ರಸ್ತೆಗುಂಡಿ ಪರಿಹಾರ ನಗರಾಡಳಿತ ಸಂಸ್ಥೆಗಳ ಉತ್ತರದಾಯಿತ್ವ


Team Udayavani, Feb 9, 2020, 5:31 AM IST

lead1

ರಸ್ತೆ ಗುಂಡಿ ಹಾಗೂ ಅಸಮರ್ಪಕ ರಸ್ತೆ ನಿರ್ವಹಣೆ ಬಗ್ಗೆ ರಾಜ್ಯ ಹೈಕೋರ್ಟ್‌ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ನಿರಂತರ ಚಾಟಿ ಬೀಸುತ್ತಲೆ ಬಂದಿದೆ. ಇದೀಗ ಹೈಕೋರ್ಟ್‌ನ ನಿರ್ದೇಶನದಂತೆ ರಸ್ತೆ ಹಾಗೂ ಫುಟ್‌ಪಾತ್‌ಗಳ ಅಸಮರ್ಪಕ ನಿರ್ವಹಣೆಯಿಂದ ಉಂಟಾಗುವ ಅಪಘಾತಗಳಲ್ಲಿ ಪರಿಹಾರ ನೀಡುವ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ.

ರಸ್ತೆಗಳಲ್ಲಿ ಗುಂಡಿ, ಅಸಮರ್ಪಕ ನಿರ್ವಹಣೆಯಿಂದ ವಾಹನ ಸವಾರರು, ಸಾರ್ವಜನಿಕರು ಅಪಘಾತಕ್ಕೊಳಗಾದರೆ ಅದಕ್ಕೆ ಯಾರು ಹೊಣೆ ಮತ್ತು ಸಂತ್ರಸ್ತರಿಗೆ ಪರಿಹಾರ ನೀಡುವ ಉತ್ತರದಾಯಿತ್ವವನ್ನು ಯಾರು ಹೊರಬೇಕು ಎಂಬ ಗೊಂದಲ ಹಲವಾರು ವರ್ಷಗಳಿಂದ ಬಗೆ ಹರಿಯದೆ ಉಳಿದಿದೆ. ರಸ್ತೆಗಳ ಅಸಮರ್ಪಕ ನಿರ್ವಹಣೆ ಕಾರಣದಿಂದ ವಾಹನಗಳು ಗುಂಡಿಗೆ ಬಿದ್ದು, ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸಿದರೆ ಇದಕ್ಕೆ ಆಯಾಯಾ ನಗರಾಡಳಿತ ಸಂಸ್ಥೆಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು ಹಾಗೂ ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ನಗರಾಡಳಿತ ಸಂಸ್ಥೆಗಳೇ ನೀಡಬೇಕು ಎಂಬ ಬಗ್ಗೆ ಹಲವಾರು ಕಾನೂನು ಹೋರಾಟಗಳು ನಡೆದಿವೆ. ಇದೀಗ ಈ ಗೊಂದಲಗಳಿಗೆ ಪರಿಹಾರ ದೊರಕುವ ಮತ್ತು ಸಂಬಂಧಪಟ್ಟ ನಗರಾಡಳಿತ ಸಂಸ್ಥೆಗಳೇ ಇದರ ಉತ್ತರದಾಯಿತ್ವವನ್ನು ವಹಿಸಿಕೊಳ್ಳುವ ಉಪಕ್ರಮವೊಂದಕ್ಕೆ ಬೆಂಗಳೂರು ನಾಂದಿಯಾಗುತ್ತಿದೆ. ಒಟ್ಟು ರಾಜ್ಯದಲ್ಲಿ ರಸ್ತೆ ಗುಂಡಿ ಮತ್ತು ಅಸಮರ್ಪಕ ನಿರ್ವಹಣೆಯಿಂದ ಸಂಭವಿಸುವ ಅಪಘಾತಗಳಿಗೆ ಪರಿಹಾರ ನೀಡುವಲ್ಲಿ ಇದು ದಿಕ್ಸೂಚಿಯಾಗಲಿದೆ.

ರಸ್ತೆ ಗುಂಡಿ ಹಾಗೂ ಅಸಮರ್ಪಕ ರಸ್ತೆ ನಿರ್ವಹಣೆ ಬಗ್ಗೆ ರಾಜ್ಯ ಹೈಕೋರ್ಟ್‌ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ನಿರಂತರ ಚಾಟಿ ಬೀಸುತ್ತಲೆ ಬಂದಿದೆ. ಇದೀಗ ಇದೀಗ ಹೈಕೋರ್ಟ್‌ನ ನಿರ್ದೇಶನದಂತೆ ರಸ್ತೆ ಹಾಗೂ ಫುಟ್‌ಪಾತ್‌ಗಳ ಅಸಮರ್ಪಕ ನಿರ್ವಹಣೆಯಿಂದ ಉಂಟಾಗುವ ಅಪಘಾತಗಳಲ್ಲಿ ಪರಿಹಾರ ನೀಡುವ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ. ರಸ್ತೆಗುಂಡಿ ಹಾಗೂ ಅಸಮರ್ಪಕ ನಿರ್ವಹಣೆಯಿಂದ ಅಪಘಾತಕ್ಕೆ ಒಳಗಾಗುವ ಸಾರ್ವಜನಿಕರಿಗೆ ಪರಿಹಾರ ನೀಡುವ ಕುರಿತಂತೆ ಸಲ್ಲಿಕೆಯಾಗುವ ಅರ್ಜಿಗಳ ಇತ್ಯರ್ಥಕ್ಕೆ ನಿವೃತ್ತ ನ್ಯಾಯಾಧೀಶರೋರ್ವರನ್ನು ( ಕ್ಲೈಮ್‌) ಕಮಿಷನರ್‌ ಆಗಿ ನೇಮಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಪರಿಹಾರಕ್ಕೆ ಅರ್ಜಿ ನಮೂನೆ ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದ್ದು ಅರ್ಜಿ ನಮೂನೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಬಿಬಿಎಂಪಿ ಹೇಳಿದೆ.

ರಸ್ತೆ ಗುಂಡಿ ಹಾಗೂ ಅಸಮರ್ಪಕ ನಿರ್ವಹಣೆಯಿಂದ ಅಪಘಾತಗಳು ಸಂಭವಿಸಿದಾಗ ಇದರ ಹೊಣೆಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಹಲವಾರು ವರ್ಷಗಳಿಂದ ನಗರಾಡಳಿತ ಸಂಸ್ಥೆಗಳು ಮಾಡುತ್ತಲೇ ಬರುತ್ತಿವೆ.

ಬಿಬಿಎಂಪಿ ಕೂಡ ಇದನ್ನೇ ಮಾಡಿತ್ತು. ರಸ್ತೆಗುಂಡಿಗಳಿಂದ ಸಂಭವಿಸುವ ಅಪಘಾತಗಳಲ್ಲಿ ಗಾಯಗೊಂಡವರಿಗೆ ಪರಿಹಾರ ನೀಡಲು ಆರಂಭಿಸಿದರೆ ಬೇರೆ ಸಮಸ್ಯೆಗಳು ಉದ್ಬವಿಸಬಹುದು ಎಂಬ ಬಗ್ಗೆ ಬಿಬಿಎಂಪಿ ಆಯುಕ್ತರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ನಿರ್ದೇಶನವನ್ನು ಪ್ರಶ್ನಿಸಿ ಮೇಲ್ಮನವಿ ಕೌನ್ಸೆಲ್‌ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದೇಶ ಪಾಲಿಸದೆ ಇದರಿಂದ ತಪ್ಪಿಸಿಕೊಳ್ಳುವ ಪ್ರಯತ್ನಗಳ ವಿರುದ್ಧ ಆಯುಕ್ತರನ್ನು ನ್ಯಾಯಾಲಯ ತೀವ್ರ ತರಾಟೆ ತೆಗೆದುಕೊಂಡಿತ್ತು ಮತ್ತು ನ್ಯಾಯಾಂಗ ನಿಂದನೆಯ ಕ್ರಮ ಯಾಕೆ ಜರಗಿಸಬಾರದು ಎಂದು ಪ್ರಶ್ನಿಸಿತ್ತು.ಇದರಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಇದೀಗ ಪರಿಹಾರ ಕೋರಿ ಬರುವ ಅರ್ಜಿಗಳ ವಿಲೇವಾರಿ ವ್ಯವಸ್ಥೆಗೆ ಮುಂದಾಗಿದೆ.

ಬಿಬಿಎಂಪಿ ಇದೀಗ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಕ್ರಿಯೆಗಳನ್ನು ಆರಂಭಿಸಿರುವುದು ಸಾರ್ವಜನಿಕ ಸುರಕ್ಷತೆಯ ನಿಟ್ಟಿನಲ್ಲಿ ಒಂದು ಮಹತ್ವದ ಪೂರಕ ಕ್ರಮವಾಗಲಿದೆ ಹಾಗೂ ಇತರ ನಗರಾಡಳಿತ ಸಂಸ್ಥೆಗಳ ಮೇಲೂ ಅನ್ವಯವಾಗುವ ಸಾಧ್ಯತೆಗಳಿವೆ. ಅಪಘಾತಗಳು ಸಂಭವಿಸಿದ ಸಂದರ್ಭಗಳಲ್ಲಿ ಸಂತ್ರಸ್ತರು ನಗರಾಡಳಿತ ಸಂಸ್ಥೆಗಳಿಂದ ಪರಿಹಾರ ಕೋರಲು ಇದು ಮಾರ್ಗದರ್ಶಿಯಾಗಲಿದೆ.

ಇನ್ನೊಂದೆಡೆ ನಗರಾಡಳಿತ ಸಂಸ್ಥೆಗಳ ಪಾಲಿಗೆ ಇದು ಎಚ್ಚರಿಕೆಯೂ ಆಗಿದೆ. ರಸ್ತೆಗುಂಡಿಗಳ ದುರಸ್ತಿಗೊಳಿಸಲು ಹಾಗೂ ರಸ್ತೆಗಳನ್ನು ಸುವ್ಯವಸ್ಥೆ ಸ್ಥಿತಿಯಲ್ಲಿಡುವ ಕಾರ್ಯಕ್ಕೆ ತುರ್ತುನೆಲೆಯಲ್ಲಿ ಮುಂದಾಗುವುದು ಅನಿವಾರ್ಯವಾಗಲಿದೆ. ರಸ್ತೆ ಅವ್ಯವಸೆœಯಿಂದ ಅಪಘಾತಗಳು ಸಂಭವಿಸಿದ ಸಂದರ್ಭಗಳಲ್ಲಿ ಲಕ್ಷಾಂತರ ರೂ. ಪರಿಹಾರ ನೀಡಬೇಕಾಗುತ್ತದೆ. ಬರೇ ಪರಿಹಾರದ ಪ್ರಶ್ನೆ ಮಾತ್ರವಲ್ಲ. ಸಂಬಂಧಪಟ್ಟ ನಗರಾಡಳಿತ ಸಂಸ್ಥೆಗಳಿಗೆ ಇದೊಂದು ಕಪ್ಪುಚುಕ್ಕೆ ಕೂಡ ಆಗಲಿದೆ.

ದಿಕ್ಸೂಚಿಯಾಗುವ ಉಪಕ್ರಮ
ಬೆಂಗಳೂರಿನಲ್ಲಿ ಬಿಬಿಎಂಪಿ ಕೈಗೊಂಡಿರುವ ಉಪಕ್ರಮ ರಾಜ್ಯದಲ್ಲಿ ಮಂಗಳೂರು ಸೇರಿದಂತೆ ನಗರಗಳಲ್ಲಿ ರಸ್ತೆಗುಂಡಿ ಹಾಗೂ ಅಸಮರ್ಪಕ ರಸ್ತೆ ನಿರ್ವಹಣೆ ಸಮಸ್ಯೆಗೆ ಒಂದು ನಿರ್ದಿಷ್ಟವಾದ ಪರಿಹಾರವನ್ನು ರೂಪಿಸುವಲ್ಲಿ ದಿಕ್ಸೂಚಿಯಾಗಲಿದೆ. ರಸ್ತೆ ಅವ್ಯವಸ್ಥೆ ಬಗ್ಗೆ ನಗರಾಡಳಿತ ಸಂಸ್ಥೆಗಳು ಬಹುತೇಕ ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಾ ಬರುತ್ತಿವೆ. ಮಾರಣಾಂತಿಕ ಅಪಘಾತಗಳು ಸಂಭವಿಸಿದರೂ, ಸಾರ್ವಜನಿಕರು ಇದರ ಬಗ್ಗೆ ಸಂಬಂಧಪಟ್ಟ ನಗರಾಡಳಿತದ ಗಮನ ಸೆಳೆದರೂ ಅನೇಕ ಬಾರಿ ಇದು ಅರಣ್ಯರೋಧನವಾದ ಪ್ರಕರಣಗಳು ಬಹಳಷ್ಟಿವೆ. ರಸ್ತೆಗುಂಡಿ ಅಥವಾ ಅಸಮರ್ಪಕ ರಸ್ತೆ ನಿರ್ವಹಣೆಯಿಂದ ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಕೆಲವು ಬಾರಿ ಜಿಲ್ಲಾಡಳಿತ, ಪೊಲೀಸ್‌ ಅಧಿಕಾರಿಗಳು ಸಂಬಂಧಪಟ್ಟ ನಗರಾಡಳಿತ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್‌ ದಾವೆ ದಾಖಲಿಸಿಕೊಳ್ಳುವ ಎಚ್ಚರಿಕೆ ನೀಡಿದ್ದೂ ಇದೆ. ಮಂಗಳೂರು ನಗರವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಫುಟ್‌ಪಾತ್‌ಗಳು, ರಸ್ತೆಗಳಲ್ಲಿ ಗುಂಡಿಗಳು ಅಪಾಯಕಾರಿಯಾಗಿ ಬಾಯ್ದೆರೆದು ನಿಂತಿರುವ ನಿದರ್ಶನಗಳಿವೆ. ರಸ್ತೆಗಳನ್ನು ವಿವಿಧ ಕಾಮಗಾರಿಗಳಿಗೆ ಅಗೆದು ತಿಂಗಳುಗಟ್ಟಲೇ ಹಾಗೆಯೇ ಬಿಟ್ಟು ಹೋಗುವ ಪ್ರಮೇಯಗಳು ಕೂಡ ಇವೆ. ಇಂತಹ ಸನ್ನಿವೇಶಗಳಲ್ಲಿ ಪಾದಚಾರಿಗಳು, ದ್ವಿಚಕ್ರವಾಹನಗಳು ಅಪಘಾತಕ್ಕೀಡಾದರೆ ಸವಾರರು ಸಂಕಷ್ಟ ಅನುಭವಿಸಬೇಕಾಗುತ್ತದೆ.

-ಕೇಶವ ಕುಂದರ್‌

ಟಾಪ್ ನ್ಯೂಸ್

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.