ಸಂತ ಅಲೋಶಿಯಸ್ ಕಾಲೇಜು ರಸ್ತೆ :ಹೆಸರು ಬದಲಾವಣೆಗ ವಿರೋಧ
Team Udayavani, Jun 23, 2017, 12:59 PM IST
ಮಹಾನಗರ: ನಗರದ ಅಂಬೇಡ್ಕರ್ ವೃತ್ತದಿಂದ ಲೆ„ಟ್ ಹೌಸ್ ಮೂಲಕ ಹಾದು ಹೋಗಿ ಕೆಥೊಲಿಕ್ ಕ್ಲಬ್ ವರೆಗಿನ ರಸ್ತೆ ಈಗಾಗಲೇ ಸಂತ ಅಲೋಶಿಯಸ್ ಕಾಲೇಜು ರಸ್ತೆ ಎಂದು ನಾಮಕರಣಗೊಂಡಿದ್ದು ಇದನ್ನು ಬದಲಾಯಿಸಿ ಬೇರೆ ನಾಮಕರಣ ಮಾಡುವ ಕ್ರಮಕ್ಕೆ ಸಂತ ಆಲೋಶಿಯಸ್ ಕಾಲೇಜು ಆಕ್ಷೇಪ ವ್ಯಕ್ತಪಡಿಸುತ್ತದೆ ಎಂದು ಸಂತ ಅಲೋಶಿಯಸ್ ಸಮೂಹ ಸಂಸ್ಥೆಗಳ ರೆಕ್ಟರ್ ರೆ | ಫಾ | ಡೈನೀಶಿಯಸ್ ವಾಝ್ ತಿಳಿಸಿದ್ದಾರೆ.
ಈ ರಸ್ತೆಗೆ ದಿ | ಮೂಲ್ಕಿ ಸಂದರರಾಮ ಶೆಟ್ಟಿ ಅವರ ಹೆಸರನ್ನು ನಾಮಕರಣ ಮಾಡಲು ಸರಕಾರ ಆದೇಶಿಸಿದೆ ಎಂದು ವರದಿಯಾಗಿದೆ. ದಿ| ಮೂಲ್ಕಿ ಸುಂದರರಾಮ ಶೆಟ್ಟಿಯವರ ಬಗ್ಗೆ ನಮ್ಮ ಸಂಸ್ಥೆಗೆ ಅಪಾರ ಗೌರವವಿದೆ. ಅವರ ಹೆಸರಿನ ಬಗ್ಗೆ ವಿವಾದವನ್ನುಂಟು ಮಾಡುವುದು ನಮ್ಮ ಉದ್ದೇಶವಲ್ಲ. ಅವರ ಹೆಸರಿನಲ್ಲಿ ರಾಜ್ಯಾದಂತ ಸಾಕಷ್ಟು ರಸ್ತೆಗಳು, ಕಟ್ಟಡಗಳು ಹಾಗೂ ಸ್ಮಾರಕಗಳು ಇವೆ. ಆದರೆ ಈಗಾಗಲೇ ಸಂತ ಅಲೋಶಿಯಸ್ ಕಾಲೇಜು ರಸ್ತೆ ಎಂದು
ನಾಮಕರಣಗೊಂಡಿದ್ದ ರಸ್ತೆಯ ಹೆಸರನ್ನು ಬದಲಾಯಿಸಿ ಮರುನಾಮಕರಣ ಮಾಡುತ್ತಿರುವುದು ನಮ್ಮ ಸಂಸ್ಥೆಗೆ ಆಶ್ಚರ್ಯ ಹಾಗೂ ನೋವು ತಂದಿದೆ ಎಂದದವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹಂಪನಕಟ್ಟೆಯಿಂದ ಜ್ಯೋತಿ (ಅಂಬೇಡ್ಕರ್) ಸರ್ಕಲ್‌ವರೆಗೆ ಇರುವ ಹೆಗ್ಗುರುತು ಎಂದರೆ ಸಂತ ಅಲೋಶಿಯಸ್
ಕಾಲೇಜು. ಈ ರಸ್ತೆ ಹಿಂದೆ ಲೆ„ಟ್ ಹೌಸ್ ಹಿಲ್ ರಸ್ತೆ ಎಂದು ಗುರುತಿಸಲ್ಪಟ್ಟಿತ್ತು. ನಂತರ ಮನವಿ ಸಲ್ಲಿಸಿದಾಗ ಈ ರಸ್ತೆಯನ್ನು ಸಂತ ಅಲೋಶಿಯಸ್ ಕಾಲೇಜಿನ ಹೆಸರಿನಲ್ಲಿ ನಾಮಕರಣ ಮಾಡಿ ನಾಮ ಫಲಕ ಕೂಡಾ ಹಾಕಲಾಗಿದೆ. ವಿಜಯಾ ಬ್ಯಾಂಕ್ ಕಚೇರಿ ಇರುವುದು ಜ್ಯೋತಿ (ಅಂಬೇಡ್ಕರ್) ವೃತ್ತದಲ್ಲಿ. ಹಾಗಾಗಿ ಸದ್ರಿ ರಸ್ತೆಗೆ ಅದು ನೇರವಾಗಿ ಅನ್ವಯಿಸುವುದಿಲ್ಲ ಎಂದವರು ವಿವರಿಸಿದರು.
ಸಂತ ಅಲೋಶಿಯಸ್ ಕಾಲೇಜು 137 ವರ್ಷಗಳ ಅಸ್ತಿತ್ವ ಹೊಂದಿದ್ದು ದೇಶದಲ್ಲೇ ಅತ್ಯಂತ ಪ್ರತಿಷ್ಠಿತ ಸಂಸ್ಥೆ ಎಂದು
ಗುರುತಿಸ್ಪಟ್ಟಿದೆ. ಕಾಲೇಜು ಸಮಾಜಕ್ಕೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ಸಲ್ಲಿಸಿರುವ ಸೇವೆ ಅನನ್ಯವಾದುದು. ಕಾಲೇಜು ವಿಶ್ವಾದ್ಯಂತ ಶಿಕ್ಷಣ ಹಾಗೂ ಸೇವೆಗೆ ಹೆಸರಾಗಿರುವ ಏಸು ಸಭೆಯ ವಂದನೀಯ ಗುರುಗಳ ನೇತೃತ್ವದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಇಲ್ಲಿ ವ್ಯಾಸಂಗ ಮಾಡಿದ ಆನೇಕ ಮಂದಿ ದೇಶ ವಿದೇಶಗಳಲ್ಲಿ ಸಾಧಕರಾಗಿ ಪ್ರಸಿದ್ದಿಯನ್ನು ಪಡೆದಿದ್ದಾರೆ ಎಂದವರು ಹೇಳಿದರು.
ಸಂತ ಅಲೋಶಿಯಸ್ ಕಾಲೇಜಿನ ಸಂಸ್ಥೆಗಳಲ್ಲಿ ಪ್ರಸ್ತುತ 14 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕಾಲೇಜಿನ ಚಾಪೆಲ್ ಹಾಗೂ ಅಲ್ಲಿರುವ ಅಪರೂಪದ ಪೈಂಟಿಂಗ್ ವಿಶ್ವಾದ್ಯಂತ ಹೆಸರು ಮಾಡಿರುವುದರಿಂದ
ಪ್ರವಾಸಿ ಕ್ಷೇತ್ರವಾಗಿ ಅಸಂಖ್ಯಾತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂದು ಅವರು ಸಂತ ಅಲೋಶಿಯಸ್ ಕಾಲೇಜಿನ ಸೇವೆಯನ್ನು ಗುರುತಿಸಿ ಹಂಪನಕಟ್ಟೆಯಿಂದ ಅಂಬೇಡ್ಕರ್ ವೃತ್ತದವರೆಗಿನ ರಸ್ತೆಯನ್ನು ಸಂತ ಅಲೋಶಿಯಸ್ ಕಾಲೇಜು ರಸ್ತೆ ಎಂದು ನಾಮಕರಣ ಮಾಡಿರುವುದನ್ನು ದೃಢೀಕರಿಸಿ ಉದ್ಘಾಟನೆ ಮಾಡಬೇಕು ಎಂದವರು ಆಗ್ರಹಿಸಿದರು.
ಪ್ರಾಂಶುಪಾಲ ಫಾ| ಪ್ರವೀಣ್ ಮಾರ್ಟಿಸ್, ಕುಲಸಚಿವ ಡಾ| ಎ.ಎಂ. ನರಹರಿ, ಸಂತ ಅಲೋಶಿಯಸ್ ಕಾಲೇಜು ಹಳೇ ವಿದ್ಯಾರ್ಥಿಸಂಘಧ ಅಧ್ಯಕ್ಷ ಆರ್ಚಿಬಾಲ್ಡ್ ಮಿನೇಜಸ್, ಎನ್ .ಜಿ.ಮೋಹನ್, ಉಪಪ್ರಾಂಶುಪಾಲ ಫಾ | ಮೆಲ್ವಿನ್ ಪಿಂಟೋ, ಹಣಕಾಸು ಅಧಿಕಾರಿ ಫಾ | ಪ್ರದೀಪ್ ಸಿಕ್ವೇರಾ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.