ಮಂಗಳೂರಿನಲ್ಲಿ ಬಾಲಕಿಯರಿಗೆ ಪ್ರತ್ಯೇಕ ಕ್ರೀಡಾ ವಸತಿ ನಿಲಯ; 1.5 ಕೋ.ರೂ. ಅನುದಾನ ಮಂಜೂರಾತಿ
50 ಮಂದಿ ವಾಸ್ತವ್ಯಕ್ಕೆ ಅವಕಾಶ; ಕ್ರೀಡಾಳುಗಳಿಗೆ ಹೆಚ್ಚಿನ ತರಬೇತಿ; ಉತ್ತಮ ಸಾಧನೆಗೆ ಪೂರಕ
Team Udayavani, Aug 4, 2020, 12:30 PM IST
ಸಾಂದರ್ಭಿಕ ಚಿತ್ರ ಬಳಸಲಾಗಿದೆ
ಮಹಾನಗರ: ಕ್ರೀಡಾ ಚಟುವಟಿಕೆಯಲ್ಲಿ ಆಸಕ್ತರಿರುವ ಪ್ರೌಢಶಾಲಾ ವಿದ್ಯಾರ್ಥಿನಿಯರಿಗಾಗಿ ಮಂಗಳೂರಿನಲ್ಲಿ ಪ್ರತ್ಯೇಕ ಕ್ರೀಡಾ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ನಗರದ ಮಂಗಳಾ ಸ್ಟೇಡಿಯಂ ಬಳಿಯಲ್ಲಿ ಸದ್ಯ ಕ್ರೀಡಾ ಹಾಸ್ಟೆಲ್ ಇದ್ದು, ಇದರಲ್ಲಿ ಪ್ರೌಢಶಾಲಾ ಬಾಲ ಕರು ಹಾಗೂ ಬಾಲಕಿಯರು ವಾಸ್ತವ್ಯ ದಲ್ಲಿರಲು ಅವಕಾಶವಿದೆ. ಆದರೆ ನಿಯಮದ ಪ್ರಕಾರ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್ ಇರಬೇಕು ಎಂಬ ಕಾರಣದಿಂದ ಈಗ ಇರುವ ಕ್ರೀಡಾ ಹಾಸ್ಟೆಲ್ ಸಮೀಪ ದಲ್ಲಿಯೇ ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್ ನಿರ್ಮಿಸಲು ಸರಕಾರ ನಿರ್ಧ ರಿಸಿದೆ. 1.5 ಕೋ.ರೂ. ವೆಚ್ಚದಲ್ಲಿ ನೂತನ ಹಾಸ್ಟೆಲ್ ನಿರ್ಮಾಣಕ್ಕೆ ಸರಕಾರ ಮಂಜೂ ರಾತಿ ನೀಡಿದೆ.
ಪ್ರಸ್ತುತ ಇರುವ ಕ್ರೀಡಾ ಹಾಸ್ಟೆಲ್‌ನಲ್ಲಿ ಬಾಲಕರು-ಬಾಲಕಿಯರು ಸೇರಿ ಒಟ್ಟು 50 ಮಂದಿ ವಾಸ್ತವ್ಯ ಇರಲು ಅವಕಾಶವಿದೆ. ಆದರೆ ಲಾಕ್‌ಡೌನ್‌ಗೂ ಮುನ್ನ ಇಲ್ಲಿ ಕೇವಲ 22 ಮಕ್ಕಳು ಮಾತ್ರ ಇದ್ದರು. ಪ್ರತ್ಯೇಕ ವಸತಿ ವ್ಯವಸ್ಥೆ, ಊಟೋಪಚಾರ ಹಾಗೂ ಆಗಮನ-ನಿರ್ಗಮನದ ವ್ಯವಸ್ಥೆ ಇದೆ. ಜನವರಿ, ಫೆಬ್ರವರಿಯಲ್ಲಿ ತಾಲೂಕು – ಜಿಲ್ಲಾಮಟ್ಟದ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ ಅತ್ಯುತ್ತಮ ಕ್ರೀಡಾ ಪ್ರದರ್ಶನ ನೀಡುವ ಬಾಲಕಿಯರಿಗೆ ಹೆಚ್ಚಿನ ತರಬೇತಿ ಹಾಗೂ ಸರಕಾರದ ಸ್ಪಂದನೆ ಹಿನ್ನೆಲೆಯಲ್ಲಿ ಹಾಸ್ಟೆಲ್ ವ್ಯವಸ್ಥೆ ಮಾಡಲಾಗುತ್ತದೆ. ದ.ಕ. ಜಿಲ್ಲೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಹೊರ ಜಿಲ್ಲೆಯ ವಿದ್ಯಾರ್ಥಿನಿಯರು ಈ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ವಿಶೇಷವಾಗಿ ಮಂಗಳೂರು ಹಾಸ್ಟೆಲ್‌ನಲ್ಲಿ ಆ್ಯತ್ಲೆಟಿಕ್, ವಾಲಿಬಾಲ್‌ನಲ್ಲಿ ಸಾಧನೆ ತೋರಿದ ಬಾಲಕಿಯರಿಗೆ ಅವಕಾಶವಿದೆ.
ಹಾಸ್ಟೆಲ್‌ಗೆ ವಿದ್ಯಾರ್ಥಿನಿಯರ ನಿರಾಸಕ್ತಿ!
“ಇತ್ತೀಚಿನ ದಿನಗಳಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯ ಪಡೆಯಲು ನಿರಾಸಕ್ತಿ ತೋರುತ್ತಿದ್ದಾರೆ. ಮನೆಯಿಂದಲೇ ಆಗಮಿಸಿ ತರಬೇತಿ ಪಡೆದು ಮತ್ತೆ ಮನೆಗೆ ವಾಪಸಾಗುವ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಿದೆ. ಜತೆಗೆ, ದ.ಕ. ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯಕ್ಕೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಆದರೆ ಉಳಿದ ಜಿಲ್ಲೆಯ ವಿದ್ಯಾರ್ಥಿಗಳು ಹಾಸ್ಟೆಲ್ ಅವ ಕಾಶ ಬಳಕೆ ಮಾಡುತ್ತಿದ್ದಾರೆ’ ಎನ್ನುತ್ತಾರೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು.
1.5 ಕೋ.ರೂ. ವೆಚ್ಚದಲ್ಲಿ ಹಾಸ್ಟೆಲ್
ಮಂಗಳೂರು ಸಹಿತ ರಾಜ್ಯದ 10 ಕಡೆಗಳಲ್ಲಿ ತಲಾ 1.5 ಕೋ.ರೂ. ವೆಚ್ಚದಲ್ಲಿ ಬಾಲಕಿ ಯರಿಗೆ ಪ್ರತ್ಯೇಕ ಕ್ರೀಡಾ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಸರಕಾರ ಮಂಜೂರಾತಿ ನೀಡಿದೆ. ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಈ ಕ್ರೀಡಾ ವಸತಿ ನಿರ್ಮಾಣ ವಾಗಲಿದೆ.
- ಪ್ರದೀಪ್ ಡಿ’ಸೋಜಾ, ಉಪನಿರ್ದೇಶಕರು, ಕ್ರೀಡಾ ಇಲಾಖೆ-ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.