Mangaluru ಜಂಕ್ಷನ್‌ ಅಭಿವೃದ್ಧಿಗೆ ವೇಗ; ಹಳೆ ಕಟ್ಟಡಕ್ಕೆ ಹೊಸ ರೂಪ

ಅಮೃತ್‌ ಭಾರತ್‌ ಸ್ಟೇಶನ್‌ ಯೋಜನೆಯಡಿ 19.32 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ

Team Udayavani, Dec 3, 2024, 1:05 PM IST

2

ಮಹಾನಗರ: ಅಮೃತ್‌ ಭಾರತ್‌ ಸ್ಟೇಶನ್‌ ಯೋಜನೆ (ಎಬಿಬಿಎಸ್‌) ಅಡಿಯಲ್ಲಿ ಕರಾವಳಿ ಪ್ರದೇಶದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾದ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದ್ದು, ಶೀಘ್ರ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಕಂಕನಾಡಿಯಲ್ಲಿರುವ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣ ದಕ್ಷಿಣ ರೈಲ್ವೇಯ ಪಾಲಕ್ಕಾಡ್‌ ವಿಭಾಗದ 16 ರೈಲು ನಿಲ್ದಾಣಗಳಲ್ಲಿ ಒಂದಾಗಿದ್ದು, 2023ರ ಆಗಸ್ಟ್‌ನಲ್ಲಿ ಎಬಿಬಿಎಸ್‌ ಅಡಿಯಲ್ಲಿ ಅಭಿವೃದ್ಧಿ ಕಾರ್ಯಕೈಗೊಳ್ಳಲು ಶಿಲಾನ್ಯಾಸ ನೆರವೇರಿಸಲಾಗಿತ್ತು. ಕಾಮಗಾರಿಗೆ ರೈಲ್ವೇ ಸಚಿವಾಲಯ 19.32 ಕೋಟಿ ರೂ. ಮೀಸಲಿಟ್ಟಿದೆ. ಅದರಂತೆ ನಿಲ್ದಾಣದ ಉನ್ನತೀಕರಣ ಕಾರ್ಯಗಳು ನಡೆಯುತ್ತಿದೆ.

ಹಳೆಯ ಕಟ್ಟಡಕ್ಕೆ ಹೊಸ ಸ್ಪರ್ಶ
ನಿಲ್ದಾಣದ ಮುಂಭಾಗವನ್ನು ಕರಾವಳಿಯ ಪಾರಂಪರಿಕ ಶೈಲಿಯಲ್ಲಿ ನಿರ್ಮಾಣ ಮಾಡಲಾ ಗುತ್ತಿದೆ. ಮುಖ್ಯವಾಗಿ ಮಂಗಳೂರು ಹೆಂಚಿನ ಮೇಲ್ಛಾವಣಿ ಪ್ರಮುಖ ಅಕರ್ಷಣೆಯಾಗಿದೆ. ಛಾವಣಿಯಲ್ಲಿ ಗುತ್ತಿನ ಮನೆಯ ಪರಿಕಲ್ಪನೆ ಯನ್ನೂ ಕಾಣಬಹುದಾಗಿದೆ. ವಿವಿಧ ಡಿಸೈನ್‌ಗಳನ್ನೂ ರಚಿಸಲಾಗಿದ್ದು, ಹಳೆಯ ಸ್ಟೇಶನ್‌ ಕಟ್ಟಡಕ್ಕೆ ಹೊಸ ನೋಟವನ್ನು ನೀಡಲಾಗಿದೆ.

ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣ ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆಯುತ್ತಿದೆ. ಮುಂಬಯಿ- ಕೇರಳ ನಡುವೆ ಹಲವು ಹೊಸ ರೈಲುಗಳ ಆರಂಭ, ಇರುವ ರೈಲುಗಳ ಹೆಚ್ಚಳದಿಂದಾಗಿ ಈ ನಿಲ್ದಾಣದಿಂದ ರೈಲು ಹತ್ತುವ ಮತ್ತು ಇಳಿಯುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಇಲ್ಲಿನ ಮೂಲ ಸೌಲಭ್ಯಗಳ ಹೆಚ್ಚಳಕ್ಕೆ ಬೇಡಿಕೆಯೂ ಹೆಚ್ಚುತ್ತಿದೆ.

ಏನೆಲ್ಲ ಅಭಿವೃದ್ಧಿ ಕಾಮಗಾರಿಗಳು?
-ನಿಲ್ದಾಣ ಮುಂಭಾಗದಲ್ಲಿ ನಿರ್ಮಾಣವಾಗುತ್ತಿರುವ 155 ಚ.ಮೀ. ಪ್ರವೇಶ ದ್ವಾರ ನಿಲ್ದಾಣದ ಸೌಂದರ್ಯಕ್ಕೆ ಇನ್ನಷ್ಟು ಮೆರಗು ನೀಡಲಿದೆ.
-ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ನಿಲ್ದಾಣದ ಪ್ರವೇಶ ದ್ವಾರದ ಮುಂಭಾಗದ ಸುಮಾರು 7,000 ಚ.ಮೀ. ಪ್ರದೇಶವನ್ನು ಕಾಂಕ್ರೀಟ್‌ ಕಾಮಗಾರಿ ನಡೆಸಲಾಗಿದೆ.
-ಜತೆಗೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಿಲ್ಲದೆ ನೇರ ಪ್ರವೇಶ ಸಿಗಲಿದೆ.
-ಗಾರ್ಡನ್‌, ಲಾನ್‌ ಬೆಳೆಸಲು ಅನುಕೂಲವಾಗುವಂತೆ ಐಲ್ಯಾಂಡ್‌ಗಳನ್ನೂ ನಿರ್ಮಿಸಲಾಗಿದೆ.
-ಹವಾನಿಯಂತ್ರಿತ ವೇಟಿಂಗ್‌ ಹಾಲ್‌ ಮತ್ತು ವಿಕಲಚೇತನರಿಗಾಗಿ ವಿಶ್ರಾಂತಿ ಕೊಠಡಿ ನಿರ್ಮಾಣ.
-1632 ಚ.ಮೀ. ವಿಸ್ತೀರ್ಣವಾದ ಪ್ರದೇಶದಲ್ಲಿ ದ್ವಿಚಕ್ರ ವಾಹನ ಮತ್ತು ಕಾರುಗಳ ಪಾರ್ಕಿಂಗ್‌ ಗೆ ಅವಕಾಶ.
-ನಿಲ್ದಾಣದ ಒಳಭಾಗದಲ್ಲಿ 6 ಮೀ. ಅಗಲದ ಪಾದಚಾರಿ ಮೇಲ್ಸೇತುವೆ, ಪ್ರಯಾಣಿಕರಿಗೆ ಹಳಿ ದಾಟುವಲ್ಲಿ ನೆರವು.
-ಫ್ಲಾಟ್‌ ಫಾರ್ಮ್ 1 ಮತ್ತು 2ನ್ನು ದುರಸ್ತಿ ಗೊಳಿಸುವ ಕಾರ್ಯವೂ ಬಹುತೇಕ ಅಂತಿಮ.
-ಫ್ಲಾಟ್‌ ಫಾರ್ಮ್ನಲ್ಲಿ ಹೈಮಾಸ್ಟ್‌ ದೀಪಗಳು, ಬಿಎಲ್‌ ಡಿಸಿ ಫ್ಯಾನ್‌, ಮೊಬೈಲ್‌ ಫೋನ್‌ ಚಾರ್ಜಿಂಗ್‌ ವ್ಯವಸ್ಥೆ ಬರಲಿದೆ.
-ನಾಗುರಿ ಭಾಗದಿಂದ ಇರುವ ರಸ್ತೆಯನ್ನು ಅಗಲಗೊಳಿಸಿ ಅಭಿವೃದ್ಧಿ ಪಡಿಸುವ ಕಾಮಗಾರಿಗೂ ಚಾಲನೆ ಸಿಕ್ಕಿದೆ.

1979ರಲ್ಲಿ ಆರಂಭವಾದ ನಿಲ್ದಾಣ
1979ರ ಮೇ 20ರಂದು ಮಂಗಳೂರು ಜಂಕ್ಷನ್‌ ನಿಲ್ದಾಣ ಆರಂಭವಾಗಿದ್ದು, ಪಾಲಕ್ಕಾಡ್‌ ವಿಭಾಗದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದು. ಇಲ್ಲಿ ಪ್ರತಿದಿನ ನಿಲ್ದಾಣದ ಮೂಲಕ 35 ರೈಲುಗಳು ಸಂಚರಿಸುತ್ತವೆ. ದಿನಕ್ಕೆ 6,700ಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣಕ್ಕೆ ಭೇಟಿ ನೀಡುತ್ತಾರೆ. ಜಂಕ್ಷನ್‌ ರೈಲು ನಿಲ್ದಾಣವು ದಕ್ಷಿಣಕ್ಕೆ ಕೇರಳ, ಉತ್ತರಕ್ಕೆ ಗೋವಾ, ಮಹಾರಾಷ್ಟ್ರ, ನವಮಂಗಳೂರು ಬಂದರು, ಪೂರ್ವದಲ್ಲಿ ಬೆಂಗಳೂರು ಮೈಸೂರು ಮೊದಲಾದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ.

-ಭರತ್‌ ಶೆಟ್ಟಿಗಾರ್‌

ಟಾಪ್ ನ್ಯೂಸ್

Kundapura: ಪಾರಂಪರಿಕ ಆಚರಣೆಯ ತಲ್ಲೂರಿನ ಕಂಬಳ

Kundapura: ಪಾರಂಪರಿಕ ಆಚರಣೆಯ ತಲ್ಲೂರಿನ ಕಂಬಳ

Mob-BRAIN

Oxford University Press: ಆಕ್ಸ್‌ಫ‌ರ್ಡ್‌ನ 2024ರ ವರ್ಷದ ಪದ “ಬ್ರೈನ್‌ ರಾಟ್‌”

Paddy-Lose

Cyclone Fengal: ಚಂಡಮಾರುತ ಪರಿಣಾಮ: ರಾಜ್ಯದ ಹಲವೆಡೆ ತೀವ್ರ ಮಳೆಗೆ ಭಾರೀ ಬೆಳೆ ಹಾನಿ

PB-Sukbhir-singh

Serves Punishment: ಧರ್ಮದ್ರೋಹ: ಕುತ್ತಿಗೆಗೆ ಫ‌ಲಕ ಧರಿಸಿದ ಪಂಜಾಬ್‌ ಮಾಜಿ ಡಿಸಿಎಂ ಬಾದಲ್‌

MLA-Basangowda-yatnal

Show cause Notice: ಶಿಸ್ತು ಸಮಿತಿಯ ಮುಂದೆ ಇಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಜರು

ವಿದ್ಯಾರ್ಥಿಯ ಶೈಕ್ಷಣಿಕ ಖಾತೆ ನೋಂದಣಿಗೆ “ಅಪಾರ್‌’ ವೇಗ!

Mangaluru: ವಿದ್ಯಾರ್ಥಿಯ ಶೈಕ್ಷಣಿಕ ಖಾತೆ ನೋಂದಣಿಗೆ “ಅಪಾರ್‌’ ವೇಗ!

Handicap-prog-CM

Disabilities Day: ಅಂಗವಿಕಲರ ಆರೈಕೆದಾರರಿಗೆ ಮಾಸಿಕ ಸಾವಿರ ರೂಪಾಯಿ ಭತ್ತೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿದ್ಯಾರ್ಥಿಯ ಶೈಕ್ಷಣಿಕ ಖಾತೆ ನೋಂದಣಿಗೆ “ಅಪಾರ್‌’ ವೇಗ!

Mangaluru: ವಿದ್ಯಾರ್ಥಿಯ ಶೈಕ್ಷಣಿಕ ಖಾತೆ ನೋಂದಣಿಗೆ “ಅಪಾರ್‌’ ವೇಗ!

ALVAS-Camp

Mangaluru: ವಿವಿ ಅಂತರ್‌ ಕಾಲೇಜು ಆ್ಯತ್ಲೆಟಿಕ್ಸ್‌: ಸತತ 22 ಬಾರಿ ಆಳ್ವಾಸ್‌ ಚಾಂಪಿಯನ್‌

Mangaluru: ಜಿಲ್ಲಾಡಳಿತದಿಂದ ಮುಂಜಾಗ್ರತ ಕ್ರಮ: ಡಿಸಿ

Mangaluru: ಜಿಲ್ಲಾಡಳಿತದಿಂದ ಮುಂಜಾಗ್ರತ ಕ್ರಮ: ಡಿಸಿ

Mangaluru ವಿಮಾನ ನಿಲ್ದಾಣ: ಮತ್ತೆ ಬಾಂಬ್‌ ಬೆದರಿಕೆ

Mangaluru ವಿಮಾನ ನಿಲ್ದಾಣ: ಮತ್ತೆ ಬಾಂಬ್‌ ಬೆದರಿಕೆ

Fainjal cyclone ದ.ಕ. ಜಿಲ್ಲೆ: ಅಬ್ಬರದ ಮಳೆ; ಹಲವೆಡೆ ಹಾನಿ

Fainjal cyclone ದ.ಕ. ಜಿಲ್ಲೆ: ಅಬ್ಬರದ ಮಳೆ; ಹಲವೆಡೆ ಹಾನಿ

MUST WATCH

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

ಹೊಸ ಸೇರ್ಪಡೆ

Kundapura: ಪಾರಂಪರಿಕ ಆಚರಣೆಯ ತಲ್ಲೂರಿನ ಕಂಬಳ

Kundapura: ಪಾರಂಪರಿಕ ಆಚರಣೆಯ ತಲ್ಲೂರಿನ ಕಂಬಳ

Mob-BRAIN

Oxford University Press: ಆಕ್ಸ್‌ಫ‌ರ್ಡ್‌ನ 2024ರ ವರ್ಷದ ಪದ “ಬ್ರೈನ್‌ ರಾಟ್‌”

Paddy-Lose

Cyclone Fengal: ಚಂಡಮಾರುತ ಪರಿಣಾಮ: ರಾಜ್ಯದ ಹಲವೆಡೆ ತೀವ್ರ ಮಳೆಗೆ ಭಾರೀ ಬೆಳೆ ಹಾನಿ

PB-Sukbhir-singh

Serves Punishment: ಧರ್ಮದ್ರೋಹ: ಕುತ್ತಿಗೆಗೆ ಫ‌ಲಕ ಧರಿಸಿದ ಪಂಜಾಬ್‌ ಮಾಜಿ ಡಿಸಿಎಂ ಬಾದಲ್‌

Dina Bhavishya

Daily Horoscope;ಮನಸ್ಸಿನ ಸ್ವಾಸ್ಥ್ಯಕ್ಕೆ ಹಾನಿ, ಉದ್ಯೋಗ ಪ್ರಾರ್ಥನೆಗೆ ಕ್ಷಿಪ್ರಾನುಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.