ಹೋಳಿ ಆಚರಣೆ: ಬಣ್ಣಗಳಲ್ಲಿ ಮಿಂದೆದ್ದ ವಿದ್ಯಾರ್ಥಿ ಸಮೂಹ
Team Udayavani, Mar 22, 2019, 5:33 AM IST
ಸುರತ್ಕಲ್ : ಇಲ್ಲಿನ ಎನ್ ಐಟಿಕೆ ಕ್ಯಾಂಪಸ್ ನಲ್ಲಿ ಗುರುವಾರ ವಿದ್ಯಾ ರ್ಥಿಗಳು ಪರಸ್ಪರ ಬಣ್ಣ ಹಚ್ಚಿ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು. ವಿದ್ಯಾರ್ಥಿಗಳು ಡಿಜೆ ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ, ಪರಸ್ಪರ ಬಣ್ಣ ಹಂಚಿಕೊಂಡು ಶುಭಾಶಯ ಕೋರಿದರು. ಜಾತಿ-ಭೇದ ಮರೆತು ಸಂತಸ ಎಲ್ಲೆಡೆ ಹೊಮ್ಮಿಸುವ ಈ ಹಬ್ಬವನ್ನು ಇಲ್ಲಿನ ದೇಶ –
ವಿದೇಶದ ನೂರಾರು ಸಂಖ್ಯೆಯ ಯುವಕ ಯುವತಿಯರು ಒಟ್ಟಿಗೆ ಆಚರಿಸಿದರು.
ಕೆಡುಕಿನ ವಿರುದ್ಧ ಒಳಿತಿಗೆ ಜಯವಾದ ದಿನವನ್ನು ಹೋಳಿ ಹುಣ್ಣಿಮೆ ಎಂದು ಆಚರಿಸಲಾಗುತ್ತದೆ. ರಂಗಿನ ಹಬ್ಬವನ್ನು ಪ್ರೀತಿ ಪ್ರೇಮದ ದ್ಯೋತಕ ಎಂದು ಭಾವಿಸಲಾಗುತ್ತದೆ. ಶತಮಾನಗಳ ಹಿಂದಿನಿಂದಲೂ ಆಚರಣೆಯನ್ನು ಹೋಳಿ ಬರ ಬರುತ್ತಾ ಆಚರಣೆಯಲ್ಲಿ ಬದಲಾವಣೆ ಕಂಡಿತು. ಹಿಂದೂಗಳ ಆಚರಣೆಯಾಗಿ ಆರಂಭವಾದ ಹೋಳಿ ಇಂದು ಎಲ್ಲ ಜಾತಿಯವರು ಜಾಗತಿಕವಾಗಿ ಆಚರಿಸುತ್ತಾರೆ.
ಆಂಧ್ರಪ್ರದೇಶದ ವಿದ್ಯಾರ್ಥಿ ರಮೇಶ್ ಮಾತನಾಡಿ, ಈ ಬಾರಿ ನನ್ನ ವ್ಯಾಸಂಗ ಕೊನೆಗೊಳ್ಳುತ್ತಿದೆ. ಮೂರ್‍ನಾಲ್ಕು ವರ್ಷಗಳಿಂದ ಹೋಲಿ ಆಚರಣೆಯಲ್ಲಿ ಭಾಗವಹಿಸುತ್ತಾ ಸಂತಸ ಪಟ್ಟಿದ್ದೇನೆ ಎಂದರು. ರಶ್ಮಿ ಮಾತನಾಡಿ, ಹೋಳಿ ಆಚರಣೆ ಒಳಿತು ಕೆಡುಕುಗಳ ಸಂದೇಶ ನೀಡುತ್ತದೆ. ಒಟ್ಟಾಗಿ ಆಚರಿಸುವಾಗ ಸಂತಸ ಸಿಗುತ್ತದೆ ಎಂದರು.
ಮುಂಜಾಗ್ರತೆ ಅಗತ್ಯ
ತಂತ್ರಜ್ಞಾನ ಮುಂದುವರಿದಿರದ ಆ ಕಾಲದಲ್ಲಿ ಹೋಳಿ ಬಣ್ಣ ತಯಾರಾಗುತ್ತಿದ್ದದ್ದು, ನೈಸರ್ಗಿಕ ಸಸ್ಯಗಳಿಂದ ಬಣ್ಣವನ್ನು ತಯಾರಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬಳಸುವ ವಿಷಯುಕ್ತ ಮಿಶ್ರಿತ ಬಣ್ಣಗಳು ನಿಸರ್ಗಕ್ಕೆ ಕೊಡಲಿ ಏಟು ನೀಡುವುದರ ಜತೆಯಲ್ಲಿ ಆರೋಗ್ಯವನ್ನು ಕೆಡಿಸುತ್ತಿದೆ. ಹಾಗಾಗಿ ಹೋಲಿ ಹಬ್ಬವನ್ನು ಮುಂಜಾಗ್ರತೆಯಿಂದ ಆಚರಿಸಬೇಕು ಎನ್ನುವುದೇ ಎಲ್ಲರ ಆಶಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.