ಇಂದಿನಿಂದ ಶೈಕ್ಷಣಿಕ ವರ್ಷ; ತೆರೆದುಕೊಳ್ಳಲಿದೆ ಶಾಲೆ…
ಶಿಕ್ಷಕರು-ಸಿಬಂದಿಗೆ ಎರಡು ದಿನ ಪೂರ್ತಿ ತಯಾರಿ ಕೆಲಸ
Team Udayavani, May 29, 2023, 7:00 AM IST
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮೇ 29ರಿಂದ ಶಾಲೆಗಳು ತೆರೆದುಕೊಳ್ಳಲಿದ್ದು, 2023-24ನೇ ಸಾಲಿನ ಶೈಕ್ಷಣಿಕ ವರ್ಷ ವಿಧ್ಯುಕ್ತವಾಗಿ ತೆರೆದುಕೊಳ್ಳಲಿವೆ. ಆದರೆ ಮೇ 31ರಂದು ಶಾಲಾ ಪ್ರಾರಂಭೋತ್ಸವದ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಿ ತರಗತಿಗಳು ಆರಂಭವಾಗಲಿವೆ.
ಸೋಮವಾರ ಮತ್ತು ಮಂಗಳವಾರ ಶಿಕ್ಷಕರು ಮತ್ತು ಶಾಲಾ ಸಿಬಂದಿ ಮಾತ್ರ ಶಾಲೆಗಳಿಗೆ ತೆರಳಿ, ಇಲಾಖೆಯ ಸೂಚನೆಯಂತೆ ಶಾಲಾ ಪ್ರಾರಂಭೋತ್ಸವಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ನಿರ್ವಹಿಸಲಿದ್ದಾರೆ.
ಮುಖ್ಯವಾಗಿ ಶಾಲೆಯ ಕೊಠಡಿಗಳು, ಆವರಣ, ಬಿಸಿಯೂಟಕ್ಕೆ ಸಂಬಂಧಿಸಿ ಸ್ವತ್ಛತೆಯ ಕೆಲಸ, ಪ್ರವೇಶೋತ್ಸವದ ಪೂರ್ವ ತಯಾರಿ, ಯುನಿಫಾರ್ಮ್, ಪಠ್ಯಪುಸ್ತಕಗಳನ್ನು ಜೋಡಿಸಿಕೊಳ್ಳುವುದು, ಎಸ್‌ಡಿಎಂಸಿ ಸಭೆ ನಡೆಸುವುದು, ಪಾಠ ಟಿಪ್ಪಣಿ ಸಿದ್ಧಪಡಿಸುವುದು, ಪಾಠಗಳ ಯೋಜನೆ ಮಾಡುವುದು, ಶಾಲಾಭಿವೃದ್ಧಿ ಯೋಜನೆ ತಯಾರಿಸುವುದು, ಶಾಲಾ ಪಂಚಾಂಗ ತಯಾರಿ ಈ ಎಲ್ಲ ಪೂರ್ವ ತಯಾರಿ ಮಾಡಿಕೊಳ್ಳಲು ಎರಡು ದಿನಗಳ ಸಮಯಾವಕಾಶ ನೀಡಲಾಗಿದೆ.
ಈ ಬಾರಿ ರಜೆಯಲ್ಲೂ ಶಿಕ್ಷಕರಿಗೆ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಕೆಲಸಗಳು ಇದ್ದವು. ಶಾಲೆಗಳಲ್ಲಿ ಚುನಾವಣೆಯ ಬೂತ್‌ಗಳು ಇದ್ದುದರಿಂದ ಡೆಸ್ಕ್-ಬೆಂಚುಗಳು ಇತರ ವಸ್ತು, ಉಪಕರಣಗಳು ಅಸ್ತವ್ಯಸ್ತವಾಗಿದ್ದು, ಅವುಗಳನ್ನು ಮತ್ತೆ ಜೋಡಿಸಿಕೊಳ್ಳಬೇಕಾದ ಆವಶ್ಯಕತೆಯಿದೆ. ಎರಡು ತಿಂಗಳು ರಜೆಯಿಂದಾಗಿ ಎಲ್ಲ ಕಡೆಗಳಲ್ಲಿ ಧೂಳು ಆವರಿಸಿಕೊಂಡಿದ್ದು, ಸ್ವತ್ಛಗೊಳಿಸಲು ಹೆಚ್ಚು ಸಮಯ ಬೇಕಾದೀತು ಎನ್ನುತ್ತಾರೆ ಶಿಕ್ಷಕರು.
ಬುಧವಾರ ಶಾಲಾ ಪ್ರಾರಂಭೋತ್ಸವ ನಡೆಯಲಿದ್ದು, ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ ಕೇಳಿಸಲಿದೆ. ತೋರಣ, ರಂಗೋಲಿ ಹಾಕಿ ಹಬ್ಬದ ವಾತಾವರಣದ ಮೂಲಕ ಮಕ್ಕಳನ್ನು ಶಾಲೆಗೆ ಸ್ವಾಗತಿಸುವುದು ಪ್ರಾರಂಭೋತ್ಸವದ ವಿಶೇಷ. ಬ್ಯಾಂಡ್-ವಾದ್ಯದ ಮೆರವಣಿಗೆ ಮೂಲಕವೂ ಮಕ್ಕಳನ್ನು ಸ್ವಾಗತಿಸಲಾಗುತ್ತದೆ.
ಸೋಮವಾರದಿಂದ ಶಾಲೆಗಳು ತೆರೆದುಕೊಳ್ಳಲಿದ್ದು, ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಈಗಾಗಲೇ ಖಾಸಗಿ, ಅನುದಾನಿತ ಹಾಗೂ ಸರಕಾರಿ ಶಾಲೆಗಳ ಮುಖ್ಯಶಿಕ್ಷಕರಿಗೆ ಆಯಾ ಬಿಇಒ ಹಂತದಲ್ಲಿ ಸಭೆ ನಡೆಸಿ, ಪೂರ್ವ ತಯಾರಿಗೆ ಸಂಬಂಧಿಸಿದ ಮಾಹಿತಿ ನೀಡಲಾಗಿದೆ. ಮೇ 31ರಂದು ಶಾಲಾ ಪ್ರವೇಶೋತ್ಸವ ನಡೆಯಲಿದೆ.
– ದಯಾನಂದ ನಾಯಕ್, ಗಣಪತಿ ಡಿಡಿಪಿಐ ದ.ಕ., ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.