಉಗ್ರ ಸಂಘಟನೆಗಳ ಪರವಾಗಿ ಪ್ರಚೋದನಕಾರಿ ಬರಹ ಬರೆದ ಪ್ರಕರಣದಲ್ಲಿಯೂ ಮಾಝ್ ಮುನೀರ್ ಮತ್ತು ಶಾರೀಕ್ ಆರೋಪಿಗಳಾಗಿದ್ದರು.
ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ರಿಶಾನ್ ಶೇಖ್, ಬ್ರಹ್ಮಾವರದ ಬ್ಲಾಕ್ ಕಾಂಗ್ರೆಸ್‌ನ ಕಾರ್ಯದರ್ಶಿ ತಾಜುದ್ದೀನ್ ಇಬ್ರಾಹಿಂರವರ ಪುತ್ರ. ಈ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಪ್ರಕರಣದಲ್ಲಿ ತನಿಖೆಯ ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದರು ಎಂಬ ಅನುಮಾನ ಬಲವಾಗುತ್ತಿದೆ.
ಸುನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.