ಹೂಳು ತುಂಬಿದ ನದಿ; ನೆರೆ ಭೀತಿ
ಚೇಳ್ಯಾರು-ಸೂರಿಂಜೆ: ವ್ಯವಸ್ಥಿತ ಚರಂಡಿಗಳಿಲ್ಲ
Team Udayavani, Apr 12, 2022, 11:05 AM IST
ಚೇಳ್ಯಾರು: ಚೇಳ್ಯಾರು, ಸೂರಿಂಜೆ ಗ್ರಾಮಗಳಲ್ಲಿ ರಾಜಕಾಲುವೆ ಸಮಸ್ಯೆ ಇಲ್ಲ. ಆದರೆ ವಿವಿಧೆಡೆ ರಸ್ತೆ ಪಕ್ಕದಲ್ಲಿ ಮಳೆ ನೀರು ಹರಿಯಲು ಯೋಜನಬದ್ಧವಾಗಿ ತೋಡಿನ ವ್ಯವಸ್ಥೆ ಮಾಡಿದಿರುವ ಕಾರಣ ಮಳೆಗಾಲದಲ್ಲಿ ಮೂಲಸೌಕರ್ಯಕ್ಕೆ ಧಕ್ಕೆಯಾಗುತ್ತಿದೆ.
ಮುಂಗಾರು ಸಂದರ್ಭ ರಸ್ತೆಯ ಮೇಲೆ ಮಳೆ ನೀರು ಹರಿಯುವುದರಿಂದ ಲಕ್ಷಾಂತರ ರೂ. ವೆಚ್ಚ ಮಾಡಿ ನಡೆಸಿದ ಡಾಮರು ಎದ್ದು ಹೋಗಿ ಹೊಂಡ ಸೃಷ್ಟಿಯಾಗುವುದು. ರಸ್ತೆಯ ಇಕ್ಕೆಲಗಳಲ್ಲಿ ಮಣ್ಣಿನ ಕೊರೆತ ಉಂಟಾಗಿ ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗುವುದು. ಇವುಗಳನ್ನು ತಡೆ ಯಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
ಈ ಗ್ರಾಮಗಳಲ್ಲಿ ಹರಿಯುವ ನಂದಿನಿ ನದಿ ಕೆಲವು ಬಾರಿ ಉಕ್ಕೇರಿದರೆ ಖಂಡಿಗೆ ಸುತ್ತಮುತ್ತ, ಸೂರಿಂಜೆಯ ದೇಲಂತಬೆಟ್ಟಿನ ತಗ್ಗು ಪ್ರದೇಶ ಮುಳುಗಡೆಯಾಗುತ್ತದೆ. ಭಾರೀ ಗಾಳಿಮಳೆ ಬಂದಾಗ ಮಾತ್ರ ಈ ಪರಿಸ್ಥಿತಿ ಉದ್ಭವಿಸುತ್ತದೆ. ಇಂತಹ ಸಂದರ್ಭ ಜಿಲ್ಲಾಡಳಿತ ಮುಳುಗಡೆ ಪ್ರದೇಶದ ಕುಟುಂಬಗಳಿಗೆ ಗಂಜಿ ಕೇಂದ್ರ ಸ್ಥಾಪಿಸಿ ಸ್ಥಳಾಂತರಿಸುವುದು ಸಾಮಾನ್ಯ. ಆದರೆ ಖಂಡಿಗೆ ನದಿ ಸುತ್ತಮುತ್ತ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ಹೂಳು ತುಂಬಿದ ಪರಿಣಾಮ ಸಣ್ಣ ಮಳೆ ಬಂದರೂ ನದಿ ಉಕ್ಕೇರಿ ಹರಿಯುತ್ತದೆ. ಇದರ ಜತೆಗೆ ನದಿ ಮಾಲಿನ್ಯವೂ ಆಗುತ್ತಿದ್ದು, ಮೀನು ಹಿಡಿಯಲು ಆಗದ ಸ್ಥಿತಿ, ಗದ್ದೆಯಲ್ಲಿ ಉಪ್ಪು ನೀರು ತುಂಬಿ ಬೆಳೆ ತೆಗೆಯಲೂ ಆಗದ ಸ್ಥಿತಿ ಉಂಟಾಗುತ್ತದೆ.
ಹೂಳು ತುಂಬಿರುವ ಕಾರಣ ಬಾವಿಯಲ್ಲಿ ಉಪ್ಪು ನೀರಿನ ಸಮಸ್ಯೆ ಮತ್ತು ಇತಿಹಾಸ ಪ್ರಸಿದ್ಧ ಖಂಡಿಗೆ ಧರ್ಮರಸು ಉಳ್ಳಾಯ ಕ್ಷೇತ್ರದಲ್ಲಿ ಮೀನು ಹಿಡಿಯುವ ಜಾತ್ರೆ ಸಮಯ ದಲ್ಲಿ ಮೀನು ಹಿಡಿಯಲು ಕಷ್ಟವಾಗಿದೆ. ನದಿಯಲ್ಲಿ ಉತ್ತಮ ಮರಳು ದೊರಕಿದರೆ ಇದನ್ನು ಸಾಗಿಸಲು ಸಮಸ್ಯೆ ಆಗದು. ಆದರೆ ಕೆಸರು ಮಿಶ್ರಿತ ಮರಳು ಇದ್ದು ತೆಗೆಯಲು ತೊಡಕಾ ಗಿದೆ. ಇದಕ್ಕೆ ಬಾರೀ ವೆಚ್ಚ ತಗಲು ವುದರಿಂದ ಸರಕಾರವೇ ಯೋಜನೆ ರೂಪಿಸಿ ಮರಳು ತೆಗೆಯಲು ಗುತ್ತಿಗೆ ನೀಡಬೇಕಾಗುತ್ತದೆ.
ಯೋಜನೆ ರೂಪಿಸಬೇಕಿದೆ
ನದಿಯಲ್ಲಿ ಮರಳು ಇರುವುದಾದರೆ ಅದನ್ನು ಟೆಂಡರ್ ಕರೆದು ಕಾನೂನು ಪ್ರಕಾರ ಹೂಳೆತ್ತುವ ಪ್ರಯತ್ನ ಮಾಡಲು ಸಾಧ್ಯವಾಗುತ್ತದೆ. ಇಲ್ಲದೇ ಹೋದರೆ ಸರಕಾರಕ್ಕೆ ಯೋಜನೆಯ ಮಾಹಿತಿ ನೀಡಿ ಬೇಕಾದ ಉಪಕ್ರಮ ಕೈಗೊಳ್ಳಬೇಕಾಗುತ್ತದೆ. ಇದು ಈ ಬಾರಿ ಸಾಧ್ಯವಾಗದ ಮಾತು. ಒಂದೆರಡು ತಿಂಗಳಲ್ಲಿ ಮಳೆಗಾಲ ಮುಂದೆ ಇರುವುದರಿಂದ ಏನಿದ್ದರೂ ಮುಂದಿನ ವರ್ಷದ ಯೋಜನೆ ಇದಾಗಿದೆ. ಆದರೆ ಈ ಬಾರಿ ಅಕಾಲಿಕ ಮಳೆಯಾದರೆ ಜಿಲ್ಲಾಡಳಿತ ನೆರೆ ಸಂತ್ರಸ್ತ ಪ್ರದೇಶಕ್ಕೆ ಏನಾದರೂ ಯೋಜನೆ ರೂಪಿಸಬೇಕಿರುವುದು ಅನಿವಾರ್ಯವಾಗಲಿದೆ.
ನೆರೆ ನೀರಿನ ಸಮಸ್ಯೆ
ಸೂರಿಂಜೆ ಗ್ರಾಮದ ದೇಲಂತಬೆಟ್ಟು ಪ್ರದೇಶ ನಂದಿನಿ ನದಿ ಹರಿಯುವ ದಡದಲ್ಲಿದ್ದು ನದಿ ಉಕ್ಕೇರಿದರೆ ಪ್ರದೇಶ ಒಂದೆರಡು ದಿನಗಳ ಕಾಲ ಮುಳುಗಡೆ ಯಾಗುತ್ತದೆ. ಇಲ್ಲಿ ಮರಳು ಸಮಸ್ಯೆ ಇಲ್ಲ. ಆದರೆ ನದಿ ತಗ್ಗು ಪ್ರದೇಶದಲ್ಲಿ ಹರಿಯುವುದರಿಂದ ಜನ ವಸತಿ ಪ್ರದೇಶಗಳಿಗೆ ನೀರು ನುಗ್ಗುತ್ತದೆ. ಗದ್ದೆ ಜಲಾವೃತವಾಗುತ್ತದೆ. ಇದಕ್ಕೆ ಸ್ಥಳಾಂತರವೊಂದೇ ಪರಿಹಾರ ವಾಗಿದೆ. ಉಳಿದಂತೆ ನದಿಯಲ್ಲಿನ ಮರಳು ಡ್ರೆಜ್ಜಿಂಗ್ ಮಾಡಿ ನದಿ ಆಳವನ್ನು ಹೆಚ್ಚು ಮಾಡಿದರೆ ಮಳೆಗಾಲ ಸಂದರ್ಭ ನೆರೆ ಭೀತಿಗೆ ಪರಿಹಾರ ಕಂಡುಕೊಳ್ಳಬಹುದೇ ಎಂಬುದರ ಬಗ್ಗೆ ಯೋಜನೆ ರೂಪಿಸಲು ಸ್ಥಳೀಯಾಡಳಿತ ಪ್ರಾಥ ಮಿಕ ಯೋಜನೆ ರೂಪಿಸಿದರೆ ಪರಿಹಾರ ದೊರಕಬಲ್ಲುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.