ವಿಶೇಷ ವರದಿ: 30 ಕೋ.ರೂ. ವೆಚ್ಚದಲ್ಲಿ ರೈಲ್ವೇ ಕೆಳಸೇತುವೆ
Team Udayavani, Aug 25, 2020, 4:16 AM IST
ಮಹಾನಗರ: ಜಪ್ಪು ಮಹಾಕಾಳಿಪಡ್ಪು ರೈಲ್ವೇ ಕೆಳಸೇತುವೆ ಹಾಗೂ ಸಂಪರ್ಕ ರಸ್ತೆ ನಿರ್ಮಿಸಲು ರೈಲ್ವೇ ಇಲಾಖೆಯು 30 ಕೋಟಿ ರೂ.ಗಳ ಅಂದಾಜು ಪಟ್ಟಿಗೆ ಒಪ್ಪಿಗೆ ನೀಡಿದ್ದು, ಈ ಮೂಲಕ ಸುದೀರ್ಘ ಕಾಲದ ಬೇಡಿಕೆ ಈಡೇರುವ ನಿರೀಕ್ಷೆ ಮೂಡಿದೆ. ಈಗಾಗಲೇ ಮೊದಲ ಕಂತು 10 ಕೋಟಿ ರೂ. ಮೊತ್ತವನ್ನು ಮಂಗಳೂರು ಸ್ಮಾರ್ಟ್ ಸಿಟಿ ಸಂಸ್ಥೆಯು ದಕ್ಷಿಣ ರೈಲ್ವೇಯಲ್ಲಿ ಠೇವಣಿ ಇಟ್ಟಿದ್ದು, ಕಾಮಗಾರಿ ಶೀಘ್ರ ಪ್ರಾರಂಭವಾಗುವ ಸಾಧ್ಯತೆಯಿದೆ. ಈ ಸಂಬಂಧ ದ.ಕ. ಜಿಲ್ಲಾಡಳಿತವು ರೈಲ್ವೇ ಇಲಾಖೆಯ ಜತೆಗೆ ಮಾತುಕತೆ ನಡೆಸಿ ಕಾಮಗಾರಿ ಶೀಘ್ರ ಪ್ರಾರಂಭದ ಕುರಿತಂತೆ ಚರ್ಚಿಸಲಿದೆ.
30 ಕೋ.ರೂ. ವೆಚ್ಚದಲ್ಲಿ ರೈಲ್ವೇ ಅಂಡರ್‌ಪಾಸ್ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಸಂಪರ್ಕ ಕಲ್ಪಿಸಲು ಎನ್‌ಎಚ್66 ರಿಂದ ಮಂಗಳೂರಿನ ಜಪ್ಪು ಮೋರ್ಗನ್‌ಗೆಟ್‌ವರೆಗಿನ ರಸ್ತೆಯನ್ನು ಅಭಿವೃದ್ಧಿಪಡಿಸಲು ಪ್ರತ್ಯೇಕ 20 ಕೋ.ರೂ. ಮೀಸಲಿಡಲು ಸ್ಮಾರ್ಟ್‌ಸಿಟಿ ಸಂಸ್ಥೆ ನಿರ್ಧರಿಸಿದೆ.
ಓವರ್ ಬ್ರಿಡ್ಜ್ ಬದಲಿಗೆ ಅಂಡರ್‌ಪಾಸ್
ಜಪ್ಪು ಮಹಾಕಾಳಿಪಡ್ಪುವಿನಲ್ಲಿ ಈ ಮೊದಲು ಚತುಷ್ಪಥ ರಸ್ತೆ ಹಾಗೂ ರೈಲ್ವೇ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಇದಕ್ಕಾಗಿ ಮಂಗಳೂರು ಪಾಲಿಕೆಯಿಂದ 24 ಕೋ.ರೂ.ಗಳ ಪ್ರಸ್ತಾವನೆ ಸಿದ್ಧಪಡಿಸಿ, ರೈಲ್ವೇ ಇಲಾಖೆಗೆ ಕಳುಹಿಸಲಾಗಿತ್ತು. ಶೇ. 50:50ರಂತೆ ಪಾಲಿಕೆ ಹಾಗೂ ರೈಲ್ವೇಯು ಹಣ ಜೋಡಿಸಲು ಉದ್ದೇಶಿಸಲಾಗಿತ್ತು. ಆದರೆ ಇಷ್ಟು ಮೊತ್ತ ಭರಿಸಿ ಯೋಜನೆ ಮಾಡಲು ರೈಲ್ವೇಗೆ ಅವಕಾಶವಿಲ್ಲ; ಹೀಗಾಗಿ ಪೂರ್ಣ ಹಣವನ್ನು ಪಾಲಿ ಕೆಯೇ ಭರಿಸಬೇಕು ಎಂದು ಪ್ರಸ್ತಾವನೆ ಯನ್ನು ರೈಲ್ವೇ ಇಲಾಖೆಯು ವಾಪಸ್ ಕಳುಹಿಸಿತ್ತು. ಆದರೆ 24 ಕೋ.ರೂ. ಗಳನ್ನು ಮಂಗಳೂರು ಪಾಲಿಕೆ ಭರಿ ಸಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಪಾಲಿಕೆಯು ಪ್ರಸ್ತಾವನೆಯನ್ನು ಬದಲಿ ಸಲು ತೀರ್ಮಾನಿಸಿ, ಅದರಂತೆ 10 ಕೋ.
ರೂ. ವೆಚ್ಚದಲ್ಲಿ ಅಂಡರ್‌ಪಾಸ್, ರಸ್ತೆ ಅಭಿವೃದ್ಧಿಗೆ ಉದ್ದೇಶಿಸಲಾಗಿತ್ತು. ಅದಕ್ಕೂ ಅನುಮೋದನೆ ದೊರೆತಿರಲಿಲ್ಲ. ಆದರೆ ರೈಲ್ವೇ ಕೆಳಸೇತುವೆ, ಸಂಪರ್ಕ ರಸ್ತೆ ಅತ್ಯಗತ್ಯ ಎಂಬ ಒತ್ತಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಈ ಮಧ್ಯೆ, ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ನೇತ್ರಾವತಿ ಸೇತು ವೆಯವರೆಗಿನ ರೈಲ್ವೇ ಹಳಿಯನ್ನು ದ್ವಿಪಥಗೊಳಿಸುವ ಕಾಮಗಾರಿ ಈಗಾಗಲೇ ನಡೆಯುತ್ತಿದೆ. ಈ ಯೋಜನೆ ಕೆಲವೇ ತಿಂಗಳಲ್ಲಿ ಪೂರ್ತಿಯಾಗುವ ನಿರೀಕ್ಷೆ ಇದೆ.
ರೈಲು ಬಂದರೆ ವಾಹನಗಳ ಸಾಲು!ಕೇರಳ-ಮಂಗಳೂರು ಮಧ್ಯೆ ಪ್ರತಿನಿತ್ಯ ಸುಮಾರು 46 ರೈಲುಗಳು ಸಂಚರಿಸುತ್ತವೆ. ಈ ರೈಲು ಮಹಾಕಾಳಿಪಡು³ ಮೂಲಕ ಸಾಗುವ ಕಾರಣದಿಂದ ಇಲ್ಲಿ ರಸ್ತೆ ಸಂಚಾರ ಆ ಸಂದರ್ಭ ಸ್ಥಗಿತಗೊಳ್ಳುತ್ತದೆ. ನಿತ್ಯ ಸುಮಾರು 50ರಷ್ಟು ಬಾರಿ ಈ ಕಾರಣಕ್ಕಾಗಿ ರಸ್ತೆ ಬ್ಲಾಕ್ ಆಗಿ ತೊಕ್ಕೊಟ್ಟು-ಮಂಗಳೂರು ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವ ಪ್ರಮೇಯ ಇಲ್ಲಿ ನಿತ್ಯದ ಸಂಗತಿಯಾಗಿದೆ. ಜತೆಗೆ, ಇಲ್ಲಿನ ಇಕ್ಕಟ್ಟಿನ ರಸ್ತೆಯಲ್ಲಿ ವಾಹನ ಸಂಚರಿಸಲೂ ಆಗದೆ ಸಂಕಷ್ಟವೇ ಎದುರಾಗಿದೆ. ಇದೀಗ ರೈಲ್ವೇ ಕೆಳಸೇತುವೆ ಹಾಗೂ ಎನ್‌ಎಚ್ 66ರಿಂದ ಮಂಗಳೂರಿನ ಜಪ್ಪು ಮೋರ್ಗನ್‌ಗೆàಟ್‌ವರೆಗಿನ ದ್ವಿಪಥ ಪೂರ್ಣಗೊಂಡರೆ, ಜಪ್ಪು ಮಹಾಕಾಳಿಪಡು³ ಭಾಗದಲ್ಲಿ ವಾಹನಗಳು ಸಾಲು ನಿಲ್ಲುವ ಪ್ರಮೇಯ ಕಡಿಮೆಯಾಗಲೂಬಹುದು.
ರೈಲ್ವೇ ಅಧಿಕಾರಿಗಳ ಜತೆಗೆ ಸಭೆ
ಜಪ್ಪು ಮಹಾಕಾಳಿಪಡ್ಪು ರೈಲ್ವೇ ಕೆಳ ಸೇತುವೆ ಹಾಗೂ ಸಂಪರ್ಕ ರಸ್ತೆ ನಿರ್ಮಿಸುವ ಕಾಮಗಾರಿ ಶೀಘ್ರ ಆರಂಭಿಸುವ ಕುರಿತಂತೆ ರೈಲ್ವೇ ಅಧಿಕಾರಿಗಳ ಜತೆಗೆ ಸಭೆ ನಡೆಸಲಾಗುವುದು. ಈಗಾಗಲೇ ಸ್ಮಾರ್ಟ್‌ಸಿಟಿ ವತಿಯಿಂದ ಮೊದಲ ಕಂತು 10 ಕೋಟಿ ರೂ. ಮೊತ್ತವನ್ನು ದಕ್ಷಿಣ ರೈಲ್ವೇಯಲ್ಲಿ ಠೇವಣಿ ಇಡಲಾಗಿದೆ.
- ಡಾ| ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ, ದ.ಕ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.