ಸುರತ್ಕಲ್ ಆರೋಗ್ಯ ಕೇಂದ್ರದ ವಠಾರ: ದುರ್ವಾಸನೆ
ತ್ಯಾಜ್ಯ ಸಂಗ್ರಹ ವಾಹನ ನಿಲುಗಡೆಯಿಂದ ಸಂಕಷ್ಟ
Team Udayavani, Sep 13, 2022, 3:18 PM IST
ಸುರತ್ಕಲ್: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾರ್ಯಕ್ಕೆ ಗುತ್ತಿಗೆ ಪಡೆದಿರುವ ಆ್ಯಂಟನಿ ವೇಸ್ಟ್ ಸಂಸ್ಥೆ ತ್ಯಾಜ್ಯ ತುಂಬಿದ ವಾಹನಗಳನ್ನು ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾದಲ್ಲಿ ನಿಲ್ಲಿಸುವ ಮೂಲಕ ಪರಿಸರಕ್ಕೆ ಧಕ್ಕೆ ತರುತ್ತಿದೆ. ಮಾತ್ರವಲ್ಲ ಸ್ವತಃ ಸಂಸ್ಥೆಯೇ ಜಾಗವನ್ನು ಗುರುತಿಸದೆ, ಸಾರ್ವಜನಿಕ ಪ್ರದೇಶದಲ್ಲಿ ವಾಹನ ನಿಲ್ಲಿಸುವುದರಿಂದ ಆರೋಗ್ಯ ಕೇಂದ್ರಕ್ಕೆ ಬರುವವರು ಸಂಕಷ್ಟ ಎದುರಿಸುವಂತಾಗಿದೆ.
ಸುರತ್ಕಲ್ ಸಹಿತ ಸುತ್ತಮುತ್ತ ಮನೆ ಮನೆ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವ ವಾಹನಗಳನ್ನು ಟ್ರಿಪ್‌ಗಳನ್ನು ಮುಗಿಸಿದ ಬಳಿಕ ಆರೋಗ್ಯ ಕೇಂದ್ರದ ಪರಿಸರದಲ್ಲಿ ನಿಲ್ಲಿಸಲಾಗುತ್ತಿದೆ.
ಈ ಹಿಂದೆ ಕೂಳೂರು ಬಳಿ ಸಾರ್ವಜನಿಕರ ಪ್ರತಿಭಟನೆಯ ಬಳಿಕ ತ್ಯಾಜ್ಯ ವಿಲೇವಾರಿ ವಾಹನಗಳ ನಿಲುಗಡೆಯನ್ನು ಏಕಾಏಕಿ ಸ್ಥಳಾಂತರಿಸಲಾಗಿತ್ತು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಮಕ್ಕಳ ಆರೈಕೆ ಕೇಂದ್ರ ಗರ್ಭಿಣಿಯರ ತಪಾಸಣೆ, ದಾದಿಯರ ವಸತಿ ಗೃಹ, ತರಬೇತಿ ಕೇಂದ್ರ ಮತ್ತಿತರ ನಿತ್ಯ ಕಾರ್ಯಚಟುವಟಿಕೆ ಹೊಂದಿರುವ ಕೇಂದ್ರಗಳಿವೆ. ಇತ್ತೀಚೆಗೆ ಡೆಂಟಲ್ ವಿಭಾಗವೂ ಆರಂಭವಾಗಿದ್ದು, ಇದರ ಸಮೀಪದಲ್ಲೇ 15ಕ್ಕೂ ಮಿಕ್ಕಿ ವಾಹನಗಳನ್ನು ತಂದು ನಿಲ್ಲಿಸಲಾಗುತ್ತದೆ.
ಕೆಲವು ಬಾರಿ ಕಸ ತುಂಬಿದ ಲಾರಿ, ಜೀಪ್‌ಗ್ಳು ನಿಂತು ತ್ಯಾಜ್ಯ ಮಿಶ್ರೀತ ನೀರನ್ನು ಸ್ಥಳದಲ್ಲಿ ಚೆಲ್ಲುತ್ತವೆ. ವಾಹನದಿಂದ ಉದುರಿದ ಪ್ಲಾಸ್ಟಿಕ್, ಕಪ್ ಮತ್ತಿತರ ಕಸ ಆರೋಗ್ಯ ಕೇಂದ್ರದ ಒಳ ಭಾಗದಲ್ಲಿ ಬಿದ್ದಿರುವುದು ಕಂಡು ಬರುತ್ತಿವೆ.
ಪಾಲಿಕೆ ಆಡಳಿತ ಮೌನ
ಗುತ್ತಿಗೆ ಪಡೆದ ಸಂಸ್ಥೆ ತನ್ನ ನೂರಾರು ವಾಹನದ ನಿಲುಗಡೆಗೆ ಬೇಕಾದ ಸ್ಥಳವನ್ನು ಹೊಂದಿರಬೇಕೆಂಬ ನಿಯಮವಿದ್ದರೂ ಖಾಲಿ ಸ್ಥಳಾವಕಾಶ ಇರುವಲ್ಲಿ ನಿಲ್ಲಿಸುತ್ತಾ ಬರಲಾಗುತ್ತಿದೆ. ಗುತ್ತಿಗೆ ನೀಡುವ ಸಂದರ್ಭ ಈ ಷರತ್ತು ವಿಧಿಸಲಾಗಿದ್ದರೂ ಪಾಲಿಕೆ ಆಡಳಿತ ಸ್ಥಳ ಇರುವ ಕಡೆ ನಿಲ್ಲಿ ಎಂಬಂತೆ ಪರೋಕ್ಷವಾಗಿ ಕ್ರಮ ಜರಗಿಸದೆ ಮೌನ ವಹಿಸಿದೆ.
ಸುರತ್ಕಲ್ ಆರೋಗ್ಯ ಕೇಂದ್ರದ ಮುಂಭಾಗ ವಾಹನ ನಿಲ್ಲಿಸದಂತೆ ಈ ಹಿಂದೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. “ಉದಯವಾಣಿ ಸುದಿನ’ ಕೆಲವು ದಿನಗಳ ಹಿಂದೊಮ್ಮೆ ಆರೋಗ್ಯ ಕೇಂದ್ರದ ವಠಾರದಲ್ಲಿ ತ್ಯಾಜ್ಯ ಸಂಗ್ರಹ ವಾಹನಗಳ ನಿಲುಗಡೆ ಬಗ್ಗೆ ವರದಿ ಪ್ರಕಟಿಸಿತ್ತು. ಬಳಿಕ ಕೆಲವು ಸಮಯ ಅವುಗಳನ್ನು ಅಲ್ಲಿಂದ ತೆರವು ಮಾಡಲಾಗಿತ್ತು. ಇದೀಗ ಮತ್ತೆ ಅಲ್ಲಿ ನಿಲ್ಲಿಸಲಾಗುತ್ತಿದೆ. ಆದರೆ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.