ಭಾರತೀಯ ಸೇನೆಗೆ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ರೇಶ್ಮಿ, ಮೇಘಾ ಆಯ್ಕೆ
Team Udayavani, Jul 6, 2020, 9:09 AM IST
ಮಂಗಳೂರು: ಕೊಚ್ಚಿಯ ಇ. ರೇಶ್ಮಿ ಗೋಪಿನಾಥ ಭಟ್ ಮತ್ತು ಬೆಂಗಳೂರಿನ ಡಾ| ಮೇಘಾ ಎನ್. ಶೆಣೈ ಅವರು ಭಾರತೀಯ ಸೇನೆಗೆ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಆಯ್ಕೆಯಾಗಿದ್ದಾರೆ.
ಸಾಧನೆಗೆ ಶ್ಲಾಘನೆ
ವಿಶ್ವ ಕೊಂಕಣಿ ಕೇಂದ್ರದ ಅಲ್ಯುಮ್ನಿ ಸಂಘದಲ್ಲಿ ಸಕ್ರಿಯರಾಗಿರುವ ಇವರಿಬ್ಬರ ದೇಶ ಸೇವೆಯ ಕಡೆಗಿನ ಪ್ರೇರಣದಾಯಕ ನಡೆಗೆ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿ ವೇತನದ ಸ್ಥಾಪನೆಯ ರೂವಾರಿ ಟಿ.ವಿ. ಮೋಹನದಾಸ ಪೈ, ಅಧ್ಯಕ್ಷ ರಾಮದಾಸ ಕಾಮತ್ ಯು., ಕಾರ್ಯದರ್ಶಿ ಪ್ರದೀಪ್ ಜಿ. ಪೈ, ಕ್ಷಮತಾ ಅಕಾಡೆಮಿಯ ಪ್ರಧಾನ ನಿರ್ದೇಶಕ ಉಲ್ಲಾಸ ಕಾಮತ್, ಸಂಚಾಲಕ ಗಿರಿಧರ ಕಾಮತ್, ಕೇಂದ್ರದ ಸಂಘಟನ ಕಾರ್ಯದರ್ಶಿ ನಂದಗೋಪಾಲ ಜಿ. ಶೆಣೈ, ಕೋಶಾಧಿಕಾರಿ ಬಿ.ಆರ್. ಭಟ್ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.
ರೇಶ್ಮಿ ಭಟ್ ತಾಂತ್ರಿಕ ಅಧಿಕಾರಿ
ಕೊಚ್ಚಿಯ ಗೋಪಿನಾಥ ಭಟ್ ಮತ್ತು ಶೋಭಾ ದಂಪತಿ ಪುತ್ರಿ ರೇಶ್ಮಿ ಭಟ್ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದಿಂದ ಪದವಿಯನ್ನು ಪಡೆದಿದ್ದು ಬೆಂಗಳೂರು ಮತ್ತು ಹೈದರಾಬಾದ್‌ನ ವಾಯುಸೇನಾ ಅಕಾಡೆಮಿಯಲ್ಲಿ ಒಟ್ಟಾರೆ 96 ವಾರ ವಿವಿಧ ವಿಷಯಗಳಲ್ಲಿ ತರಬೇತಿ ಪಡೆದಿದ್ದಾರೆ. ಪ್ರಸಕ್ತ ಭಾರತೀಯ ವಾಯುಸೇನೆಯಲ್ಲಿ ತಾಂತ್ರಿಕ ವಿಭಾಗದಲ್ಲಿ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಡಾ| ಮೇಘಾ ಎನ್. ಶೆಣೈ ವೈದ್ಯಕೀಯ ಅಧಿಕಾರಿ
ಬೆಂಗಳೂರಿನ ಇ.ಡಿ.ನರಸಿಂಹ ಶೆಣೈ ಮತ್ತು ಗೋಮತಿ ಶೆಣೈ ಅವರ ಪುತ್ರಿ ಡಾ| ಮೇಘಾ ಎನ್. ಶೆಣೈ ಅವರು ಎಂಬಿಬಿಎಸ್ ಪದವೀಧರರು. ಗಡಿ ಭದ್ರತಾ ಪಡೆಯಲ್ಲಿ ಅಸಿಸ್ಟೆಂಟ್ ಕಮಾಂಡಿಂಗ್ ವೈದ್ಯಕೀಯ ಅಧಿಕಾರಿಯಾಗಿ ಆಯ್ಕೆ ಗೊಂಡಿರುವ ಅವರು ಕೋವಿಡ್ ಶುಶ್ರೂಷಾ ಕೇಂದ್ರಗಳಲ್ಲಿ ತಮ್ಮ ಸೇವೆ ಸಲ್ಲಿಸಲು ನಿಯುಕ್ತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.