ಮಂಗಳೂರಿನ ವೆನ್ಲಾಕ್ ಬಳಿ ನಿರ್ಮಾಣವಾಗಲಿರುವ ಸರ್ಜಿಕಲ್ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ
Team Udayavani, Dec 14, 2020, 1:33 PM IST
ಮಂಗಳೂರು: ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ರೂ.37.52 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸರ್ಜಿಕಲ್ ಕಟ್ಟಡ ಕಾಮಗಾರಿಗೆ ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿಗಳು ವೇಗ ಪಡೆದುಕೊಳ್ಳುತ್ತಿವೆ. ದೇಶಲ್ಲಿಯೇ ಮಂಗಳೂರು ನಗರವನ್ನು ನಂಬರ್ ವನ್ ಮತ್ತು ಮಾದರಿ ನಗರವಾಗಿಸುವಲ್ಲಿ ಕೆಲಸ ಕಾರ್ಯಗಳು ಸಾಗುತ್ತಿವೆ ಎಂದರು.
ವೆನ್ಲಾಕ್ ಆಸ್ಪತ್ರೆ ಸುಸಜ್ಜಿತಗೊಳಿಸುವಲ್ಲಿ ಆದ್ಯತೆ ನೀಡಲಾಗಿದೆ. ಆದಷ್ಟು ಶೀಘ್ರ ನೂತನ ಕಟ್ಟಡ ನಿರ್ಮಾಣವಾಗುವುದರೊಂದಿಗೆ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ ಎಂದವರು ಹೇಳಿದರು.
ಇದನ್ನೂ ಓದಿ: ಕೋಡಿ ಗ್ರಾ.ಪಂ.ಚುನಾವಣೆ ಬಹಿಷ್ಕಾರ; ಮೂರು ನಾಮಪತ್ರಗಳು ವಾಪಸ್; ಕಣದಲ್ಲಿ ಶೂನ್ಯ ಅಭ್ಯರ್ಥಿಗಳು
ನೂತನ ಕಟ್ಟಡವು 12089 ಚ.ಮೀ. ವಿಸ್ತೀರ್ಣ ಹೊಂದಿದ್ದು, ಐದು ಮಹಡಿಗಳನ್ನು ಒಳಗೊಳ್ಳಲಿದೆ. ಕ್ಷ- ಕಿರಣ, ಸ್ಕ್ಯಾನಿಂಗ್ ಘಟಕ ಮತ್ತು ವಿಕಿರಣ ಶಾಸ್ತ್ರ, ಲಾಂಡ್ರಿ, ಔಷಧಾಲಯ, ಅಲ್ಟ್ರಾಸೌಂಡ್, ಪ್ರತ್ಯೇಕ ಕ್ಲೀನ್ ಹಾಗೂ ಪೋಸ್ಟ್ ಕಾರಿಡಾರ್, ಪ್ರೀ -ಆಪರೇಟಿವ್ ಹಾಗೂ ಪೋಸ್ಟ್ ಆಪರೇಟಿವ್ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೂತನ ಕಟ್ಟಡ ಒಳಗೊಳ್ಳಲಿದೆ.
ಇದನ್ನೂ ಓದಿ: ಪಲಿಮಾರು ಅಣೆಕಟ್ಟು ಬಳಿ ನೂರಾರು ಎಕ್ರೆ ಕೃಷಿ ಭೂಮಿ ಜಲಾವೃತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.