![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jun 26, 2024, 10:47 AM IST
ಸುರತ್ಕಲ್: ಅರೆಬರೆ ಕಾಂಕ್ರಿಟ್ ಹಾಕಿದ ಸುರತ್ಕಲ್ ಹೆದ್ದಾರಿ ಜಂಕ್ಷನ್ ನಲ್ಲಿ ಮಳೆಗೆ ಮರಣ ಗುಂಡಿ ನಿರ್ಮಾಣವಾಗಿದ್ದು, ಜೂ.26ರ ಬುಧವಾರ ಸ್ಕೂಟರ್ ಸವಾರನೊಬ್ಬ ಆ ಗುಂಡಿಗೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ.
ತಕ್ಷಣ ಆಕ್ರೋಶಗೊಂಡ ಸವಾರ ಗುಂಡಿಯಲ್ಲಿ ವಾಹನ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ.
ಎಲ್ಲರೂ ಹೊಂಡ ನೋಡಿ ಹೋಗುವವರೇ ಹೆಚ್ಚು. ಆದರೆ ಈ ಗಾಯಾಳು ತಕ್ಷಣ ವಾಹನ ನಿಲ್ಲಿಸಿ ಪ್ರತಿಭಟಿಸಿದ್ದಲ್ಲದೇ ಇತರ ವಾಹನ ಸವಾರರನ್ನೂ ಎಚ್ಚರಿಸುವ ಕೆಲಸ ಮಾಡಿದ್ದಾರೆ.
ಸಮೀಪದಲ್ಲೇ ಇದ್ದ ಟ್ರಾಫಿಕ್ ಎಎಸ್ಐ ಮತ್ತು ಕಾನ್ಸ್ ಟೇಬಲ್ ಫೈನ್ ಹಾಕುವುದರಲ್ಲೇ ನಿರತರಾಗಿದ್ದರು. ಹೀಗೂ ಉಂಟೇ…ಜಂಕ್ಷನ್ ಕಾಮಗಾರಿ ಪೂರ್ಣವಾಗುವುದು ಎಂದು ? ಜನರ ಹೆಣ ಬೀಳುವ ತನಕ ಎಚ್ಚರಗೊಳ್ಳುದಿಲ್ಲವೆ? ಉತ್ತರಿಸಿ…. ನಮ್ಮ ಜನಪ್ರತಿನಿಧಿಗಳೇ… ಎಂಬುದು ಸಾರ್ವಜನಿಕರ ಪ್ರಶ್ನೆ.
You seem to have an Ad Blocker on.
To continue reading, please turn it off or whitelist Udayavani.