ಕದ್ರಿ ದೇಗುಲದ ಬಳಿ 1.62 ಕೋ.ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ
Team Udayavani, May 7, 2022, 11:41 AM IST
ಕದ್ರಿ: ಮಂಗಳೂರು ಮಹಾನಗರ ಪಾಲಿಕೆಯ ಕದ್ರಿ ಉತ್ತರ ವಾರ್ಡ್‌ನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಬಳಿ 1.62 ಕೋ.ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಬಳಿಕ ಅವರು ಮಾತನಾಡಿ, ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಸಂಪರ್ಕಿಸುವ ಕದ್ರಿ ನ್ಯೂರೋಡ್ ಅಭಿವೃದ್ಧಿಗೆ 1.62 ಕೋ.ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ರಸ್ತೆ ಕಾಮಗಾರಿಗೂ ಮೊದಲು ಜಲಸಿರಿ ಯೋಜನೆಯ ಪೈಪ್ ಅಳವಡಿಕೆ, ಒಳಚರಂಡಿ ವ್ಯವಸ್ಥೆ ಸೇರಿದಂತೆ ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ರಸ್ತೆ ನಿರ್ಮಾಣದ ಜತೆ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಕೂಡ ಮಾಡಲಾಗುವುದು ಎಂದರು.
ಸ್ಥಳೀಯ ಕಾರ್ಪೋರೆಟರ್ ಶಕೀಲಾ ಕಾವ, ಪಾಲಿಕೆ ಸದಸ್ಯ ಕದ್ರಿ ಮನೋಹರ್ ಶೆಟ್ಟಿ, ಮುಖಂಡರಾದ ರೂಪಾ ಡಿ. ಬಂಗೇರ, ರಾಮಕೃಷ್ಣ ರಾವ್, ಸುಧಾಕರ್ ಪೇಜಾವರ, ಸಂಜೀವ ಅಡ್ಯಾರ್, ದೇವಿಕಿರಣ್ ಶೆಟ್ಟಿ, ಪೂರ್ಣಿಮಾ ಪೇಜಾವರ, ಪ್ರಸನ್ನ ಕಂಡೆಟ್ಟು, ಗಾಯತ್ರಿ ಗುಂಡಳಿಕೆ, ನಯನಾ ವಿಶ್ವನಾಥ್, ಕುಸುಮಾ ದೇವಾಡಿಗ, ವೆಂಕಟೇಶ್ ಕದ್ರಿ, ಸಂತೋಷ್ ನಂತೂರು, ಕಮಲಾಕ್ಷಿ ಗಂಗಾಧರ್, ಉಮಾ ಕಂಡೆಟ್ಟು, ಸುಂದರ್ ಶೆಟ್ಟಿ, ವಾಸುದೇವ್ ಭಟ್, ಗಂಗಾಧರ್ ಕದ್ರಿ, ಜಗದೀಶ್, ಸಹನ್ ಕದ್ರಿ, ಸುರೇಶ್, ಶಾಲಿನಿ ಆಚಾರ್, ಜಯಲಕ್ಷ್ಮೀ, ಮಹೇಶ್ ಕಂಡೆಟ್ಟು, ಸುರೇಂದ್ರ ಶೆಟ್ಟಿ, ದ್ರಿತೇಶ್ ಗುಂಡಳಿಕೆ, ಕಮಲಾಕ್ಷಿ ಮುಂಡಾನ, ಶಶಾಂಕ್ ಮುಂಡಾನ, ಶ್ರವಣ್, ಸಚಿನ್, ಹೇಮಂತ್ ಕದ್ರಿ, ರಾಘು, ಮಹೇಶ್ ಕಂಡೆಟ್ಟು, ಶಾಲಿನಿ, ಪ್ರಭಾಕರ ಪೇಜಾವರ, ರವಿ ಕದ್ರಿ, ರಾಮಣ್ಣ, ಸುಜಿತ್, ಕೇಶವ್ ಕದ್ರಿ, ಸುಜಿ, ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾರ್ವಜನಿಕರ ಸಹಕಾರ ಅಗತ್ಯ
ದೇವಸ್ಥಾನ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಈ ರಸ್ತೆಯ ಕಾಮಗಾರಿಯ ಸಂದರ್ಭ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಬಹುದು; ಆದರೆ ಅಭಿವೃದ್ಧಿಯ ನೆಲೆಯಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಶಾಸಕರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.