ಸುರತ್ಕಲ್ ಟೋಲ್ ನವೆಂಬರ್‌ನಲ್ಲಿ ತೆರವು : ಸಚಿವ ಸುನಿಲ್ ಕುಮಾರ್
ಕಾಂಗ್ರೆಸ್ ನಿಂದ 21 ದಿನ ಕರ್ನಾಟಕದಲ್ಲಿ ಭಾರತ್ ಜೋಡೊ ನಾಟಕ
Team Udayavani, Oct 22, 2022, 5:31 PM IST
ಉಡುಪಿ: ಸುರತ್ಕಲ್ ಟೋಲ್‌ಗೇಟ್ ಅನ್ನು ನವೆಂಬರ್ ಅಂತ್ಯದಲ್ಲಿ ತೆರವು ಮಾಡಲಾಗುವುದು. ತೆರವು ಮಾಡುವ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪತ್ರಿಕಾಭವನದ ಸಹಯೋಗದಲ್ಲಿ ಶನಿವಾರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ತಡವಾಗಿ ಅರಿವಿಗೆ ಬಂದಿದೆ. ಎಐಸಿಸಿಗೆ ಹೊಸ ಅಧ್ಯಕ್ಷರ ನೇಮಕ ಮಾಡಿದ್ದರೂ ಗಾಂಧಿ ಕುಟುಂಬದ ಕಪಿಮುಷ್ಠಿಯಲ್ಲೇ ಅಧಿಕಾರ ಇರಲಿದೆ. ಮಲ್ಲಿಕಾರ್ಜುನ ಖರ್ಗೆಯವರು ನೆಪಮಾತ್ರಕ್ಕೆ ಅಧ್ಯಕ್ಷರಾಗಿರಲಿದ್ದಾರೆ. ಅಧಿಕಾರವನ್ನು ಗಾಂಧಿ ಕುಟುಂಬವೇ ನಿರ್ವಹಿಸಲಿದೆ. ಭಾರತ್ ಜೋಡೋ ಹೆಸರಿನಲ್ಲಿ ಕರ್ನಾಟಕದಲ್ಲಿ 21 ನಾಟಕ ಆಡಿದ್ದಾರೆ. ಇದು ಮುಂದಿನ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಬಿಜೆಪಿ ಸದಾ ಹೊಸ ಪ್ರಯೋಗವನ್ನು ಮಾಡುತ್ತಲೇ ಇರುತ್ತದೆ. ಮುಂದಿನ ಚುನಾವಣೆಯಲ್ಲಿ ಹೊಸಬರಿಗೆ ಟಿಕೆಟ್ ನೀಡುವುದು ಪಕ್ಷ ನಿರ್ಧಾರವಾಗಿದೆ. ಮಿಷನ್ 150 ಸಾಧಿಸಲಿದ್ದೇವೆ. ಇದಕ್ಕೆ ಬೇಕಾದ ತಯಾರಿಗಳು ಪಕ್ಷದಲ್ಲಿ ನಡೆಯುತ್ತಿದೆ. ಪಕ್ಷದ ಜವಾಬ್ದಾರಿ ಹಂಚಿಕೆಯಲ್ಲಿ ಮಹಿಳೆಯರಿಗೂ ಶೇ.33ರಷ್ಟು ಮೀಸಲಾತಿ ನೀಡುತ್ತಿದ್ದೇವೆ ಎಂದು ಹೇಳಿದರು.
ಕನ್ನಡ ಕಡ್ಡಾಯ
ಕನ್ನಡ ಮಾಧ್ಯಮ ಕಡ್ಡಾಯ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಿದ್ದೇವೆ. ಈ ಬಗ್ಗೆ ಸಾರ್ವಜನಿಕರ ಚರ್ಚೆ ಆಗುತ್ತಿದೆ. ಸಾಹಿತಿಗಳು, ವಿವಿಧ ಕ್ಷೇತ್ರದ ಪ್ರಮುಖರು, ಸಾರ್ವಜನಿಕರಿಂದ ಬರುವ ಪ್ರತಿಕ್ರಿಯೆಗಳ ಆಧಾರದಲ್ಲಿ ಮಸೂದೆಗೆ ಸೂಕ್ತ ರೂಪ ನೀಡಲಿದ್ದೇವೆ. ಶಿಕ್ಷಣ, ಆಡಳಿತ, ಉದ್ಯಮ, ಕಾನೂನು ಹೀಗೆ ಎಲ್ಲ ವಲಯದಲ್ಲೂ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂಬ ಸದುದ್ದೇಶದಿಂದ ಈ ಮಸೂದೆ ತರಲಿದ್ದೇವೆ ಎಂದರು.
ದೈವಾರಾಧನೆ ನಮ್ಮ ಸಂಸ್ಕೃತಿಯ ಭಾಗ
ಕರಾವಳಿಗರು ನಂಬಿಕೆ, ಶ್ರದ್ಧೆ, ಸಂಸ್ಕೃತಿಯ ಮೇಲೆ ಬದುಕುತ್ತಿರುವವರು. ದೈವಾರಾಧನೆ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಸಂಸ್ಕೃತಿ, ನಂಬಿಕೆ, ಶ್ರದ್ಧೆ ಇಲ್ಲದವರು ಮಾತ್ರ ಇದರ ವಿರುದ್ಧ ಮಾತನಾಡಲು ಸಾಧ್ಯ. ಕಾಂತಾರ ಸಿನೆಮಾ ನಮ್ಮ ಸಂಸ್ಕೃತಿಯನ್ನು ಉತ್ತಮ ರೀತಿಯಲ್ಲಿ ಜನರಿಗೆ ಪರಿಚಯ ಮಾಡುತ್ತಿದೆ ಎಂದರು.
ಕಾರ್ಕಳದ ಆನೇಕೆರೆ ಒತ್ತುವರಿ ಆಗುತ್ತಿಲ್ಲ. ಅದರ ಸೌಂದರ್ಯ ಹೆಚ್ಚಿಸಲು ಕಾಮಗಾರಿ ನಡೆಸುತ್ತಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.