ಸುರತ್ಕಲ್ ಟೋಲ್ ನವೀಕರಣ: ಡಿವೈಎಫ್ಐ ಪ್ರತಿಭಟನೆ
Team Udayavani, Feb 17, 2018, 1:58 PM IST
ಸುರತ್ಕಲ್: ಸುರತ್ಕಲ್ ಟೋಲ್ಗೇಟ್ನ್ನು ಹಿಂಬಾಗಿಲ ಮೂಲಕ ಆರಂಭಿಸುವ ಹುನ್ನಾರ ನಡೆಯುತ್ತಿದ್ದು, ಇದೀಗ ಟೋಲ್ಗೇಟ್ ಸಮೀಪ ಉಪಾಹಾರ ಮಂದಿರ, ಶೌಚಾಲಯ ನಿರ್ಮಿಸುತ್ತಿರುವುದು ಸಾಕ್ಷಿಯಾಗಿದೆ. ಸುರತ್ಕಲ್ ಟೋಲ್ಗೇಟ್ನ್ನು ಯಾವುದೇ ಕಾರಣಕ್ಕೂ ಮುಂದುವರಿಸಬಾರದು ಎಂದು ಆಗ್ರಹಿಸಿ ಡಿವೈಎಫ್ಐ ವತಿಯಿಂದ ಸುರತ್ಕಲ್ ಟೋಲ್ಗೇಟ್ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಯಿತು.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಕನಿಷ್ಠ ದೂರದಲ್ಲಿ ಎರಡು ಟೋಲ್ಗೇಟ್ ನಿರ್ಮಾಣವಾಗಿದ್ದು ಸುರತ್ಕಲ್ ಟೋಲ್ಗೇಟ್ ಗುತ್ತಿಗೆ ಜುಲೈಗೆ ಕೊನೆಗೊಳ್ಳಲಿದೆ. ರಾಜ್ಯ ಸರಕಾರ ಟೋಲ್ ಮುಂದುವರಿಸಬಾರದು ಎಂದು ಹೇಳಿದೆ. ಆದರೆ ಕೇಂದ್ರ ಸರಕಾರ ಟೋಲ್ ರದ್ದು ಮಾಡುವ ವಿಚಾರದಲ್ಲಿ ಮೌನವಹಿಸಿದೆ. ಸ್ಥಳೀಯ ಸಂಸದರು ಹಾಗೂ ಶಾಸಕರು ಈ ಬಗ್ಗೆ ನಿರ್ಲಕ್ಷ್ಯ ತಾಳದೆ ತತ್ಕ್ಷಣ ಟೋಲ್ ಗೇಟ್ ಪರವಾನಿಗೆ ನವೀಕರಣ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಕಾರ್ಪೊರೇಟರ್ ರೇವತಿ ಪುತ್ರನ್, ಡಿವೈಎಫ್ಐ ಮುಖಂಡ ಇಮ್ತಿಯಾಝ್ ಆನ್ ಲೈನ್ ಟ್ಯಾಕ್ಸಿ ಎಸೋಸಿಯೇಷನ್ ಅಧ್ಯಕ್ಷ ಜಗರಾಜ್ ರೈ, ಡಿವೈಎಫ್ ಐ ಮುಖಂಡರಾದ ಸಾದಿಕ್ ಕಣ್ಣೂರು, ಬಿ.ಕೆ. ಮಕ್ಸೂದ್, ಪಂಚಾಯತ್ ಸದಸ್ಯ ಅಬೂಬಕರ್ ಬಾವಾ, ದ.ಸಂ.ಸ. ಮುಖಂಡ ಕಮಲಾಕ್ಷ ಸಾಲ್ಯಾನ್, ಸ್ಥಳೀಯರಾದ ರಾಜೇಶ್ ಪಡ್ರೆ, ರಶೀದ್ ಮುಕ್ಕ, ಶ್ರೀನಿವಾಸ್ ಹೊಸಬೆಟ್ಟು, ಹಂಝ ಮೈಂದಗುರಿ, ಮನೀಬ್ ಕೃಷ್ಣಾಪುರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್ವೆಲ್ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.