ಮೂಲ್ಕಿ: ಶೀಘ್ರ ಸ್ಥಾಪನೆಯಾಗಲಿ ಆರ್‌ಟಿಒ
Team Udayavani, Nov 8, 2022, 3:25 PM IST
ಮೂಲ್ಕಿ: ಬಹುನಿರೀಕ್ಷೆಯ ಮೂಲ್ಕಿ ತಾಲೂಕು ಈಗಾಗಲೇ ಆರಂಭಗೊಂಡಿದ್ದು, ವಿವಿಧ ಇಲಾಖೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ (ಆರ್‌ಟಿಒ) ಪ್ರಾದೇಶಕ ಸಾರಿಗೆ ಅಧಿಕಾರಿಗಳ ಕಚೇರಿ ಇನ್ನೂ ಮೂಲ್ಕಿಗೆ ಬಂದಿಲ್ಲ. ಇಲ್ಲಿ ಆರಂಭವಾಗುವ ಲಕ್ಷಣವೂ ಕಾಣುತ್ತಿಲ್ಲ.
ಮಂಗಳೂರು ಆರ್‌ಟಿಒ ಕಚೇರಿಗೆ ತೆರಳಬೇಕು
ಮಂಗಳೂರಿನ ಆರ್‌ಟಿಒ ಕಚೇರಿಯ ಮೂಲಕ ಕೆಲವಷ್ಟೆ ಸೇವೆಗಳನ್ನು ವಾರಕ್ಕೊಮ್ಮೆ ಮೂಲ್ಕಿ ಕಾರ್ನಾಡು ಗಾಂಧಿ ಮೈದಾನದಲ್ಲಿ ಕ್ಯಾಂಪ್ ನಡೆಸುವ ಮೂಲಕ ಮೂಲ್ಕಿ ಹೊಬಳಿಯ ಜನರ ಕೆಲವೊಂದು ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಆದರೆ ಇಲ್ಲಿಯ ಜನರಿಗೆ ಬೇಕಾದ ಪೂರ್ಣಕಾಲಿಕಾ ಇಲಾಖಾ ಸೇವೆ ಇಲ್ಲಿ ಸಿಗುವುದು ಅತೀ ಅಗತ್ಯವಾಗಿದೆ. ಮೂಲ್ಕಿಯಿಂದ ಬರೋಬ್ಬರಿ 30ಕ್ಕೂ ಕೀ.ಮೀ. ಮಿಕ್ಕಿದ ದೂರ ಮಂಗಳೂರು ಆರ್‌ಟಿಒ ಕಚೇರಿಗೆ ತೆರಳಬೇಕಾಗಿದೆ. ಇದು ಸರಕಾರದ ವಿಕೇಂದ್ರಿಕರಣ ನಿಯಮದಂತೆ ಅದರಲ್ಲೂ ತಾಲೂಕು ಕೇಂದ್ರವಾಗಿರುವ ಮೂಲ್ಕಿಗೆ ಆರ್‌ಟಿಒ ಕಚೇರಿ ನ್ಯಾಯಯುತ ಬೇಡಿಕೆಯಾಗಿದೆ.
ಪ್ರತೀ ಶುಕ್ರವಾರ ಇಲ್ಲಿ ಕೆಲವು ಸೇವೆಗಳನ್ನು ಪಡೆಯಲು ಮೈದಾನದಲ್ಲಿ ಜನ ಸೇರಿ ಉರಿ ಬಿಸಿಲು ಹಾಗೂ ಮಳೆಯ ತೊಂದರೆ ಕೂಡ ಅನುಭ ವಿಸಬೇಕಾಗಿದೆ. ತತ್‌ಕ್ಷಣ ಮೂಲ್ಕಿಗೆ ಆರ್‌ಟಿಒ ಕಚೇರಿ ಸ್ಥಾಪನೆಗೆ ಸರಕಾರ ಮುಂದೆ ಬಂದು ಇಲ್ಲಿಯ ಜನರ ಸಮಸ್ಯೆಗೆ ಉತ್ತರಿಸಬೇಕಾಗಿದೆ.
ಸರಕಾರದ ಗಮನ ಸೆಳೆಯಲಾಗುವುದು: ತಾಲೂಕು ಆಗಿ ಮೊದಲ ಹಂತದಲ್ಲಿ ಮಿನಿ ವಿಧಾನ ಸೌಧ ಕಟ್ಟಡಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಈ ಕಟ್ಟಡದಲ್ಲಿ ಸರಕಾರದ ವಿವಿಧ ಇಲಾಖೆಗಳನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸಿಸಲಾಗಿದೆ. ಮುಂದೆ ಆರ್‌ಟಿಒ ಕಚೇರಿಯ ಅಗತ್ಯದ ಬಗ್ಗೆ ಸರಕಾರದ ಗಮನ ಸೆಳೆಯಲಾಗಿದೆ. ಜನರಿಗೆ ಅಗತ್ಯ ಇರುವ ಎಲ್ಲ ಸೌಲಭ್ಯಗಳನ್ನು ತಾಲೂಕು ಕೇಂದ್ರದಲ್ಲಿ ಸ್ಥಾಪಿಸುವಲ್ಲಿ ಸರಕಾರ ಬದ್ಧವಾಗಿದೆ. ಸಾರಿಗೆ ಇಲಾಖೆಯ ಕಚೇರಿಯು ಮೂಲ್ಕಿಗೆ ದೊರೆಯಲಿದೆ. –ಉಮಾನಾಥ ಕೋಟ್ಯಾನ್, ಶಾಸಕರು ಮೂಲ್ಕಿ-ಮೂಡುಬಿದಿರೆ
-ಸರ್ವೋತ್ತಮ ಅಂಚನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.