ಅಡಿಕೆ ಸಸಿಗಳಿಗೆ ಸ್ಪಿಂಡ್‌ಲ್ ಬಗ್ ಇನ್‌ಫೆಕ್ಷನ್
Team Udayavani, Sep 28, 2018, 1:24 PM IST
ಮೂಡಬಿದಿರೆ: ಪುತ್ತಿಗೆ ಗ್ರಾ.ಪಂ. ವ್ಯಾಪ್ತಿಯ ಕೊಡ್ಯಡ್ಕ ಮಿತ್ತಬೈಲ್‌ನ ಆಗಸ್ಟಿನ್ ಪಿಂಟೋ ಅವರ ರೋಗ ಬಾಧಿತ ಅಡಿಕೆ ತೋಟಕ್ಕೆ ವಿಟ್ಲದ ಸಿಪಿಸಿಆರ್‌ಐ ವಿಜ್ಞಾನಿ, ತಾಂತ್ರಿಕ ಸಹಾಯಕರು ಹಾಗೂ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಗುರುವಾರ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಮಾರ್ಗಗಳನ್ನು ಸೂಚಿಸಿದರು.
ಅಡಿಕೆ ಸಸಿಗಳ ಸೋಗೆ ಹಳದಿ ಬಣ್ಣಕ್ಕೆ ತಿರುಗುವ, ಸಿರಿಯ ಸುಳಿಯ ಭಾಗದ ಮೇಲೆ ಬರುತ್ತಲೇ ಒಂದಷ್ಟು ಭಾಗ ಯಾವುದೋ ಕೀಟ ತಿಂದು ಹಾಕಿದಂತೆ ತೋರುವ, ಸೋಗೆಯೇ ಸುಟ್ಟು ಹೋದಂತಾಗುವ ಈ ರೋಗವು ಸ್ಪಿಂಡ್‌ಲ್ ಬಗ್ ಇನ್‌ಫೆಕ್ಷನ್ ನಿಂದಾಗಿದೆ. ಸುಳಿಯ ಭಾಗದಲ್ಲಿ ಕೀಟವು ರಸ ಹೀರಿ, ಕೆರೆದು ಹಾಕಿದಂತಾಗುತ್ತದೆ. ಮಳೆಗಾಲ ಕಳೆಯುತ್ತಿದ್ದಂತೆ ಈ ಸಿರಿಯ ಭಾಗದ ಮೇಲೆ ಬರುವಾಗ ಆ ಭಾಗ ಬಲಹೀನವಾಗಿ, ಒಣಗಿ, ಸುಟ್ಟು ಹೋದಂತೆ ಹೊರಹೊಮ್ಮುತ್ತದೆ. ಇದನ್ನು ಹತೋಟಿಗೆ ತರಲು ‘ಥಿಮೆಟ್’ ಸ್ಯಾಚೆಟ್ ಗಳನ್ನು ಈ ಭಾಗದಲ್ಲಿಡಬೇಕು ಇದರೊಂದಿಗೆ ಥಿಯಾಮೆಥಾಕ್ಸೊಂ ಎಂಬ ಕೀಟ ನಾಶಕವನ್ನು ಸ್ಪ್ರೆ ಮಾಡಬೇಕು ಎಂದು ಸಿಪಿಸಿಆರ್‌ಐ ಪ್ಲಾಂಟ್ ಪೆಥೋಲಜಿ ವಿಜ್ಞಾನಿ ಡಾ| ಥಾವಾ ಪ್ರಕಾಶನ್ ಪಾಂಡಿಯನ್ ಅವರು ಸೂಚಿಸಿದರು.
ಫಂಗಸ್ ಇನ್‌ಫೆಕ್ಷನ್
ಆಗಸ್ಟಿನ್ ಅವರ ತೋಟವು ಹದವಾದ ಇಳಿಜಾರಿನ ಗುಡ್ಡ ಪ್ರದೇಶದಲ್ಲಿರುವುದಾದರೂ ಇಲ್ಲಿರುವುದು ಕೊಂಚ ಅಂಟು ಮಣ್ಣು. ಅಡಿಕೆ ಸಸಿಗಳಿಗಾಗಿ ಮಾಡಿದ ಹೊಂಡವೂ ಸ್ವಲ್ಪ ದೊಡ್ಡದೇ ಇದೆ. ಇಲ್ಲಿ ಬಿದ್ದ ನೀರು ಇಂಗಲು ವ್ಯವಸ್ಥೆ ಇಲ್ಲ. ಹೀಗಾಗಿ ಫಂಗಸ್ ಇನ್‌ಫೆಕ್ಷನ್ ಆಗಿ ಸುಳಿ ಕೊಳೆ ರೋಗ ಉಂಟಾಗುತ್ತದೆ. ಇದನ್ನು ನಿವಾರಿಸಲು ಎರಡು ಸಾಲುಗಳ ನಡುವೆ ಇರುವ ಹೊಂಡಗಳಿಗಿಂತಲೂ ಕನಿಷ್ಟ ಅರ್ಧ ಅಡಿ ಆಳದ ಬಸಿಗಾಲುವೆಯನ್ನು ತೋಡಿ ಸಸಿಗಳ ಬುಡದಲ್ಲಿ ನೀರು ನಿಲ್ಲದಂತೆ ಮಾಡಬೇಕು. ಕಾಪರ್ ಆಕ್ಸಿಕ್ಲೋರೈಡ್ ಶೇ. 0.1 ದ್ರಾವಣವನ್ನು ಈ ಸುಳಿಯೊಳಗೆ ಸಿಂಪಡಿಸಬೇಕು, ಬುಡಕ್ಕೂ ಇಳಿಯುವಂತೆ ಮಾಡಬೇಕು ಎಂದು ಅವರು ಸೂಚಿಸಿದರು.
ಇದೇರೀತಿ ಕೊಡ್ಯಡ್ಕ ಮಿತ್ತಬೈಲ್‌ನ ಗೋವರ್ಧನ ನಾಯಕ್ ಅವರ ತೋಟದಲ್ಲಿ ಕಾಣಿಸಿಕೊಂಡಿರುವ ರೋಗ ಪೀಡಿತ ಅಡಿಕೆ ಗಿಡಗಳ ಬಗ್ಗೆಯೂ ವಿಜ್ಞಾನಿಗಳು ಪರಿಹಾರ ಸೂಚಿಸಿದರು. ಸಿಪಿಸಿಆರ್‌ಐ ಹಿರಿಯ ತಾಂತ್ರಿಕ ಸಹಾಯಕ ಬಿ. ಆನಂದ ಗೌಡ ಸಲಹೆ ನೀಡಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿ’ಸೋಜಾ ಸಲಹೆ-ಸೂಚನೆ ನೀಡಿದರು. ಮಿತ್ತಬೈಲ್‌ಗೆ ಬರುವ ಮುನ್ನ ಈ ತಂಡದವರು ಆನೆಗುಡ್ಡೆಯ ಪಾರ್ಶ್ವನಾಥ ಜೈನ್ ಅವರ ತೋಟಕ್ಕೂ ಭೇಟಿ ನೀಡಿ ಸಮರ್ಪಕ ಪರಿಹಾರ ಮಾರ್ಗಗಳನ್ನು ತಿಳಿಸಿದರು. ಮೂಡಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರದ ನಿಕಟಪೂರ್ವ ಅಧ್ಯಕ್ಷ ರಾಜವರ್ಮ ಬೈಲಂಗಡಿ, ವಲಯ ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ, ಕಡಂದಲೆ ಪೌಲ್ ಡಿ’ಸೋಜಾ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Naa Ninna Bidalare Review: ಬಿಟ್ಟೆನೆಂದರೂ ಬಿಡದೀ ಮಾಯೆ!
Maharashtra; ಗೊಂಡಿಯಾ ಬಸ್ ಅಪಘಾತ: 11ಕ್ಕೇರಿದ ಸಾವಿನ ಸಂಖ್ಯೆ, ಪರಿಹಾರ ಘೋಷಿಸಿದ ಪ್ರಧಾನಿ
Ramya: ಗೆಳೆಯನ ಜತೆಗಿನ ರಮ್ಯಾ ಫೋಟೋ ವೈರಲ್
Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್; ಮಹಿಳೆಯರು ಸೇರಿ ಹಲವರ ಸಾವು
Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.