ಸುರತ್ಕಲ್: ಬೆಚ್ಚಿ ಬೀಳಿಸುತ್ತಿದೆ ಬೀದಿ ನಾಯಿಗಳ ಹಾವಳಿ
Team Udayavani, Jul 9, 2024, 10:09 AM IST
ಸುರತ್ಕಲ್: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮುಖ್ಯರಸ್ತೆ ಹಾಗೂ ಇತರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ದಿನ ದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದು ಕಡೆ ಅವುಗಳ ಸಂಖ್ಯೆ ಹೆಚ್ಚುತ್ತಿದ್ದರೆ ಮತ್ತೊಂದು ಕಡೆ ಅವುಗಳ ಆಕ್ರಮಣಕಾರಿ ಸ್ವಭಾವ ಭಯ ಹುಟ್ಟಿಸುತ್ತಿದೆ.
ಪ್ರತಿಯೊಂದು ರಸ್ತೆಯಲ್ಲೂ ಹತ್ತಾರು ಬೀದಿ ನಾಯಿಗಳು ಕಂಡು ಬರುತ್ತಿವೆ. ಜತೆಗೆ ಹೆಚ್ಚಿನ ವರು ಸಾಕು ನಾಯಿಗಳನ್ನೂ ಬೀದಿಯಲ್ಲೇ ಬಿಡುತ್ತಾರೆ. ಹೀಗಾಗಿ ಮನುಷ್ಯರು ರಸ್ತೆಯಲ್ಲಿ ನಡೆಯಲಾಗದ ಸ್ಥಿತಿ ನಿರ್ಮಾಣಗೊಂಡಿದೆ. ಇದ ರಿಂದ ಶಾಲೆಗೆ ಹೋಗುವ ಮಕ್ಕಳನ್ನು ಓಡಿಸು ವುದು, ಸ್ಕೂಟರ್ ಸವಾರರ ಮೇಲೆ ದಾಳಿ, ಬೆನ್ನ ಟ್ಟುವ ಘಟನೆಗಳು ಹೆಚ್ಚುತ್ತಿವೆ.
ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದರೆ ಮನೆ ಯವರು ಮಕ್ಕಳನ್ನು ಪಕ್ಕದಲ್ಲಿರುವ ಅಂಗಡಿಗೆ ಕಳುಹಿಸಬೇಕಾದರೂ ಹತ್ತಾರು ಬಾರಿ ಯೋಚಿ ಸಬೇಕಾಗಿದೆ. ಅವರನ್ನು ಶಾಲೆಗೆ ಒಬ್ಬೊಬ್ಬರಾಗಿ ಕಳುಹಿಸುವುದಕ್ಕೂ ಸಾಧ್ಯವಾಗದೆ ಸಂಕಷ್ಟದ ಲ್ಲಿದ್ದಾರೆ. ಹಲವು ಕಡೆಗಳಲ್ಲಿ ಹೆತ್ತವರು ಜತೆಗೆ ಹೋಗಿಯೇ ಶಾಲೆಗೆ ಮಕ್ಕ ಳನ್ನು ಬಿಟ್ಟು ಬರುತ್ತಿದ್ದಾರೆ. ಬೆಳ್ಳಂಬೆಳಗ್ಗೆ ವಾಕಿಂಗ್ ಹೋಗುವ ಹಿರಿಯರು ಕೈಯ್ಯಲ್ಲಿ ಕಡ್ಡಾಯವಾಗಿ ಕೋಲು ಹಿಡಿದುಹೋಗುವ ಅಭ್ಯಾಸ ರೂಢಿಯಾಗಿದೆ ಎನ್ನುತ್ತಾರೆ ಮಾಜಿ ಮನಪಾ ಸದಸ್ಯರಾದ ಪಣಿಕ್ಕರ್ ಅವರು.
ಹೆಚ್ಚಿನ ಅಪಘಾತಕ್ಕೆ ನಾಯಿ ಕಾರಣ!
ಬೈಕಂಪಾಡಿ ರಾ. ಹೆದ್ದಾರಿಯಲ್ಲಿ, ಸಮುದ್ರ ತೀರ ಹೀಗೆ ವಿವಿಧೆಡೆ ಬೀದಿ ಶ್ವಾನಗಳ ಹಿಂಡೇ ಕಾಣ ಸಿಗುತ್ತದೆ. ಅಡ್ಡ ಬರುವ ಬೀದಿ ಶ್ವಾನಗಳಿಂದಾಗಿ ದ್ವಿಚಕ್ರ ಸವಾರರು ಅಪಘಾತದಲ್ಲಿ ಸಿಲುಕಿ ಒದ್ದಾಟ ಅನುಭವಿಸುತ್ತಿದ್ದು, ಅಂಗವೈಕಲ್ಯಕ್ಕೂ ತುತ್ತಾಗುತ್ತಿದ್ದಾರೆ. ವಿವಿಧ ಠಾಣೆಯಲ್ಲಿ ಪ್ರಕರಣ ಪರಿಶೀಲಿಸಿದರೆ ಶ್ವಾನದಿಂದಾಗಿಯೇ ಕಚ್ಚಿಸಿಕೊಂಡು ಚಿಕಿತ್ಸೆ ಪಡೆದವರ, ಸ್ಕೂಟರ್ ಪಲ್ಟಿಯಾಗಿ ಗಾಯಗೊಂಡ ಬಗ್ಗೆ ವರದಿಗಳು ಸಿಗುತ್ತಿವೆ.
ಕಾಟಿಪಳ್ಳದಲ್ಲಿ ಬೀದಿ ನಾಯಿಗಳ ದಾಳಿಗೆ ದನ ಬಲಿ
ಕಾಟಿಪಳ್ಳದ ತ್ಯಾಜ್ಯ ರಾಶಿಯೊಂದರ ಬಳಿ ನಿತ್ಯವೂ ಕಾಣ ಸಿಗುವ ಎಂಟತ್ತು ಬೀದಿ ನಾಯಿಗಳು ಕಟ್ಟಿ ಹಾಕಿದ್ದ ದನವನ್ನು ಕಚ್ಚಿ ಕೊಂದು ಹಾಕಿದ ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ತ್ಯಾಜ್ಯವನ್ನು ವಿಲೇವಾರಿ ಮಾಡಿದ ಬಳಿಕ ಶ್ವಾನಗಳಿಗೆ ಆಹಾರ ಸಿಗದೇ ಹೋದ ಸಂದರ್ಭ ದನದ ಮೇಲೆರಗಿ ಕೊಂದು ಹಾಕಿದ್ದಲ್ಲದೆ ಮಾಂಸ ಭಕ್ಷಣೆಗೆ ಯತ್ನಿಸಿರುವ ಆತಂಕದ ಘಟನೆ ಇದಾಗಿದೆ.
ಮಾಜಿ ಕಾರ್ಪೋರೇಟರ್ ಮೇಲೆಯೇ ದಾಳಿ
ಉರ್ವ ಮೈದಾನ ಪರಿಸರ ಸುತ್ತಮುತ್ತಲಿನ ಬಡಾವಣೆಯಲ್ಲಿ ಬೀದಿನಾಯಿ ಕಾಟ ವಿಪರೀತವಾಗಿದೆ. ಇತ್ತೀಚೆಗೆ ಮಾಜಿ ಮನಪಾ
ಸದಸ್ಯರೊಬ್ಬ ರು ಸ್ಕೂಟರ್‌ನಲ್ಲಿ ತೆರಳುವಾಗ ನಾಯಿ ದಾಳಿ ನಡೆಸಿದೆ. ಸ್ಕೂಟರ್ ನಿಂದ ಬಿದ್ದು ಗಾಯಗೊಂಡ ಅವರಿಗೆ ಚುಚ್ಚುಮದ್ದು ಸಹಿತ 1 ವಾರ ವಿಶ್ರಾಂತಿಗೆ ಸೂಚಿಸಲಾಗಿತ್ತು. ಇದೀಗ ಅವರು ಜಿಲ್ಲಾಧಿಕಾರಿಗೆ ಪ್ರಕರಣದ ಗಂಭೀರತೆ ಕುರಿತು ಪತ್ರ ಬರೆದು ಗಮನ ಸೆಳೆದಿದ್ದಾರೆ.
ತಡೆಯುವವರು ಯಾರೂ ಇಲ್ಲ
ಬೀದಿ ನಾಯಿಗಳಿಂದ ದಾಳಿಯಾದಾಗ ಯಾರೂ ಇರುವುದಿಲ್ಲ. ನಾಯಿಗಳಿಗೆ ಸಮಸ್ಯೆಯಾದಾಗ ಕೇಳಲು ಹಲವರು ಮುಂದೆ ಬರುತ್ತಾರೆ ಎನ್ನು ವುದು ನಾಗರಿಕರ ಆಕ್ರೋಶ. ಪ್ರತಿ ವರ್ಷ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಮತ್ತು ಶಸ್ತ್ರ ಚಿಕಿತ್ಸೆ ಮಾಡಲು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ, ಪಾಲನೆ ಎಷ್ಟಾಗುತ್ತಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಸಿಗುತ್ತಿಲ್ಲ.
ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿದರೆ ಮಾತ್ರ ಅವುಗಳ ಸಂಖ್ಯೆ ಹಾಗೂ ರೇಬಿಸ್ ರೋಗ ತಡೆಗಟ್ಟಲು ಸಾಧ್ಯ ಎನ್ನುತ್ತಾರೆ ನಾಗರಿಕರು.
ಬೀದಿ ಶ್ವಾನಗಳ ನಿಯಂತ್ರಣಕ್ಕೆ ಪಾಲಿಕೆ ಬದ್ಧ
ಬೀದಿ ಶ್ವಾನಗಳ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ಬದ್ಧವಾಗಿದೆ. ಸಂತಾನ ಶಕ್ತಿಹರಣ ಚಿಕಿತ್ಸೆಗೆ ಬೇಕಾದ ಕ್ರಮವನ್ನೂ ಕೈಗೊಳ್ಳುತ್ತಿದೆ. ಕಾನೂನಿನ ಅಡಿಯಲ್ಲಿ ಬೇಕಾದ ಉಪಕ್ರಮ ವನ್ನು ಚುರುಕುಗೊಳಿಸಲು ಇದಕ್ಕಾಗಿ 25 ಲಕ್ಷ ರೂ. ಅನುದಾನ ಒದಗಿಸಲಾಗುವುದು.
– ಸುಧೀರ್ ಶೆಟ್ಟಿ ಕಣ್ಣೂರು,
ಮೇಯರ್, ಮಹಾನಗರ ಪಾಲಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.