ಕ್ಯಾನ್ಸರ್ ಚಿಕಿತ್ಸೆಗಾಗಿ 50 ಸಾವಿರ ರೂ. ನೆರವು
Team Udayavani, May 12, 2018, 1:19 PM IST
ಕೊಟ್ಟಾರಚೌಕಿ : ಫ್ರೆಂಡ್ಸ್ ಬಲ್ಲಾಳ್‌ಬಾಗ್ ಬಿರುವೆರ್ ಕುಡ್ಲದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಲ್ಲಾಳ್ ಬಾಗ್ ಅವರ ನೇತೃತ್ವದಲ್ಲಿ, ಕಾರ್ ಸ್ಟ್ರೀಟ್ ಸೇವಾಂಜಲಿ ಟ್ರಸ್ಟ್ ಇದರ ವತಿಯಿಂದ ಕ್ಯಾನ್ಸರ್ ಚಿಕಿತ್ಸೆಗಾಗಿ ಕೊಟ್ಟಾರಚೌಕಿ ನಿವಾಸಿ ಜಯರಾಮ್ (53) ಅವರಿಗೆ ಸಹಾಯಾರ್ಥವಾಗಿ 50 ಸಾವಿರ ರೂಪಾಯಿ ಚೆಕ್ಕನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಲಾವಿದ ನವೀನ್ ಡಿ. ಪಡೀಲ್ ಮಾತನಾಡಿ, ಫ್ರೆಂಡ್ಸ್ ಬಲ್ಲಾಳ್ ಬಾಗ್ ಬಿರುವೆರ್ ಕುಡ್ಲ ಮೂರು ವರ್ಷಗಳಲ್ಲಿ ಮಾಡುತ್ತಿರುವ ಸಾಧನೆ ಅದ್ವಿತೀಯ. ಶಿಕ್ಷಣ, ಆರೋಗ್ಯ, ಅಂಗವಿಕಲರಿಗೆ ನೆರವು ಮತ್ತಿತರ ಸಮಾಜಮುಖಿ ಕೆಲಸಗಳಿಂದ ಗುರುತಿಸಿಕೊಂಡಿದೆ. ಯಾವುದೇ ಜಾತಿ, ಧರ್ಮವಿಲ್ಲದೆ ಈ ಸಂಘಟನೆಯಲ್ಲಿ ಯುವಕರು ತೊಡಗಿಸಿಕೊಂಡಿರುವುದು ಶ್ಲಾಘನೀಯ. ಈ ಕುಟುಂಬಕ್ಕೆ ಮತ್ತಷ್ಟು ಸಹಾಯದ ಆವಶ್ಯಕತೆಯಿದ್ದು ಇತರ ಸಂಸ್ಥೆಗಳು ಮುಂದೆ ಬರಬೇಕಿದೆ ಎಂದರು.
ಬಿರುವೆರ್ ಕುಡ್ಲದ ಸದಸ್ಯರಾದ ನಿತೇಶ್ ಮಾರ್ನಾಡ್ ಅವರು, ಉದಯ ಪೂಜಾರಿ ಬಲ್ಲಾಳ್ ಬಾಗ್ ನೇತೃತ್ವದಲ್ಲಿ ಅವರ ಸ್ನೇಹಿತರು, ಕಾರ್ಯಕರ್ತರು ತಮ್ಮ ಕೈಲಾದ ಸಹಾಯ ಮಾಡುತ್ತಾ ಹಾಗೂ ಇತರ ದಾನಿಗಳಿಂದ ಆರ್ಥಿಕ ನಿಧಿ ಸಂಗ್ರಹಿಸಿ ನೆರವು ನೀಡುತ್ತಿದ್ದಾರೆ. ಮೂರು ವರ್ಷಗಳಲ್ಲಿ 60 ಲಕ್ಷಕ್ಕೂ ಮಿಕ್ಕಿ ಸಹಾಯಧನ ವಿತರಿಸಿದೆ ಎಂದರು.
ಸೇವಾಂಜಲಿ ಚಾರಿಟೆಬಲ್ ಟ್ರಸ್ಟ್‌ನ ಬಿಂದು ಮಾಧವ ಶೆಣೈ, ನರಸಿಂಹ ಎಂ. ಕಾಮತ್, ಪಾಂಡುರಂಗ ನಾಯಕ್, ಹನುಮಂತ ಕಾಮತ್, ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಲ್ಲಾಳ್ ಬಾಗ್, ಗೌರವಾಧ್ಯಕ್ಷ ಪ್ರಮೋದ್ ಬಲ್ಲಾಳ್ ಬಾಗ್, ಅಧ್ಯಕ್ಷ ರಾಕೇಶ್ ಬಲ್ಲಾಳ್ ಬಾಗ್, ಅಭಿಷೇಕ್ ಅಮೀನ್, ಮಹೇಶ್ ಶೆಟ್ಟಿ ಚಾರ್ವಾಕ ಮುಂಬಯಿ, ಸದಾನಂದ ಪೂಜಾರಿ, ವೆಂಕಟೇಶ ಭಂಡಾರಿ ಮುಂಬಯಿ, ಯಶ್ವಿನ್, ದಿನೇಶ್ ಕಿರಣ್ ಉರ್ವ, ರೋಶನ್ ಪೂಜಾರಿ, ಗೌರವ್ ಕದ್ರಿ, ಧನ್ ರಾಜ್ ಕದ್ರಿ, ತುಕಾರಾಮ್ ಶೆಟ್ಟಿ, ರೋಶನ್ ಮಿನೇಜಸ್, ರಿನಿತ್ ರಾಜ್, ಲೋಕೇಶ್ ಶೆಟ್ಟಿ, ನಿತೇಶ್ ರಾಜ್, ಸೇಸುಪ್ರಸಾದ್, ಲತೇಶ್, ರಾಕೇಶ್ ಚಿಲಿಂಬಿ, ಗಣೇಶ್ ಚಿಲಿಂಬಿ, ರಾಜೇಶ್ ಬಲ್ಲಾಳ್ ಬಾಗ್, ಕಿಶೋರ್ ಬಾಬು, ಕಿರಣ್ ಶೆಟ್ಟಿ ಕುಂಜತ್ತ ಬೈಲ್, ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.