ವನ್ಯಜೀವಿ ಸಂರಕ್ಷಣೆಯಲ್ಲಿ ರಾಜ್ಯ ಪ್ರಥಮ: ರಮಾನಾಥ ರೈ
Team Udayavani, Feb 10, 2018, 8:15 AM IST
ಮಂಗಳೂರು: ಆನೆ, ಹುಲಿ, ಸಿಂಗಳೀಕ ಹಾಗೂ ಚಿರತೆಗಳು ಅತ್ಯಧಿಕ ಪ್ರಮಾಣದಲ್ಲಿ ಕರ್ನಾಟಕದಲ್ಲಿ ಇವೆ ಎಂದು ಅಧ್ಯಯನ ವರದಿ ತಿಳಿಸಿದೆ. ಎಲ್ಲ ರೀತಿಯ ವನ್ಯಜೀವಿಗಳ ಸಂರಕ್ಷಣೆ ಯಲ್ಲಿ ರಾಜ್ಯವು ಪ್ರಥಮ ಸ್ಥಾನದೊಂದಿಗೆ ಮುಂಚೂಣಿಯಲ್ಲಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಮಾನಾಥ ರೈ ತಿಳಿಸಿದರು.
ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವೃತ್ತ ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿ ವೃದ್ಧಿ ಮಂಡಳಿಯ ಸಹ ಯೋಗ ದಲ್ಲಿ ಮಂಗಳೂರಿನಲ್ಲಿ ಆಯೋಜಿಸ ಲಾದ ಮೂರು ದಿನಗಳ ರಾಜ್ಯ ಮಟ್ಟದ “4ನೇ ಕರ್ನಾಟಕ ಹಕ್ಕಿ ಹಬ್ಬ’ಕ್ಕೆ ಶುಕ್ರವಾರ ಮಂಗಳೂರಿನ ಪುರ ಭವನ ದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ನಾಲ್ಕು ವರ್ಷದ ಹಿಂದೆ ರಂಗನತಿಟ್ಟಿ ನಲ್ಲಿ ಹಕ್ಕಿ ಹಬ್ಬ ಮಾಡಿದ್ದೆವು. ಇದ ರಿಂದ ಪಕ್ಷಿ ವೀಕ್ಷಕರಿಗೆ ಹಾಗೂ ಹವ್ಯಾಸಿ ಗಳಿಗೆ ಪಕ್ಷಿಗಳ ಬಗ್ಗೆ ತಿಳಿದು ಕೊಳ್ಳಲು ಅನುಕೂಲವಾಗಿದೆ. ಹಕ್ಕಿ ಗಳಿ ಗಾಗಿ ಮೀಸಲು ಅರಣ್ಯಗಳು ನಮ್ಮಲ್ಲಿ ಸಾಕಷ್ಟಿವೆ. ವನ್ಯಜೀವಿಗಳ ಸಂರಕ್ಷಣೆಯ ಜತೆಗೆ ಎಲ್ಲ ಪ್ರಾಣಿಗಳ ಬಗ್ಗೆ ದಯೆಯನ್ನು ತೋರಿಸಬೇಕು ಎಂದರು.
ವನ್ಯಜೀವಿಗಳು ಅಪಾಯದಲ್ಲಿ
ಹಿಂದಿನ ಕಾಲದಲ್ಲಿ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಮನುಷ್ಯರು ಗುಹೆ ಗಳಲ್ಲಿ ಇರುತ್ತಿದ್ದರು. ಪ್ರಾಣಿಗಳು ಸ್ವತ್ಛಂದ ವಾಗಿ ಓಡಾಡುತ್ತಿದ್ದವು. ಆದರೆ ಇಂದು ಮನುಷ್ಯರಿಂದ ರಕ್ಷಣೆ ಪಡೆದು ಕೊಳ್ಳಲು ಪ್ರಾಣಿಗಳು ಗುಹೆಯ ಮೊರೆ ಹೋಗು ವಂತಾಗಿದೆ ಎಂದು ಹೇಳಿದ ಸಚಿವರು, ನವಿಲಿನ ನರ್ತನ, ಕೋಗಿಲೆಯ ಹಾಡು ಮಾನವರಿಗೆ ಪ್ರೇರಣೆ ಯಾಗಿದೆ. ನನ್ನ ಮನೆಯಲ್ಲಿ ಹಿಂದೆ ಕೋವಿ ಇತ್ತು. ಈಗ ಇಲ್ಲ. ಹಿಂದೆ ಹುಲಿ ಕೊಂದವರ ಭಾವಚಿತ್ರ ಪತ್ರಿಕೆ ಯಲ್ಲಿ ಪ್ರಕಟವಾಗುತ್ತಿತ್ತು. ಆದರೆ ಈಗ ಕಾಡುಪ್ರಾಣಿಗಳನ್ನು ಕೊಲ್ಲ ಬಾರದು ಎಂದು ಮನವರಿಕೆ ಹಾಗೂ ಜಾಗೃತಿ ಎಲ್ಲೆಡೆ ಬಹುತೇಕ ಆಗಿದೆ ಎಂದು ರೈ ತಿಳಿಸಿದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿ ಕಾರ ಅಧ್ಯಕ್ಷ ಸುರೇಶ್ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷಿ ಸಂರಕ್ಷಣೆ ಕುರಿತ ಸ್ಟಿಕ್ಕರ್, ಕರಪತ್ರ, ಪ್ರವಾ ಸೋದ್ಯಮ ಮ್ಯಾಪ್ ಅನ್ನು ಸಚಿವರು ಬಿಡುಗಡೆಗೊಳಿಸಿದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್. ಖಾದರ್, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಮುಖರಾದ ಪಿಯೂಸ್ ರಾಡ್ರಿಗಸ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್, ಚಿಕ್ಕಮಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ ಮೋಹನ್ ರಾಜ್, ಮಾಜಿ ಅರಣ್ಯಪಡೆ ಮುಖ್ಯಸ್ಥ ವಿನಯ್ ಲೂಥಾ ಉಪಸ್ಥಿತರಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ಕರಿಕಾಲನ್ ಸ್ವಾಗತಿಸಿದರು.
ಸಮಾರಂಭಕ್ಕೆ ಮುನ್ನ ಪಕ್ಷಿ ಜಾಗೃತಿ ಜಾಥಾ ಹಾಗೂ ವಿದ್ಯಾರ್ಥಿಗಳಿಂದ “ನುಡಿದಂತೆ ನಡೆ’ ಎಂಬ ಪರಿಸರ ನೃತ್ಯ ನಡೆಯಿತು.
ಹಕ್ಕಿಹಬ್ಬದಲ್ಲಿ ಏನೇನಿದೆ?
ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ| ಸಂಜಯ ಬಿಜೂರ್ ಮಾತನಾಡಿ, ಫೆ. 9, 10ರಂದು ಪಿಲಿಕುಳದಲ್ಲಿ ಪಕ್ಷಿ ತಜ್ಞರಿಂದ ಉಪನ್ಯಾಸ, ವ್ಯಂಗ್ಯಚಿತ್ರ ಕಾರ್ಯಾಗಾರ, ರಸಪ್ರಶ್ನೆ ನಡೆಯಲಿವೆ. ಸಸಿಹಿತ್ಲು, ಮಂಜಲ್ಪಾದೆ ಸಹಿತ ಮಂಗಳೂರು ವಿ.ವಿ. ಹಾಗೂ ಪರಿಸರದ ಜೌಗು ಪ್ರದೇಶ ಗಳಲ್ಲಿ ಪಕ್ಷಿ ವೀಕ್ಷಣೆ ಪ್ರವಾಸ, ಫೆ. 11ರಂದು ಸಮುದ್ರದಲ್ಲಿ ಬೋಟಿನ ಮೂಲಕ ತೆರಳಿ ಪಕ್ಷಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.