ಮಂಗಳೂರು ನಗರಾದ್ಯಂತ ಕಣ್ಗಾವಲು ; 15 ಜಂಕ್ಷನ್‌ಗಳಲ್ಲಿ “ಸ್ಮಾರ್ಟ್ ಸಿಸಿ ಕೆಮರಾ’
ಹದ್ದಿನ ಕಣ್ಣಿಡಲು ಅನುಕೂಲ; ಅತ್ಯಾಧುನಿಕ ಕೆಮರಾಗಳು
Team Udayavani, Jun 10, 2020, 3:12 PM IST
ಮಲ್ಲಿಕಟ್ಟೆ ಜಂಕ್ಷನ್ ಬಳಿ ಕಾರ್ಯ ನಿರ್ವಹಿಸುತ್ತಿರುವ ಸ್ಮಾರ್ಟ್ ಸಿಸಿ ಕೆಮರಾ.
ಮಹಾನಗರ: ನಗರವು ಅಭಿವೃದ್ಧಿ ಹೊಂದುತ್ತಿದೆ. ಹೀಗಿದ್ದಾಗ ನಗರದಲ್ಲಿ ಪ್ರತಿದಿನ ನಡೆಯುವ ಬೆಳವಣಿಗೆ ಬಗ್ಗೆ ಹದ್ದಿನ ಕಣ್ಣಿಡಲು ಅನುಕೂಲವಾಗುವಂತೆ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಸ್ಮಾರ್ಟ್ ಸಿಸಿ ಕೆಮರಾಗಳನ್ನು ಅಳವಡಿಸಲಾಗುತ್ತಿದೆ. ಮೊದಲನೇ ಹಂತದಲ್ಲಿ ನಗರದ 15 ಜಂಕ್ಷನ್‌ಗಳಲ್ಲಿ ಈ ರೀತಿಯ ಕೆಮರಾ ಅಳವಡಿಸಲಾಗುತ್ತಿದ್ದು, ಸದ್ಯ ನಗರದ ಮಲ್ಲಿಕಟ್ಟೆ ಬಳಿ ಸ್ಮಾರ್ಟ್ ಕೆಮರಾ ಪೋಲ್ ಅಳವಡಿಸಲಾಗಿದೆ. ನಗರದಲ್ಲಿ ನಡೆಯುವ ಕೊಲೆ, ಸುಲಿಗೆ ಸಹಿತ ಇನ್ನಿತರ ಅಪರಾಧಗಳ ರಹಸ್ಯ ಭೇದಿಸುವಲ್ಲಿ ಪೊಲೀಸರಿಗೆ ಅನುಕೂಲವಾಗಲಿದ್ದು, ಸ್ಮಾರ್ಟ್ ಸಿಟಿ ಯೋಜನೆಯ ಮೊದಲ ಹಂತದಲ್ಲಿ 15 ಕಡೆ ಪೋಲ್‌ಗಳಲ್ಲಿ 75 ಕೆಮರಾ ಅಳವಡಿಸುವ ಯೋಜನೆ ಹಾಕಲಾಗಿದೆ.
ಇದು ಅತ್ಯಾಧುನಿಕ ದರ್ಜೆಯ ಕೆಮರಾ ಆಗಿದ್ದು, ರಾತ್ರಿ ವೇಳೆಯ ಚಲನವನಗಳನ್ನು ಕೂಡ ಸೆರೆಹಿಡಿಯಬಲ್ಲದು. ಪ್ರತಿ ಜಂಕ್ಷನ್‌ಗಳಲ್ಲಿ ಅಳವಡಿಸಲಾದ ಪೋಲ್‌ನಲ್ಲಿ 360 ಡಿಗ್ರಿ ಸುತ್ತ ಸುತ್ತುವ ಕೆಮರಾ, ಅಲ್ಲದೆ ಪ್ರತ್ಯೇಕ 4 ಕೆಮರಾ ಇರಲಿದೆ. ಇವು ಸುತ್ತಮುತ್ತಲಿನ ಚಲನವಲನ ಸೆರೆಹಿಡಿಯಲು ಸಹಕಾರಿಯಾಗಲಿವೆ. ಇದೇ ಪೋಲ್‌ಗೆ ಸ್ಮಾರ್ಟ್ ಡಿಸ್ಪ್ಲೇ ಅಳವಡಿಸಲಾಗಿದ್ದು, ಇದರಲ್ಲಿ ಸಾರ್ವ ಜನಿಕರಿಗೆ ಮಾಹಿತಿ ಸಂದೇಶ ಬರಲಿದೆ. ಈ ಸ್ಮಾರ್ಟ್ ಪೋಲ್ ನಲ್ಲಿ ಆ್ಯಂಟೆನಾ ಬೂಸ್ಟರ್ ಮತ್ತು ಮೊಬೈಲ್ ಚಾರ್ಜಿಂಗ್ ಪ್ಲಗ್ ಪಾಯಿಂಟ್ ಇರಲಿದೆ.
ನಗರದಲ್ಲಿ ಅಳವಡಿಸಿದ ಎಲ್ಲ ಸಿ.ಸಿ. ಕೆಮರಾಗಳನ್ನು ಮಹಾನಗರ ಪಾಲಿಕೆ ಕಚೇರಿಯಲ್ಲಿರುವ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಮೇಲ್ವಿಚಾರಣೆ ಮಾಡ ಲಾಗುತ್ತದೆ. ಇದರ ಜತೆ ಬಹುಮುಖ್ಯ ಸಾರ್ವಜನಿಕ ಸ್ಥಳಗಳ ಸಿಸಿ ಕೆಮರಾಗಳ ಲಿಂಕ್ ಈ ಸೆಂಟರ್‌ನಲ್ಲೇ ಇರ ಲಿದೆ. ಮಂಗಳೂರಿನ ಮಾಲ್‌ಗಳು, ಪುರಭವನ, ಪಾಲಿಕೆ, ಪಾರ್ಕ್, ಅಂಗಡಿ ಗಳು, ಸಭಾಗೃಹ ಸಹಿತ ಸಾರ್ವ ಜನಿಕ ವ್ಯಾಪ್ತಿಯಲ್ಲಿ ಬಳಕೆಯಲ್ಲಿರುವ ಎಲ್ಲ ಸಿಸಿಟಿವಿ ಕೆಮರಾದ ಲಿಂಕ್ “ಸೆಂಟರ್’ ನ ಜತೆಗೆ ಲಿಂಕ್ ಆಗಲಿದೆ.
ಜಂಕ್ಷನ್‌ನಲ್ಲಿ ಎಸ್‌ಒಎಸ್ ಬಟನ್
15 ಜಂಕ್ಷನ್‌ಗಳಲ್ಲಿನ ಸ್ಮಾರ್ಟ್ ಪೋಲ್‌ನಲ್ಲಿ “ಎಸ್‌ಒಎಸ್’ ಬಟನ್ (ತುರ್ತು ಸಂದೇಶ) ಇರಲಿದೆ. ಆ ಪ್ರದೇಶದಲ್ಲಿ ಹೋಗುತ್ತಿರುವವರಿಗೆ, ಸಂದರ್ಭ ತುರ್ತು ಆವಶ್ಯಕತೆ ಇದ್ದರೆ ಆ ಬಟನ್ ಒತ್ತಬಹುದು. ಆಗ ಮಹಾನಗರ ಪಾಲಿಕೆಯ ಸ್ಮಾರ್ಟ್ ಸಿಟಿ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್‌ಗೆ ಕರೆ ಹೋಗುತ್ತದೆ. ಬಳಿಕ ಸಮ ಸ್ಯೆಗೆ ಅಧಿಕಾರಿಗಳು ಸ್ಪಂದಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ಯಾವೆಲ್ಲ ಜಂಕ್ಷನ್?
ಮೊದಲನೇ ಹಂತದಲ್ಲಿ ಮಲ್ಲಿಕಟ್ಟೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಬಿಜೈಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿ, ಪಂಪ್‌ವೆಲ್, ವಾಮಂಜೂರು, ಪಡೀಲ್, ಬಿಜೈ, ಬೆಂದೂರು, ಫಳ್ನೀರ್, ಮೋರ್ಗನ್ಸ್ ಗೇಟ್, ಕುಲಶೇಖರ-ಶಕ್ತಿನಗರ ಕ್ರಾಸ್, ಕೊಟ್ಟಾರ ಚೌಕಿ, ಕುಂಟಿಕಾನ, ರಾವ್ ಆ್ಯಂಡ್ ರಾವ್ ವೃತ್ತ, ಪದವಿನಂಗಡಿ, ಕಾವೂರು ಜಂಕ್ಷನ್‌ನಲ್ಲಿಯೂ ಈ ರೀತಿಯ ಸ್ಮಾರ್ಟ್ ಕೆಮರಾ ಅಳವಡಿಸಲಾಗುತ್ತದೆ.
5 ಲಕ್ಷ ರೂ. ವೆಚ್ಚ
ಮಂಗಳೂರು ನಗರದ 15 ಜಂಕ್ಷನ್‌ಗಳಲ್ಲಿ ಸ್ಮಾರ್ಟ್ ಸಿಸಿ ಕೆಮರಾ ಅಳವಡಿಸಲಾಗುತ್ತಿದ್ದು, ಒಂದು 360 ಡಿಗ್ರಿ ಸುತ್ತುವ ಸಿಸಿ ಕೆಮರಾ ಮತ್ತು 4 ಸಿಸಿ ಕೆಮರಾ ಇರಲಿದೆ. 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಸದ್ಯ ಮಲ್ಲಿ ಕಟ್ಟೆಯಲ್ಲಿ ನಿರ್ಮಾಣ ಪೂರ್ಣ ಗೊಂಡಿದೆ.
-ಮೊಹಮ್ಮದ್ ನಜೀರ್ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.