ಮಂಗಳೂರು: ಸೌಂಡ್ ಸ್ಪೀಕರ್ ಆರ್ಡರ್… ಒಂದು ಲಕ್ಷ ರೂ. ವಂಚನೆ
Team Udayavani, May 4, 2023, 7:50 AM IST
ಮಂಗಳೂರು: ವ್ಯಕ್ತಿಯೋರ್ವರು ಫೇಸ್ಬುಕ್ನಲ್ಲಿ ಜಾಹೀರಾತು ನೋಡಿ ಸೌಂಡ್ ಸ್ಪೀಕರ್ ಆರ್ಡರ್ ಮಾಡಿ 1 ಲ.ರೂ. ಕಳೆದುಕೊಂಡಿದ್ದಾರೆ.
ದೂರುದಾರರು ಎ. 22ರಂದು ಫೇಸ್ಬುಕ್ನಲ್ಲಿ ಸೌಂಡ್ ಸ್ಪೀಕರ್ ಜಾಹೀರಾತು ನೋಡಿ ಅದನ್ನು ಆರ್ಡರ್ ಮಾಡಿದ್ದರು. ಎ. 29ರಂದು ಯಾರೋ ಅಪರಿಚಿತ ವ್ಯಕ್ತಿ 7029263985ರಿಂದ ಕರೆ ಮಾಡಿ ಕೊರಿಯರ್ ಸಂಸ್ಥೆಯಿಂದ ಮಾತನಾಡುತ್ತಿರುವುದಾಗಿ ತಿಳಿಸಿ ನೀವು ಸೌಂಡ್ ಸ್ಪೀಕರ್ ಅನ್ನು ಆರ್ಡರ್ ಮಾಡಿದ್ದು ಅದರ ಕೊರಿಯರ್ ಚಾರ್ಜ್ 5 ರೂ. ಆಗುತ್ತದೆ. ಆ ಹಣವನ್ನು ಪಾವತಿಸುವಂತೆ ತಿಳಿಸಿ ಮೊಬೈಲ್ಗೆ ಲಿಂಕ್ ಕಳುಹಿಸಿದ. ಆ ಲಿಂಕ್ನ್ನು 9717465555ಗೆ ಕಳುಹಿಸುವಂತೆ ತಿಳಿಸಿದ. ಅದರಂತೆ ದೂರುದಾರರು ಲಿಂಕ್ನ್ನು ಕಳುಹಿಸಿದರು. ಅನಂತರ ಅವರ ಮೊಬೈಲ್ಗೆ ಒಟಿಪಿ ಬಂತು. ಆ ಒಟಿಪಿಯನ್ನು ಅಪರಿಚಿತ ವ್ಯಕ್ತಿಗೆ ತಿಳಿಸಿದರು. ಕೂಡಲೇ ಅವರ ಖಾತೆಯಿಂದ 5 ರೂ. ಕಡಿತಗೊಂಡಿದೆ. ಬಳಿಕ ಮೇ 1ರಂದು ಅವರ ಖಾತೆಯಿಂದ 99,990 ರೂ. ವರ್ಗಾವಣೆಯಾಗಿದೆ. ಅಪರಿಚಿತ ವ್ಯಕ್ತಿ ಒಟಿಪಿ ಪಡೆದುಕೊಂಡು ಒಟ್ಟು 1,00,004 ರೂ. ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂಬುದಾಗಿ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.