ಉಪಯೋಗವಿಲ್ಲದ ಕೊಳವೆ ಬಾವಿಗಳಿಗೆ ಜಲಮರುಪೂರಣ ಏಕೆ ಮಾಡಬಾರದು?
Team Udayavani, Apr 27, 2017, 11:56 PM IST
ಬಜಪೆ: ದ.ಕ.ಜಿಲ್ಲೆಯಲ್ಲಿರುವ ತೆರೆದ ಕೊಳವೆ ಬಾವಿಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ಆದರೆ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 100ಕ್ಕಿಂತಲೂ ಹೆಚ್ಚು ಕೊಳವೆ ಬಾವಿಗಳು ಈಗಾಗಲೇ ತೆಗೆಯಲಾಗಿದ್ದು, ಈ ಪೈಕಿ ಹಲವು ಬಾವಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಹಾಗಾದರೆ ಇವುಗಳನ್ನು ಮುಚ್ಚುವ ಬದಲು ಇಂಗು ಗುಂಡಿಯ ಮೂಲಕ ಜಲ ಮರುಪೂರಣ ಮಾಡಿ ಮುಂದಿನ ದಿನಗಳಲ್ಲಿ ಬಳಸಬಾರದೇ ಎಂಬ ಪ್ರಶ್ನೆ ಮೂಡಿದೆ.
ಹೆಚ್ಚಿನವು 6.5ಇಂಚಿನವು
ಜಿಲ್ಲೆಯಲ್ಲಿ ಕೊರೆಯಲಾದ ಕೊಳವೆ ಬಾವಿಗಳು ಈ ಹಿಂದೆ 4 ಇಂಚು, ತದನಂತರ 6 ಇಂಚು ಆಗಿದ್ದು, ಈಗ ಸುಮಾರು 15 ವರ್ಷದಿಂದ 6.5 ಇಂಚು ವ್ಯಾಸ ಹೊಂದಿರುತ್ತವೆ. ಇದರಿಂದ ಇದರೊಳಗೆ ಮಗು ಬೀಳುವ ಸಾಧ್ಯತೆ ಕಡಿಮೆ. ಈ ಮಾದರಿಯನ್ನು ಹೆಚ್ಚಿನ ರಾಜ್ಯದಲ್ಲಿ ಉಪಯೋಗಿಸಿದರೆ ಒಳ್ಳೆಯದು. ಇಂಥ ನೀರು ಸಿಗದ ಕೊಳವೆ ಬಾವಿಗಳನ್ನು ಮುಚ್ಚಲಾಗುತ್ತಿದೆ. ಹಲವು ಕಡೆ ಕೃಷಿಕರು ತಮ್ಮ ಬತ್ತಿದ ಕೊಳವೆ ಬಾವಿಗಳಿಗೆ ಜಲ ಮರುಪೂರಣ ಮಾಡಿ ಗೆದ್ದ ಪ್ರಸಂಗಗಳಿವೆ. ಮಂಗಳೂರು ತಾಲೂಕು ಅಲ್ಲದೇ ಜಿಲ್ಲೆಯ ಹಲವೆಡೆ ಹಲವು ಕೃಷಿಕರು ಈ ಪ್ರಯೋಗದಲ್ಲಿ ನಿರತರಾಗಿದ್ದಾರೆ. ಎರಡು ವರ್ಷ ನೀರಿಲ್ಲದೇ ಸೋತವರೂ ಕೊನೆಗೆ ಈ ಉಪಾಯಕ್ಕೆ ಮೊರೆ ಹೋದವರೂ ಇದ್ದಾರೆ.
ಜಿ.ಪಂ. ಏಕೆ ಮಾಡಬಾರದು?
ಈ ಪ್ರಸಂಗಗಳನ್ನೇ ಉದಾಹರಣೆಯಾಗಿಟ್ಟುಕೊಂಡು ಜಿ.ಪಂ. ಮತ್ತು ತಾ.ಪಂ. ಸ್ಥಳೀಯ ಕೆಟ್ಟು ಹೋದ ಬೋರ್‌ವೆಲ್‌ಗಳಿಗೆ ಜಲ ಮರುಪೂರಣ ಮಾಡಿದರೆ ಪರ್ಯಾಯ ಜಲಮೂಲಗಳಿಗೆ ವೆಚ್ಚ ಮಾಡುವ ಸಮಸ್ಯೆ ಬಗೆಹರಿಯಲಿದೆ. ಇದರೊಂದಿಗೆ ಸ್ಥಳೀಯವಾಗಿ ಜಲಸಂಪನ್ಮೂಲವನ್ನು ಹೊಂದಿಸುವಲ್ಲಿ ಯಶಸ್ವಿಯಾದಂತಾಗುತ್ತದೆ. ಇದರಿಂದ ಅಪಾಯವೂ ತಪ್ಪಲಿದೆ ಹಾಗೂ ಸಮರ್ಪಕ ನಿರ್ವಹಣೆಯೂ ಸಾಧ್ಯವಾಗಲಿದೆ. ಯಾಕೆಂದರೆ ಅಂತರ್ಜಲ ಕುಸಿತವೇ ಈ ಕೊಳವೆಬಾವಿಗಳು ಬತ್ತಲು ಕಾರಣ. ಹಾಗಾಗಿ ಸಮೀಪದಲ್ಲಿರುವ ಮನೆಯ ಛಾವಣಿಗೆ ಪೈಪ್ ಹಾಕಿ ಸೋಸುವ ಮೂಲಕ ನೇರ ಕೊಳವೆ ಬಾವಿಗೆ ಬಿಟ್ಟರೆ ಅಂತರ್ಜಲವೃದ್ಧಿಗೆ ಕಾರಣವಾಗಲಿದೆ. ಗ್ರಾಮ ಪಂಚಾಯತ್ ಹಾಗೂ ಖಾಸಗಿ ಕೊಳವೆ ಬಾವಿ ಕೊರೆದವರೂ ಇದರತ್ತ ಆಲೋಚಿಸುವುದು ಸೂಕ್ತ ಎನ್ನುತ್ತಾರೆ ಪರಿಣಿತರು.
43%
ಕೀನ್ಯಾದಲ್ಲಿರುವ 44 ಮಿಲಿಧಿಯನ್ ಜನರಲ್ಲಿ ಸುಮಾರು 18 ಮಿಲಿಯನ್ ಅಂದರೆ ಶೇ. 43ರಷ್ಟು ಮಂದಿಗೆ ಪರಿಶುದ್ಧವಾದ ಕುಡಿಯುವ ನೀರು ಸಿಗುತ್ತಿಲ್ಲ.
2,110
ನಾವು ಹೆಚ್ಚಾಗಿ ಬಳಸುವ ಲೆದರ್ ಶೂ ನ ಒಂದು ಜತೆ ತಯಾರಿಸಬೇಕಾದರೆ 2,110 ಗ್ಯಾಲನ್ ನೀರು ಬೇಕಾಗುತ್ತದೆ.
ಹೀಗೂ ಉಳಿಸಿ
ಮಕ್ಕಳು ನೀರಿನಲ್ಲಿ ಆಡುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಇದಕ್ಕೆ ಬೇಕಾದ ರೀತಿಯ ಆಟಿಕೆಗಳು ಮಾರುಕಟ್ಟೆಯಲ್ಲಿವೆ. ಮಕ್ಕಳು ಆಟವಾಡುವಾಗ ಹೆಚ್ಚಿನ ನೀರು ಪೋಲು ಮಾಡುತ್ತಾರೆ. ಹೀಗಾಗಿ ಮಕ್ಕಳಿಗೆ ನೀರು ತುಂಬಿಸಿ ಆಡಬಹುದಾದ ಆಟಿಕೆಗಳನ್ನು ತಂದುಕೊಡಬೇಡಿ. ಇದರಿಂದ ಸಾಕಷ್ಟು ನೀರನ್ನು ಉಳಿಸಬಹುದು.
ನೀರಿನ ಗಣಿತ
ನಾವು ಜೀನ್ಸ್ ಪ್ಯಾಂಟ್ ಶರ್ಟ್ ಹಾಕಿಕೊಂಡು ಸಂಭ್ರಮಿಸುವುದು ಇದ್ದೇ ಇದೆ. ಆದರೆ, ಅವುಗಳು ಕಬಳಿಸುವ ನೀರಿನ ಪ್ರಮಾಣ ಎಷ್ಟು ಗೊತ್ತೇ? ಒಂದು ಅಂದಾಜಿನ ಪ್ರಕಾರ ಒಂದು ಜೊತೆ ಜೀನ್ಸ್ ತಯಾರಿಸಲು ಸುಮಾರು ಹತ್ತು ಸಾವಿರ ಲೀಟರ್ ನೀರು ಬೇಕು.
ಅರ್ಥ ಹನಿ
ಪ್ರತಿ ಬಾರಿ ಸೋತಾಗಲೂ ನೆರವಿಗೆ ಬರುವುದು ನೀರೇ. ಹಾಗಾಗಿ ನೀರನ್ನು ಸಂರಕ್ಷಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.