ವಿಶೇಷ ವರದಿ: ಆಸ್ತಿ ಮಾಲಕತ್ವ ಹಕ್ಕು ವರ್ಗಾವಣೆಗೆ ಆನ್‌ಲೈನ್ ವ್ಯವಸ್ಥೆ
ಇ-ಆಸ್ತಿ ತಂತ್ರಾಂಶವನ್ನು ಕಾವೇರಿ ತಂತ್ರಾಂಶದೊಂದಿಗೆ ಜೋಡಣೆ
Team Udayavani, Jul 25, 2020, 3:18 PM IST
ಮಹಾನಗರ: ಇ-ಆಸ್ತಿ ತಂತ್ರಾಂಶವನ್ನು ಕಾವೇರಿ ತಂತ್ರಾಂಶ ದೊಂದಿಗೆ ಜೋಡಣೆ ಮಾಡಿ ಆಸ್ತಿಗಳ ನೋಂದಣಿ ಹಾಗೂ ಆಸ್ತಿ ಮಾಲಕತ್ವ ಹಕ್ಕು ವರ್ಗಾವಣೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮಾಡಲು ಸರಕಾರ ತೀರ್ಮಾನಿಸಿದ್ದು, ಮುಂಬರುವ ದಿನಗಳಲ್ಲಿ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿಯೂ ಈ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ.
ಆಸ್ತಿ ಮಾಲಕತ್ವ ಹಕ್ಕು ವರ್ಗಾವಣೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮಾಡುವ ಉದ್ದೇಶದಿಂದ ರಾಜ್ಯದ ರಾಮ ನಗರ, ಕನಕಪುರ ನಗರಸಭೆಗಳಲ್ಲಿ ಪ್ರಾಯೋಗಿ ಕವಾಗಿ ಇದನ್ನು ಅನುಷ್ಠಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಮಂಗಳೂರು ಮಹಾ ನಗರ ಪಾಲಿಕೆ ಸಹಿತ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ವಿಸ್ತರಿಸಲು ಸರಕಾರ ಉದ್ದೇಶಿಸಿದೆ. ಸದ್ಯದ ಮಾಹಿತಿ ಪ್ರಕಾರ, ಕೆಲವು ಪಾಲಿಕೆ ಗಳಲ್ಲಿ ಇ-ಆಸ್ತಿ ತಂತ್ರಾಂಶದ ಬಳಕೆಯು ತುಂಬ ನಿಧಾನಗತಿಯಲ್ಲಿ ಇರುವುದರಿಂದ ಸರಕಾರದ ಈ ತಂತ್ರಾಂಶ ಜೋಡಣೆಗೆ ಹಿನ್ನಡೆಯಾಗುತ್ತಿದೆ ಎನ್ನಲಾಗುತ್ತಿದೆ.
ಮಂಗಳೂರು-350 ಆಸ್ತಿಗಳಿಗೆ ಇ-ಖಾತಾ
ಗ್ರಾಮಾಂತರ ಭಾಗದಲ್ಲಿ ಆರ್‌ಟಿಸಿ ಇದ್ದ ಹಾಗೆ, ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ ಖಾತಾ ನೀಡಲಾಗುತ್ತಿತ್ತು. ಬಳಿಕ ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿ, ರಾಷ್ಟ್ರೀಯ ಸೂಚ್ಯಂಕ ಕೇಂದ್ರದ ಸಹಯೋಗದೊಂದಿಗೆ ಆಸ್ತಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಇ-ಖಾತಾ ಅನುಷ್ಠಾನಿಸಲಾಗಿದೆ. ತಂತ್ರಾಂಶದ ಮೂಲಕ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಅಧಿಕೃತ, ಅನಧಿಕೃತವಲ್ಲದ, ಅಕ್ರಮ ಆಸ್ತಿಗಳ ಮಾಹಿತಿಯನ್ನು ದಾಖಲಿಸಲು/ತಿದ್ದುಪಡಿ ಮಾಡಲು ಆಸ್ತಿಗಳ ಮಾಲಕತ್ವ ಹಕ್ಕು ವರ್ಗಾವಣೆ ಮಾಡಲು, ಆಸ್ತಿ ತೆರಿಗೆಯ ನಕಲನ್ನು ಡಿಜಿಟಲ್ ಸಹಿಯೊಂದಿಗೆ ತಂತ್ರಾಂಶದಿಂದ ಪಡೆಯಲು ಅವ ಕಾಶ ನೀಡಲಾಗಿದೆ. ಇದರಂತೆ ಮಂಗಳೂರಿ ನಲ್ಲಿ ಸುಮಾರು 350 ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ.
ಪ್ರಾಪರ್ಟಿ ಐಡಿ ಇಲ್ಲದೆ ಪರದಾಟ!
“ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರತಿ ಭೂಮಿಯನ್ನು ಪಾಲಿಕೆಯು ಸರ್ವೆ ಮಾಡಿ ನಿಗದಿತ ಐಡಿಯನ್ನು ನೀಡಲಾಗುತ್ತದೆ. 2002ರಲ್ಲಿ ಕೇಂದ್ರ ಸರಕಾರದ ನಿರ್ಮಲ ನಗರ ಯೋಜನೆಯಲ್ಲಿ ಐಡಿ ನೀಡುವ ಪ್ರಕ್ರಿಯೆ ಆರಂಭವಾಯಿತಾದರೂ ಇದು ಶೇ. 50ರಷ್ಟು ಪ್ರದೇಶಕ್ಕೆ ಮಾತ್ರ ಆಗಿದೆ. ಉಳಿದ ಶೇ. 50ರಷ್ಟು ಭೂಮಿಗೆ ಪ್ರಾಪರ್ಟಿ ಐಡಿ ಆಗಿಲ್ಲ. ಸದ್ಯ ಇ-ಖಾತಾ ಮಾಡುವ ವೇಳೆಯಲ್ಲಿ ಪ್ರಾಪರ್ಟಿ ಐಡಿ ಕೂಡ ನಮೂದು ಮಾಡಬೇಕಾದ ಹಿನ್ನೆಲೆಯಲ್ಲಿ ಬಹುತೇಕ ಮಂದಿಗೆ ಈ ಐಡಿ ಇಲ್ಲದೆ ಸಮಸ್ಯೆ ಆಗಿದೆ.
ಒಂದು ವೇಳೆ ಸಮೀಪದ ಭೂಮಿಯ ಐಡಿಯನ್ನು ಅವಲೋಕಿಸಿ ಅಂದಾಜು ಐಡಿಯನ್ನು ಹಾಕಿದರೆ, ಮುಂದೆ ಸಮಸ್ಯೆ ಆಗುವ ಸಾಧ್ಯತೆಯಿದೆ. ಹೀಗಾಗಿ ಈ ಸಮಸ್ಯೆ ನಿವಾರಣೆ ಮಾಡದೆ ಇ-ಖಾತಾ ಮಾಡುವುದು ಎಷ್ಟು ಸರಿ?’ ಎನ್ನುವುದು ಸಾಮಾಜಿಕ ಹೋರಾಟಗಾರ ಹನುಮಂತ ಕಾಮತ್ ಅವರ ಪ್ರಶ್ನೆ.
ಈ ಮಧ್ಯೆ, ಇ-ಖಾತಾ ಆದ ಬಳಿಕ ಅದನ್ನು ಪರಿಶೀಲಿಸಿದಾಗ ಅಕ್ಷರ ತಪ್ಪು, ಅಥವಾ ಸಂಖ್ಯೆ ತಪ್ಪು ಕಣ್ತಪ್ಪಿನಿಂದ ನಮೂದಾಗಿದ್ದರೆ ಮತ್ತೆ ಅದನ್ನು ಪಾಲಿಕೆಯಲ್ಲಿ ಸರಿ ಮಾಡುವಂತಿಲ್ಲ. ಅದನ್ನು ಬೆಂಗಳೂರಿನ ಪೌರಾಡಳಿತ ಇಲಾಖೆಗೆ ಕಳುಹಿಸಿ ಸರಿಪಡಿಸಬೇಕು. ಪಾಲಿಕೆಯ ಕಂದಾಯ ಇಲಾಖೆಯಲ್ಲಿ ಸಿಬಂದಿ ಕೊರತೆಯಿಂದಾಗಿ ಕೊಂಚ ಅಕ್ಷರ ತಪ್ಪಾದರೂ ಈ ಸಮಸ್ಯೆ ಎದುರಾಗಲಿದೆ ಎನ್ನುತ್ತಾರೆ ಸಾರ್ವಜನಿಕರೊಬ್ಬರು.
ಇ-ಖಾತಾ ನೋಂದಣಿಗೆ ವೇಗ
ಮಂಗಳೂರಿನಲ್ಲಿ ಇ-ಖಾತಾ ನೋಂದಣಿ ಈಗಾಗಲೇ ನಡೆ ಯು ತ್ತಿದೆ. ಜಾಗದ ಪೂರ್ಣ ದಾಖಲಾತಿ ನೀಡಿ ಇ- ಖಾತಾ ಮಾಡಬಹುದಾಗಿದೆ. ಮುಂದೆ ಆಸ್ತಿ ಮಾಲಕತ್ವ ಹಕ್ಕು ವರ್ಗಾವಣೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮಾಡಲು ಸರಕಾರ ಉದ್ದೇಶಿ ಸಿದೆ. ಈ ಬಗ್ಗೆ ಪಾಲಿಕೆ ಸಭೆಯಲ್ಲಿ ಸೂಕ್ತ ತೀರ್ಮಾನವಾಗಲಿದೆ. ಇ-ಖಾತಾ ಮಾಡಿಸುವಲ್ಲಿ ಜನರಿಗೆ ಸಮಸ್ಯೆ ಆಗದಂತೆ ಪಾಲಿಕೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.
– ಸಂತೋಷ್ ಕುಮಾರ್, ಉಪ ಆಯುಕ್ತರು, ಮನಪಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulki: ವಾಹನ ನಿಲುಗಡೆ ನಿಷೇದವಿದ್ದರೂ ಪಾರ್ಕಿಂಗ್; ಸುಗಮ ಸಂಚಾರಕ್ಕೆ ಅಡ್ಡಿ
Train Service: ಮಂಗಳೂರು – ವಿಜಯಪುರ ವಿಶೇಷ ರೈಲು ವಿಸ್ತರಣೆ
U. T. Khader: ಹೆಬ್ಟಾಳ್ಕರ್-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
ಮಂಜನಾಡಿ ಗ್ಯಾಸ್ ಸ್ಫೋ*ಟ ಪ್ರಕರಣ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.