ವಾರ್ಡ್ ಸಮಿತಿ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಬೈಲಾ
ಪಾಲಿಕೆಯಿಂದ ನಡಾವಳಿ ರೂಪಿಸಲು ಸಿದ್ಧತೆ
Team Udayavani, Jul 24, 2022, 12:11 PM IST
ಮಹಾನಗರ: ಬೆಂಗಳೂರು ಹೊರತುಪಡಿಸಿ ಮಂಗಳೂರು ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ವಾರ್ಡ್ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ತಿಂಗಳ ಸಭೆ ಪರಿಣಾಮಕಾರಿಯಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಬೈಲಾ ಹೊರಡಿಸಲು ಮಹಾನಗರ ಪಾಲಿಕೆ ಮುಂದಾಗಿದೆ.
ವಾರ್ಡ್ ಸಮಿತಿ ಸಭೆ ನಡೆಸಬೇಕು ಮತ್ತು ಸಭೆ ನಡೆದ ಬಳಿಕ ಯಾವ ಕ್ರಮದಲ್ಲಿ ಮುಂದುವರೆಯಬೇಕು ಎಂಬ ಬಗ್ಗೆ ಆ್ಯಕ್ಟ್‌ನಲ್ಲಿ ಉಲ್ಲೇಖೀಸಲಾಗಿದೆ. ಆದರೆ ಸಭೆ ಯಾವ ರೀತಿ ನಡೆಯಬೇಕು, ಯಾವ ಹಂತ ಒಳಗೊಂಡಿರಬೇಕು ಎಂಬ ಬಗ್ಗೆ ಯಾವುದೇ ಉಲ್ಲೇಖ ನೀಡಲಿಲ್ಲ. ಇದೇ ಕಾರಣಕ್ಕೆ ನಗರದ ವಾರ್ಡ್‌ಗಳಲ್ಲಿ ನಡೆಯುತ್ತಿರುವ ಸಭೆಗಳು ಏಕ ರೂಪದಿಂದ ಕೂಡಿಲ್ಲ. ಸಭೆಯಲ್ಲಿ ಯಾವ ವಿಷಯ ಪ್ರಸ್ತಾವಿಸಬೇಕು ಎಂಬ ಬಗ್ಗೆ ಇನ್ನೂ ಯಾವುದೇ ರೀತಿಯ ಬೈಲಾ ಇಲ್ಲ. ಈ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಪ್ರತ್ಯೇಕ ಬೈಲಾ ಹೊರಡಿಸುವಂತೆ ಆಗ್ರಹ ಕೇಳಿಬಂದಿದೆ. ಬೈಲಾ ರೂಪಿಸಲು ಪಾಲಿಕೆಯೂ ಮುಂದಾಗಿದ್ದು, ಇದನ್ನು ಆಧರಿಸಿ, ವಾರ್ಡ್ ಸಮಿತಿ ಸದಸ್ಯರ ಸಭೆಯಲ್ಲಿ ವಿಷಯ ಪ್ರಸ್ತಾವನೆಗೆ ಅನುಕೂಲವಾಗಲಿದೆ.
ಪಾಲಿಕೆಯ 60 ವಾರ್ಡ್‌ಗಳ ಪೈಕಿ ಸುಮಾರು 49 ವಾರ್ಡ್‌ಗಲ್ಲಿ ಸಮಿ ತಿ ಸದಸ್ಯರ ಕೊರತೆ ಇದೆ. ಸದಸ್ಯ ತ್ವಕ್ಕಾಗಿ ಪಾಲಿಕೆ ಈ ಹಿಂದೇ ಅರ್ಜಿ ಆಹ್ವಾನಿಸಿತ್ತು. ಪ್ರತ್ಯೇಕ ಪಂಗಡದಂತೆ ಮೂರು ಮಂದಿ ಸಾಮಾನ್ಯ ವರ್ಗ, ಮೂರು ಮಂದಿ ಮಹಿಳೆಯರು, ಇಬ್ಬರು ಸಂಘ – ಸಂಸ್ಥೆ ಪ್ರಮುಖರು, ತಲಾ ಒಬ್ಬರು ಎಸ್.ಸಿ., ಎಸ್.ಟಿ. ಪಂಗಡದ ಮಂದಿ ಇರಬೇಕು. ಒಟ್ಟಾರೆ 10 ಮಂದಿ ಸದಸ್ಯರು, ತಲಾ ಒಬ್ಬರು ವಾರ್ಡ್ ಕಾರ್ಯ ದರ್ಶಿ, ವಾರ್ಡ್ ಅಧ್ಯಕ್ಷರು (ಆಯಾ ವಾರ್ಡ್ ಮನಪಾ ಸದಸ್ಯರು) ಇರುತ್ತಾರೆ. ಆದರೆ ಅರ್ಜಿ ಸಲ್ಲಿಕೆ ವೇಳೆ ಹೆಚ್ಚಿನ ಸಾರ್ವಜನಿಕರಿಗೆ ಮಾಹಿತಿ ಕೊರತೆ ಕಾರಣ, ಸುಮಾರು 49 ವಾಡ್ ìಗಳಲ್ಲಿ ವಾರ್ಡ್ ಸಮಿ ತಿ 10 ಮಂದಿ ಸದಸ್ಯರು ಇಲ್ಲ. ಇದೇ ಕಾರಣಕ್ಕೆ ಒಟ್ಟು 600 ಮಂದಿ ಸದಸ್ಯರ ಪೈಕಿ ಇನ್ನೂ 150ಕ್ಕೂ ಹೆಚ್ಚಿನ ಮಂದಿ ಸದಸ್ಯ ಸ್ಥಾನ ಖಾಲಿ ಇದೆ.
ಮಂಗಳೂರು ಸಿವಿಕ್ ಗ್ರೂಪ್‌ನ ಸ್ಥಾಪಕ ನೈಜೆಲ್ ಅಲುºಕರ್ಕ್ “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, ವಾರ್ಡ್ ಸಮಿ ತಿ ಮೀಟಿಂಗ್ ಯಾವ ರೀತಿ ನಡೆಸಬೇಕು ಎಂಬ ಬಗ್ಗೆ ಪಾಲಿಕೆ ಪ್ರತ್ಯೇಕ ಬೈಲಾ ಹೊರಡಿಸಬೇಕಿದೆ. ಈ ಕುರಿತಂತೆ ಕಳೆದ ಫೆಬ್ರವರಿಯಲ್ಲಿಯೇ ನಾವು ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದೆವು. ಸಭೆ ನಡೆದ ಬಳಿಕ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದ್ದರು. ಈಗಾಗಲೇ ಕೆಲವೊಂದು ಸಭೆ ನಡೆದಿದ್ದು, ಇನ್ನೂ ಬೈಲಾ ರೂಪುಗೊಂಡಿಲ್ಲ. ವಾರ್ಡ್ ಸಮಿ ತಿ ಸಭೆಯಲ್ಲಿ ಗೊಂದಲ ಇದೆ ಎಂದು ಪಾಲಿಕೆ ಸದಸ್ಯರು ಇತ್ತೀಚೆಗೆ ಸಾಮಾನ್ಯ ಸಭೆಯಲ್ಲಿ ಹೇಳಿದ್ದರು. ಬೈಲಾ ರೂಪುಗೊಂಡರೆ ಎಲ್ಲ ಗೊಂದಲಗಳಿಗೆ ಪರಿಹಾರ ಸಿಗಲಿದೆ’ ಎನ್ನುತ್ತಾರೆ.
ಏರಿಯಾ ಸಭಾಗೆ ಆರಂಭಿಕ ವಿಘ್ನ
ಗ್ರಾಮೀಣ ಪ್ರದೇಶಗಳಲ್ಲಿ ಯಾವ ರೀತಿ ಗ್ರಾಮ ಸಭೆ ನಡೆಯುತ್ತದೆಯೋ ಅದೇ ರೀತಿ, ಮಂಗಳೂರು ಪಾಲಿಕೆ ವ್ಯಾಪ್ತಿ ಏರಿಯಾ ಸಭೆ ನಡೆಯಬೇಕಿದೆ. ಏರಿ ಯಾ ಸಭಾಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಗತ್ಯವಿದ್ದು, ಶೀಘ್ರ ಈ ಪ್ರಕ್ರಿಯೆ ನಡೆಸುವಂತೆ ಸಾರ್ವಜನಿಕ ವಲಯದಿಂದ ಆಗ್ರಹಗಳು ಕೇಳಿ ಬಂದಿವೆ. ಆದರೆ ಈಗಾಗಲೇ ರಚನೆಯಾದ ವಾರ್ಡ್ ಸಮಿತಿ ಸದಸ್ಯರ ನೇಮಕಾತಿ ಇನ್ನೂ ಪೂರ್ಣವಾಗಿಲ್ಲ. ಹೀಗಿದ್ದಾಗ ಏರಿಯಾ ಸಭಾಗಳ ರಚನೆ ಸುಲಭವಲ್ಲ ಎನ್ನುವ ನಿರ್ಧಾರಕ್ಕೆ ಪಾಲಿಕೆ ಬಂದಿದೆ. ಕಳೆದ ತಿಂಗಳು ಪಾಲಿಕೆ ಸಾಮಾನ್ಯ ಸಭೆಯಲ್ಲೂ ಈ ವಿಚಾರದ ಬಗ್ಗೆ ಚರ್ಚೆ ನಡೆದಿದ್ದು, ಈ ಗೊಂದಲಗಳನ್ನು ನಿವಾರಿಸಿದ ಬಳಿಕವೇ ಏರಿಯಾ ಸಭಾ ರಚನೆಗೆ ಮುಂದಾಗುವಂತೆ ಪಾಲಿಕೆ ಸದಸ್ಯರು ಪಕ್ಷಾತೀತವಾಗಿ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಏರಿಯಾ ಸಭಾ ರಚನೆ ಅನುಮಾನ ಎನ್ನಲಾಗಿದೆ.
ಸದ್ಯದಲ್ಲೇ ಬೈಲಾ: ಪಾಲಿಕೆ ವಾರ್ಡ್ ಸಮಿ ತಿ ಸಭೆ ಯಾವ ರೀತಿ ನಡೆಯಬೇಕು ಮತ್ತು ಗೊಂದಲ ಸರಿಪಡಿಸುವ ನಿಟ್ಟಿನಲ್ಲಿ ಪ್ರತ್ಯೇಕ ಬೈಲಾ ಹೊರಡಿಸುವಂತೆ ಈಗಾಗಲೇ ಮನವಿ ಬಂದಿದೆ. ಈ ಕುರಿತಂತೆ ಪಾಲಿಕೆಯಿಂದ ಸದ್ಯದಲ್ಲೇ ಬೈಲಾ ಹೊರಡಿಸುತ್ತೇವೆ. – ಅಕ್ಷಯ್ ಶ್ರೀಧರ್, ಪಾಲಿಕೆ ಆಯುಕ್ತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bus Service launch: ಮಂಗಳೂರು, ಕುಂದಾಪುರಕ್ಕೆ “ಅಂಬಾರಿ ಉತ್ಸವ’
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
Rohit Sharma: ತನುಷ್ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ
Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ. ಅಪೇಕ್ಷಿತ ಆರ್ಥಿಕ ನೆರವು ಲಭ್ಯ.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.