ಮೊಬೈಲ್‌ನಲ್ಲಿ 39 ಲಕ್ಷ ರೂ. ಕಳ್ಳ ಚಿನ್ನ !
Team Udayavani, Feb 1, 2018, 10:41 AM IST
ಮಂಗಳೂರು: ದುಬಾೖಯಿಂದ ಮಂಗಳೂರಿಗೆ ಬಂದ ಸ್ಪೈಸ್ ಜೆಟ್ ವಿಮಾನದ ಪ್ರಯಾಣಿಕನೊಬ್ಬ ಅಕ್ರಮವಾಗಿ ಸಾಗಿಸಿದ 39 ಲಕ್ಷ ರೂ. ಮೌಲ್ಯದ 1,282 ಗ್ರಾಂ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದ ಮಂಗಳೂರು ಘಟಕದ ಅಧಿಕಾರಿಗಳು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಕೇರಳ ಕಾಸರಗೋಡಿನ ಅಹಮದ್ ನಬೀಲ್ ಗಫೂರ್ (21) ಬಂಧಿತ ಆರೋಪಿ. ಆತನ ವಿರುದ್ಧ ಕಸ್ಟಮ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ದುಬಾೖಯಿಂದ ಹೊರಟು ಮಂಗಳವಾರ ಸಂಜೆ 6 ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಳಿದ ಅಹಮದ್ ನಬೀಲ್ ಗಫೂರ್‌ನನ್ನು ಡಿಆರ್‌ಐ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ವಿಮಾನದ ಬಾಗಿಲಿನ ಬಳಿಯೇ ತಡೆದು ನಿಲ್ಲಿಸಿ ಕಸ್ಟಮ್ಸ್ ತಪಾಸಣೆಯ ಕೌಂಟರಿಗೆ ಕರೆದೊಯ್ದು ಕೂಲಂಕಷ ತಪಾಸಣೆ ನಡೆಸಿದರು. ಆರಂಭದಲ್ಲಿ ಚಿನ್ನ ಪತ್ತೆಯಾಗಲಿಲ್ಲ. ಬಳಿಕ ಆತನನ್ನು ಸಮಗ್ರ ತಪಾಸಣೆಗೆ ಒಳಪಡಿಸಿದಾಗ ಧರಿಸಿದ್ದ ಟೌಸರ್‌ನಲ್ಲಿ ಮೊಬೈಲ್ ಫೋನ್ ಒಂದನ್ನು ಹೊಂದಿರುವುದಾಗಿ ತಿಳಿಸಿದ. ಫೋನ್ ಸೆಟ್ಟನ್ನು ಅಧಿಕಾರಿಗಳು ಪರಿಶೀಲಿದಾಗ ಅದು ಸಾಮಾನ್ಯ ತೂಕಕ್ಕಿಂತ ಅಧಿಕ ಭಾರ ಇರುವುದು ಹಾಗೂ ಅದನ್ನು ಎಲ್ಲ ಭಾಗಗಳಿಂದರೂ ಮುದ್ರೆಯೊತ್ತಿ ಮುಚ್ಚಿರುವುದು ಅಧಿಕಾರಿಗಳ ಗಮನಕ್ಕೆ ಬಂತು. ತೀವ್ರ ವಿಚಾರಣೆಗೊಳಪಡಿಸಿದಾಗ ಮೊಬೈಲ್ ಫೋನ್ ಸೆಟ್‌ನ ಒಳಗೆ ಚಿನ್ನವನ್ನು ಇಟ್ಟು ಸಾಗಿಸಿರುವುದಾಗಿ ಆತ ತಪ್ಪೊಪ್ಪಿಕೊಂಡ ಎಂದು ಮೂಲಗಳು ತಿಳಿಸಿವೆ.
15 ಚಿನ್ನದ ಗಟ್ಟಿ ಪತ್ತೆ
ಮೊಬೈಲ್ ಫೋನ್ ಸೆಟ್‌ನ ಸೀಲ್ ಒಡೆದು ಪರಿಶೀಲಿಸಿದಾಗ ಅದರಲ್ಲಿ 15 ಚಿನ್ನದ ಗಟ್ಟಿಗಳು ಪತ್ತೆಯಾದವು. ಈ ಪೈಕಿ 7 ಚಿನ್ನದ ಗಟ್ಟಿಗಳು ದೊಡ್ಡ ಗಾತ್ರದಲ್ಲಿದ್ದು, 4 ಚಿನ್ನದ ಗಟ್ಟಿಗಳನ್ನು ತುಂಡರಿಸಿ 8 ತುಣುಕುಗಳನ್ನಾಗಿ ಮಾಡಲಾಗಿತ್ತು. ಇದು 24 ಕ್ಯಾರೆಟ್ ಚಿನ್ನ ಆಗಿದ್ದು, 1,282 ಗ್ರಾಂ ತೂಕವಿದೆ. ಪ್ರಸಕ್ತ ಮಾರುಕಟ್ಟೆಯಲ್ಲಿ ಈ ಚಿನ್ನದ ಮೌಲ್ಯ 39 ಲಕ್ಷ ರೂ. ಆಗಿರುತ್ತದೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.
ಚಿನ್ನವನ್ನು ಅಕ್ರಮವಾಗಿ ದೇಶದೊಳಗೆ ಸಾಗಾಟ ಮಾಡಲು ಕಳ್ಳರು ಬೇರೆ ಬೇರೆ ತಂತ್ರಗಳನ್ನು ಅನುಸರಿಸುತ್ತಿರುವುದು ಈ ಹಿಂದಿನ ಪ್ರಕರಣಗಳಲ್ಲಿ ಬೆಳಕಿಗೆ ಬಂದಿತ್ತು. ಆದರೆ ಮೊಬೈಲ್ ಫೋನ್‌ನ ಒಳಗೆ ಚಿನ್ನದ ಗಟ್ಟಿಗಳನ್ನು ಇರಿಸಿ ಸಾಗಾಟ ಮಾಡಿರುವುದು ಇದೇ ಮೊದಲ ಬಾರಿಗೆ ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ
ಮೂರು ದಿನವಾದರೂ ದಾಖಲಾಗದ ಎಫ್‌ಐಆರ್ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!
ಡಾ| ವೀರಪ್ಪ ಮೊಯ್ಲಿ ಕೃತಿ “ವಿಶ್ವ ಸಂಸ್ಕೃತಿಯ ಮಹಾಯಾನ’ ಭಾಗ-2 ನಾಳೆ ಬಿಡುಗಡೆ
Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ನೈಸರ್ಗಿಕ ಅನಿಲ
Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.