ಉಳ್ಳಾಲ ತಾಲೂಕು; “ಖಜಾನೆ’ ಆಗದೆ ಅಧಿಕಾರಿ-ಸಿಬಂದಿ ವೇತನ‌ಕ್ಕೆ ಪರದಾಟ!

ಹೊಸ ಆರ್ಥಿಕ ವರ್ಷದಿಂದ ಇಲಾಖಾ ಸ್ತರದವರಿಗೆ ವೇತನ‌ ಸಮಸ್ಯೆ

Team Udayavani, May 19, 2023, 3:27 PM IST

ಉಳ್ಳಾಲ ತಾಲೂಕು; “ಖಜಾನೆ’ ಆಗದೆ ಅಧಿಕಾರಿ-ಸಿಬಂದಿ ವೇತನ‌ಕ್ಕೆ ಪರದಾಟ!

ಮಹಾನಗರ: ಹೊಸ ತಾಲೂಕಾಗಿ “ಉಳ್ಳಾಲ’ ರಚನೆಗೊಂಡರೂ “ಖಜಾನೆ 2′ ರಚನೆ ಪ್ರಕ್ರಿಯೆ ಇನ್ನೂ ನಡೆಯದೆ ವಿವಿಧ ಇಲಾಖೆಗಳ ಅಧಿಕಾರಿ-ಸಿಬಂದಿ ವರ್ಗ ವೇತ ನಕ್ಕಾಗಿ ಅಲೆದಾಡುವಂತಾಗಿದೆ!

ಇಲ್ಲಿನ ಕೆಲವು ಇಲಾಖೆಯ ಅಧಿಕಾರಿ ವರ್ಗಕ್ಕೆ ಮಾರ್ಚ್‌ನಿಂದ ಇಲ್ಲಿಯವರೆಗೆ ವೇತನ ಸಿಕ್ಕಿಲ್ಲ; ವಿಚಾರಿಸಿದರೆ ಹೊಸ ತಾಲೂಕಿನಲ್ಲಿ “ಖಜಾನೆ 2′ ಇಲ್ಲದೆ ಸಮಸ್ಯೆ ಆಗುತ್ತಿದೆ ಎನ್ನುತ್ತಾರೆ. ಕರಾವಳಿ ಜಿಲ್ಲೆಯಲ್ಲಿ “ಉಳ್ಳಾಲ’ ಸಹಿತ ಇತರ ಜಿಲ್ಲೆಯ 3 ಹೊಸ ತಾಲೂಕಿನಲ್ಲಿ ಈ ಸಮಸ್ಯೆ ಉಂಟಾಗಿದೆ.

ಒಂದು ತಾಲೂಕಿಗೆ ಒಂದು ಖಜಾನೆ ಇರುತ್ತದೆ. ರಾಜ್ಯ ಮಟ್ಟದಲ್ಲಿ ಇದರ ಅನುಷ್ಠಾನ ಆಗುತ್ತದೆ. ಆ ತಾಲೂಕು ವ್ಯಾಪ್ತಿಯ ಸರಕಾರಿ ಮಟ್ಟದ ವಿವಿಧ ಇಲಾಖೆಗಳ ವೇತನ ಆ ಖಜಾನೆಗೆ ಬಂದು ಹಂಚಿಕೆ ಆಗುವುದು ನಿಯಮ. ಹೊಸದಾಗಿ ಆದ ಉಳ್ಳಾಲ ತಾಲೂಕಿನಲ್ಲಿ ಹೊಸ ಖಜಾನೆ ಇನ್ನಷ್ಟೆ ಆಗಬೇಕಿದೆ. ಹೀಗಾಗಿ, ಹಣ ಬಿಡುಗಡೆ ಆದರೂ ಖಜಾನೆ ಇಲ್ಲದಿದ್ದರೆ ಯಾವ ರೀತಿ ಅದನ್ನು ಹಂಚಿಕೆ ಮಾಡುವುದು ಎಂಬ ಗೊಂದಲ. ಈ ಕಾರಣದಿಂದ ಅಧಿಕಾರಿ-ಸಿಬಂದಿ ಸಂಬಳಕ್ಕೆ ಸಮಸ್ಯೆ.

ಏನಿದು ಸಮಸ್ಯೆ?
ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನಿಂದ ವಿಭಜನೆಗೊಂಡು ಹೊಸದಾಗಿ ಉಳ್ಳಾಲ ತಾಲೂಕು ರಚನೆಯಾಗಿದೆ. ರಾಜ್ಯ ಹಣಕಾಸು ಇಲಾಖೆಯಿಂದ ಖಜಾನೆ 2 (ಕೆ 2) ಎಂಬ ಸಾಪ್ಟ್ವೇರ್‌ ಮಾಡಲಾಗಿದೆ. 5 ವರ್ಷದಿಂದಲೂ ಅದು ಚಾಲ್ತಿಯಲ್ಲಿದೆ. ಅದರ ಮೂಲಕವೇ ಇಲಾಖಾ ಸ್ತರದ ಅಧಿಕಾರಿಗಳಿಗೆ ವೇತ ನ ಬರುತ್ತಿತ್ತು. ಉಳ್ಳಾಲ ತಾಲೂಕು 26/8/2022ಕ್ಕೆ ರಚನೆಯಾಗಿದೆ. ಅಲ್ಲಿಂದ ವೇತ ನ ಹಳೆಯ ತಾಲೂಕಿನಲ್ಲಿಯೇ (ಮಂಗಳೂರು-ಬಂಟ್ವಾಳ) ಆಗುತ್ತಿತ್ತು. ಹೊಸ ಆರ್ಥಿಕ ವರ್ಷದಿಂದ ಹೊಸ ತಾಲೂಕಿನ ಖಜಾನೆ ಮುಖೇನವೇ ವೇತ ನ ಬರಬೇಕಾಗಿತ್ತು. ಆದರೆ ಹೊಸ ತಾಲೂಕಿನ ಖಜಾನೆ 2 ರಚನೆ ಇನ್ನೂ ಆಗದೆ ವೇತ ನ ಹಂಚಿಕೆಗೆ ಸಮಸ್ಯೆ ಎದುರಾಗಿದೆ.

ಈ ಬಗ್ಗೆ ಇಲಾಖಾ ಅಧಿಕಾರಿಗಳನ್ನು ಪ್ರಶ್ನಿಸಿದಾಗ “ಹೊಸ ತಾಲೂಕಿನವರಿಗೆ ಫಂಡ್‌ ರಿಲೀಸ್‌ ಆಗುತ್ತದೆ. ಹಳೆಯ ತಾಲೂಕಿಗೆ ಅದು ಬರುತ್ತದೆ. ಅದನ್ನು ಈ ಆರ್ಥಿಕ ವರ್ಷದಲ್ಲಿ ಹೊಸ ತಾಲೂಕಿನವರಿಗೆ ವಿನಿಯೋಗಿಸಲು ತಾಂತ್ರಿಕ ಸಮಸ್ಯೆ ಇದೆ. ಈ ಬಗ್ಗೆ ಇಲಾಖಾ ಹಂತದಲ್ಲಿ ಮಾತುಕತೆ ನಡೆಯುತ್ತಿದೆ’ ಎನ್ನುತ್ತಾರೆ.

ಹಿಂದಿನ ತಾಲೂಕಿನಲ್ಲೇ ವೇತನ?
ಮಂಗಳೂರು ತಾಲೂಕಿನ 10 ಗ್ರಾ.ಪಂ. ಹಾಗೂ ಬಂಟ್ವಾಳ ತಾಲೂಕಿನ 7 ಪಂಚಾಯತ್‌ ವ್ಯಾಪ್ತಿ ಸೇರಿ ಉಳ್ಳಾಲ ತಾಲೂಕು ರಚನೆಯಾಗಿದೆ. ಈ ಪೈಕಿ ಮುಖ್ಯವಾಗಿ ಶಿಕ್ಷಣ ಇಲಾಖೆ, ಪಶುಸಂಗೋಪನಾ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖಾ ಅಧಿಕಾರಿ-ಸಿಬಂದಿ ವೇತನಕ್ಕೆ ತೊಡಕಾಗಿತ್ತು. ಆದರೆ ಉನ್ನತ ಮಟ್ಟದ ಅಧಿಕಾರಿಗಳ ಮಾತುಕತೆ ಮೂಲಕ ಶಿಕ್ಷಣ ಇಲಾಖೆ, ಪಶುಸಂಗೋಪನಾ ಇಲಾಖೆಯವರ ವೇತ ನವನ್ನು ಈ ಹಿಂದಿನ ತಾಲೂಕಿನಲ್ಲಿ ಪಡೆಯಲು ಒಂದೆರಡು ದಿನದ ಹಿಂದೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಗ್ರಾಮೀಣಾಭಿವೃದ್ಧಿ ಇಲಾಖೆಯವರಿಗೆ ಅನುಮತಿ ಸಿಕ್ಕಿಲ್ಲ. ಖಜಾನೆ ಹೊಸದಾಗಿ ಆಗುವವರೆಗೂ ಈ ಸಮಸ್ಯೆ ಎದುರಾಗುವ ಕಾರಣದಿಂದ ಅಲ್ಲಿಯವರೆಗೆ ಹಳೆ ತಾಲೂಕಿನಲ್ಲಿಯೇ ವೇತ ನ ಪಡೆಯುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ರಾಜ್ಯ ಮಟ್ಟಕ್ಕೆ ಮನವಿ ಸಲ್ಲಿಕೆಯಾಗಿದ್ದು, ಹಣಕಾಸು ಇಲಾಖೆಯಲ್ಲಿ ಇದು ಪರಿಶೀಲನೆಯಲ್ಲಿ ಬಾಕಿಯಾಗಿದೆ!

ಅಧಿಕಾರಿಗಳ ಜತೆಗೆ ಚರ್ಚಿಸಿ ತೀರ್ಮಾನ
ಉಳ್ಳಾಲ ತಾಲೂಕಿನ ಇಲಾಖೆಯ ಕೆಲವು ಅಧಿಕಾರಿ-ಸಿಬಂದಿಗೆ ವೇತ ನ ಸಿಗುವಲ್ಲಿ ಸಮಸ್ಯೆ ಆಗುತ್ತಿರುವ ಬಗ್ಗೆ ಈಗ ಗಮನಕ್ಕೆ ಬಂದಿದೆ. ಇಂತಹ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಮುಂದೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಲಾಗುವುದು.
– ಯು.ಟಿ. ಖಾದರ್‌, ಶಾಸಕರು,

-ದಿನೇಶ್‌ ಇರಾ

ಟಾಪ್ ನ್ಯೂಸ್

BJP-JDS-congress-Party

By Election: ರಾಜ್ಯದ ಮೂರು ಕ್ಷೇತ್ರಗಳ ಪೈಕಿ ಎನ್‌ಡಿಎಗೆ ಯಾವುದು? ಕಾಂಗ್ರೆಸ್‌ಗೆ ಎಷ್ಟು?

55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್‌!

Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್‌!

Aircel-Maxis Case: ಏರ್‌ಸೆಲ್‌-ಮ್ಯಾಕ್ಸಿಸ್‌ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ

Aircel-Maxis Case: ಏರ್‌ಸೆಲ್‌-ಮ್ಯಾಕ್ಸಿಸ್‌ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ

Bhagyanagar: ಹೈದರಾಬಾದ್‌ ಅಲ್ಲ, ಭಾಗ್ಯನಗರ: ಆರೆಸ್ಸೆಸ್‌ ಮತ್ತೆ ಹಕ್ಕೊತ್ತಾಯ

Bhagyanagar: ಹೈದರಾಬಾದ್‌ ಅಲ್ಲ, ಭಾಗ್ಯನಗರ: ಆರೆಸ್ಸೆಸ್‌ ಮತ್ತೆ ಹಕ್ಕೊತ್ತಾಯ

Mahayuthi

Exit Poll: ಮಹಾರಾಷ್ಟ್ರ: ಬಿಜೆಪಿ ನೇತೃತ್ವಕ್ಕೆ ಮತ್ತೆ ಅಧಿಕಾರ, ಜಾರ್ಖಂಡ್‌ನಲ್ಲಿ ಪೈಪೋಟಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-doct

Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ

1-mag-1

Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್

5

Mangaluru: ಪ್ಲಾಸ್ಟಿಕ್‌ ಉತ್ಪಾದನ ಘಟಕ, ಮಾರಾಟದ ಮೇಲೆ ನಿಗಾ

4

Mangaluru: ಕಾರಿಗೆ ಬೆಂಕಿ; ನಿರ್ವಹಣ ನಿರ್ಲಕ್ಷ್ಯ ಕಾರಣ?

3

Ullal: ಬಡವರ ಬಿಪಿಎಲ್‌ ಕಿತ್ತುಕೊಳ್ಳಬೇಡಿ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

BJP-JDS-congress-Party

By Election: ರಾಜ್ಯದ ಮೂರು ಕ್ಷೇತ್ರಗಳ ಪೈಕಿ ಎನ್‌ಡಿಎಗೆ ಯಾವುದು? ಕಾಂಗ್ರೆಸ್‌ಗೆ ಎಷ್ಟು?

55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್‌!

Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್‌!

Aircel-Maxis Case: ಏರ್‌ಸೆಲ್‌-ಮ್ಯಾಕ್ಸಿಸ್‌ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ

Aircel-Maxis Case: ಏರ್‌ಸೆಲ್‌-ಮ್ಯಾಕ್ಸಿಸ್‌ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.