Surathkal: ಹುಷಾರು, ಅಂಗಡಿ ಮುಚ್ಚಿದರೂ ಶುಲ್ಕ ಕಟ್ಟಬೇಕು!
ಅಂಗಡಿ ಮುಚ್ಚಿದ ಮಾಹಿತಿಯನ್ನು ಪಾಲಿಕೆಗೆ ತಿಳಿಸದಿದ್ದರೆ ಸ್ವಯಂಚಾಲಿತವಾಗಿ ಬಿಲ್ ಲೈಸನ್ಸ್ ಬರುತ್ತದೆ
Team Udayavani, Jan 16, 2025, 3:09 PM IST
ಸುರತ್ಕಲ್: ಯಾವುದೇ ವ್ಯಾಪಾರ ವಹಿವಾಟು ಇಲ್ಲದೆ ಬಾಡಿಗೆ ಕೊಠಡಿಗಳು ಬೀಗ ಜಡಿದಿದ್ದರೂ ಮಂಗಳೂರು ಮಹಾನಗರ ಪಾಲಿಕೆ ಮಾತ್ರ ನಿರಂತರವಾಗಿ ಲೈಸೆನ್ಸ್ ರಿನೀವಲ್ ನಡೆಸಿ ಶುಲ್ಕ ಕಟ್ಟಲು ನೋಟಿಸ್ ಕಳಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಯಾವುದೇ ವ್ಯಾಪಾರ ಮಾಡುವವರು ಮಂಗಳೂರು ಮಹಾನಗರ ಪಾಲಿಕೆ ಯಿಂದ ಲೈಸನ್ಸ್ ಪಡೆಯುವುದು ಕಡ್ಡಾಯ. ಹಿಂದೆ ಲೈಸನ್ಸ್ ನವೀಕರಣ ಮಾಡದೆ ಇದ್ದರೆ ಆತನ ಲೈಸನ್ಸ್ ರದ್ದಾಗುತ್ತಿತ್ತು. ಹೀಗಾಗಿ ಯಾರಾದರೂ ಮಧ್ಯೆ ಅಂಗಡಿ ಮುಚ್ಚಿದರೆ ಸಮಸ್ಯೆ ಆಗುತ್ತಿರಲಿಲ್ಲ.
ಆದರೆ ಲೈಸೆನ್ಸ್ ವಿತರಣೆ ಕಂಪ್ಯೂಟರೀಕರಣವಾದ ಬಳಿಕ ವರ್ಷ ವರ್ಷವೂ ಅದರು ಸ್ವಯಂಚಾಲಿತವಾಗಿಯೇ ನವೀಕರಣ ಆಗುತ್ತದೆ. ಅಂದರೆ ಯಾರಾದರೂ ಅಂಗಡಿ ಮುಚ್ಚಿದರೂ ಲೈಸೆನ್ಸ್ ನವೀಕರಣವಾಗುತ್ತಲೇ ಇರುತ್ತದೆ. ಇದನ್ನು ತಡೆಯಬೇಕು ಎಂದರೆ ಅಂಗಡಿ ಮತ್ತು ಕಟ್ಟಡದ ಮಾಲಕರು ತಾವು ಅಂಗಡಿ ಮುಚ್ಚಿದ್ದೇವೆ ಎಂದು ಮಹಾನಗರ ಪಾಲಿಕೆಗೆ ತಿಳಿಸಬೇಕು.
ಹೀಗೆ ಮಾಡದೆ ಇದ್ದರೆ ವರ್ಷ ವರ್ಷವೂ ಲೈಸೆನ್ಸ್ ನವೀಕರಣಗೊಂಡು ಹಣ ಕಟ್ಟಬೇಕು ಎಂದು ಮುಂದೆ ನೋಟಿಸ್ ಬರುವಂತಾಗುತ್ತದೆ. ಆದರೆ ಇದು ತಿಳಿಯದ ಹಲವು ಅಂಗಡಿ ಮಾಲಕರು ಇದೀಗ ಶುಲ್ಕು ಕಟ್ಟುವ ಪೇಚಿಗೆ ಸಿಲುಕಿದ್ದಾರೆ.
ಬಾಡಿಗೆ ಕರಾರು ಮುಗಿದಿದ್ದರೆ ಪಾಲಿಕೆಗೆ ಮಾಹಿತಿ ನೀಡಿ
ಹೊಸ ಪದ್ಧತಿಯಲ್ಲಿ ಸ್ವತಃ ಅಂಗಡಿ, ಕಟ್ಟಡ ಮಾಲಕರು ಮಾಹಿತಿ ನೀಡಬೇಕಿದೆ. ಸುರತ್ಕಲ್‌ನ ಕಟ್ಟಡ ಮಾಲಕರೊಬ್ಬರ ಒಡೆತನದ ಕಟ್ಟಡದಲ್ಲಿ ಬಾಡಿಗೆಗಿದ್ದ ಕೋಳಿ ಅಂಗಡಿ ವರ್ಷದಿಂದ ಬಾಗಿಲು ಮುಚ್ಚಿದ್ದು, ಹೊಸ ಕರಾರು ಪತ್ರ ಮಾಡಲು ಹೋದ ಸಂದರ್ಭ 42 ಸಾವಿರ ರೂ. ಶುಲ್ಕ ಬಾಕಿ ಕಂಡು ಅಚ್ಚರಿಗೊಂಡಿದ್ದಾರೆ.
ಈ ಹಿಂದೆ ಪಾಲಿಕೆಯು ವರ್ಷದ ಕರಾರು ಮುಗಿದ ಬಳಿಕ ಹೊಸ ಕರಾರು ಪತ್ರ ತೋರಿಸಿದಲ್ಲಿ ಮಾತ್ರ ಲೈಸೆನ್ಸ್ ನೀಡುವ ಪದ್ಧತಿ ಅನುಸರಿಸುತ್ತಿತ್ತು. ಆದರೆ ಇದೀಗ ಆಟೋ ರಿನೀವಲ್ ವ್ಯವಸ್ಥೆ ಮಾಡಿಕೊಂಡಿದ್ದು ಖುದ್ದು ಅಂಗಡಿ ಮಾಲಕರೇ ಪಾಲಿಕೆಗೆ ಕರಾರು ರದ್ದಾದ ಮಾಹಿತಿ ನೀಡಿದಲ್ಲಿ ಮಾತ್ರ ಶುಲ್ಕ ಕಟ್ಟುವ ಅಗತ್ಯ ಬರುವುದಿಲ್ಲ. ಈ ನಿಟ್ಟಿನಲ್ಲಿ ಅಂಗಡಿ ಮಾಲಕರು ಎಚ್ಚೆತ್ತು ಬಾಡಿಗೆ ಕರಾರು ರದ್ದಾಗಿದ್ದಲ್ಲಿ ಪಾಲಿಕೆಗೆ ಮಾಹಿತಿ ನೀಡಿ, ಇಲ್ಲದಿದ್ದಲ್ಲಿ ಶುಲ್ಕ ಭರಿಸುವುದನ್ನು ತಪ್ಪಿಸಲಾಗದು!
ಮಾಹಿತಿ ಕೊಡಲೇಬೇಕು
ವ್ಯಾಪಾರಕ್ಕೆ ಲೈಸೆನ್ಸ್ ನೀಡುವ ವ್ಯವಸ್ಥೆ ಕಂಪ್ಯೂಟರೈಸ್ಡ್ ಮಾಡಲಾಗಿದೆ. ಪ್ರತೀ ವರ್ಷ ಕಾರರು ತೋರಿಸಿ ಲೈಸೆನ್ಸ್ ಪಡೆಯುವ ಈ ಹಿಂದಿನ ಪದ್ದತಿ ಈಗಿಲ್ಲ. ಒಮ್ಮೆ ಬಾಡಿಗೆ ವ್ಯಾಪಾರ ರಿಜಿಸ್ಟರ್ ಮಾಡಿದರೆ ಲೈಸೆನ್ಸ್ ಆಟೋ ಜನರೇಟ್ ಆಗುತ್ತದೆ. ಬಾಡಿಗೆ ಕರಾರು ಮುಗಿದಿದ್ದರೆ ಅಂಗಡಿ ಮಾಲಕರು ಪಾಲಿಕೆಗೆ ತೆರಳಿ ಮಾಹಿತಿ ನೀಡಬೇಕು.
-ಮನೋಜ್ ಕುಮಾರ್, ಪಾಲಿಕೆ, ಮೇಯರ್
-ಲಕ್ಷ್ಮೀನಾರಾಯಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಅಂತಾರಾಷ್ಟ್ರೀಯ ಮಟ್ಟ ತಲುಪಿದ ಮಂಗಳೂರಿನ ಗಾಳಿಪಟ!
Mangaluru: 500 ಮನೆಗಳಿಗೆ ತಲುಪಿದ ಸಿಎನ್‌ಜಿ ಅನಿಲ; ಶೀಘ್ರ ಇನ್ನಷ್ಟು ಕಡೆ ವಿಸ್ತರಣೆ
Bajpe: 7 ಅಣೆಕಟ್ಟೆಗೆ ಹಲಗೆ; ತುಂಬಿದ ನೀರು
The Shoolin Group: ಮಂಗಳೂರಿನ ಹೊಸ ಪ್ರೀಮಿಯಂ ಹೋಟೆಲ್ ಶೂಲಿನ್ ಕಂಫರ್ಟ್ಸ್ ಉದ್ಘಾಟನೆ
UPCL Kasaragod Power line: ಕಂಪೆನಿಯಿಂದ ತಪ್ಪು ಮಾಹಿತಿ: ಹೋರಾಟ ಸಮಿತಿ ಒಕ್ಕೂಟ
MUST WATCH
ಹೊಸ ಸೇರ್ಪಡೆ
ಶೂನ್ಯ ಇಂಗಾಲದ ಗುರಿ: ಜಾಗತಿಕ ಸಹಭಾಗಿತ್ವ ಅಗತ್ಯ
Bigg Boss ಫಿನಾಲೆ ಯಾವಾಗ?; ಗೆದ್ದವರಿಗೆ ಸಿಗುವ ಬಹುಮಾನ ಎಷ್ಟು? – ಇಲ್ಲಿದೆ ಮಾಹಿತಿ
ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ ಅರ್ಜುನ್ ಜನ್ಯಾ ನಿರ್ದೇಶನದ ʼ45ʼ ಸಿನಿಮಾ
Mumbai Unsafe; ಒಂದು ಘಟನೆಯಿಂದ ಹೀಗೆ ಹೇಳುವುದು ಸರಿಯಲ್ಲ: ಸಿಎಂ ಫಡ್ನವಿಸ್
RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂಗ್ಲೆಂಡ್ ಆಫ್ ಸ್ಪಿನ್ನರ್ ಎಂಟ್ರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.